Bodyguard Film Review: ಥ್ರಿಲ್ಲರ್‌ ಕತೆಗೆ ಕಾಮಿಡಿ ಸ್ಪರ್ಶ

By Kannadaprabha News  |  First Published Apr 2, 2022, 12:40 PM IST

ದುಡಿಮೆ ಕಾರಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯ ತಂದೆ ಸ್ವದೇಶದಲ್ಲಿ ಇದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲ. ಪಾಶ್ರ್ವವಾಯುಗೆ ತುತ್ತಾಗಿರುವ ಅವರನ್ನು ನೋಡಿಕೊಳ್ಳುವುದಕ್ಕೆ ಒಬ್ಬರ ಅಗತ್ಯ ಇದೆ. 


ಆರ್‌ ಕೇಶವಮೂರ್ತಿ

ನಿರ್ದೇಶಕ ಪ್ರಭು ಶ್ರೀನಿವಾಸ್‌ ಪ್ರೇಕ್ಷಕರನ್ನು ನಗಿಸುವುದಕ್ಕಾಗಿಯೇ ಮಾಡಿರುವ ಸಿನಿಮಾ ‘ಬಾಡಿಗಾಡ್‌’ (Bodyguard). ಇವರ ಮನರಂಜನೆಯ ಗುರಿಗೆ ಮಠ ಗುರುಪ್ರಸಾದ್‌ (Guruprasad) ಕೂಡ ಜತೆಯಾಗಿದ್ದಾರೆ. ಪಾಶ್ರ್ವವಾಯುಗೆ ತುತ್ತಾಗಿರುವ ವ್ಯಕ್ತಿ, ಮುಂದೆ ಆತನ ಸಾವು, ಈ ಬಾಡಿಯನ್ನೇ ಇಟ್ಟುಕೊಂಡು ದುಡ್ಡು ಮಾಡಲು ಹೊರಡುವ ನಾಯಕ, ಕೊಲೆ ಆರೋಪದಲ್ಲಿ ನಾಯಕನ ಬಂಧನ, ಬಡ್ಡಿ ವಸೂಲಿಗೇ ಅಂತಲೇ ಹುಟ್ಟಿರುವ ವಿಲನ್‌, ಕೊನೆಗೆ ಸತ್ತವನಿಂದಲೇ ನಾಯಕನಿಗೆ ಆಗುವ ಅನುಕೂಲ, ಇದರ ನಡುವೆ ಒಂದು ಪ್ರೇಮ ಕತೆ... ಈ ಎಲ್ಲವನ್ನೂ ನೋಡುತ್ತ ಹೋದಾಗ ‘ಎಂಥ ಸಾವ್‌ ಕತೆ ಮಾರಾಯ ಇದು’ ಎಂದು ಅಚ್ಚರಿ ವ್ಯಕ್ತಪಡಿಸುತ್ತೀರಿ. 

Tap to resize

Latest Videos

ಕಿಕ್‌ ಕೊಡುವ ಗುರುಪ್ರಸಾದ್‌ ಅವರ ಡೈಲಾಗ್‌ಗಳೇ ಚಿತ್ರದ ಪ್ಲಸ್‌ ಪಾಯಿಂಟ್‌. ಲಾಜಿಕ್‌ ಜಾಗವಿಲ್ಲದ ಈ ಚಿತ್ರದಲ್ಲಿ ಮನೋಜ್‌ (Manoj), ಗುರುಪ್ರಸಾದ್‌, ಅಶ್ವಿನ್‌ ಹಾಸನ್‌ ಇಡೀ ಚಿತ್ರವನ್ನು ಮುನ್ನಡೆಸುತ್ತಾರೆ. ದುಡಿಮೆ ಕಾರಣಕ್ಕೆ ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿಯ ತಂದೆ ಸ್ವದೇಶದಲ್ಲಿ ಇದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲ. ಪಾಶ್ರ್ವವಾಯುಗೆ ತುತ್ತಾಗಿರುವ ಅವರನ್ನು ನೋಡಿಕೊಳ್ಳುವುದಕ್ಕೆ ಒಬ್ಬರ ಅಗತ್ಯ ಇದೆ. ಈ ಅಗತ್ಯವನ್ನು ಪೂರೈಸುವುದಕ್ಕೆ ನಾಯಕ ಆ ಮನೆ ಪ್ರವೇಶಿಸುತ್ತಾನೆ. ಆದರೆ ಆ ವ್ಯಕ್ತಿ ಇದ್ದಕ್ಕಿದ್ದಂತೆ ಸಾವು ಕಾಣುತ್ತಾರೆ. ಆ ಸತ್ತ ವಿಚಾರವನ್ನು ವಿದೇಶದಲ್ಲಿರುವ ಆತನ ಮಗನಿಗೆ ನಾಯಕ ತಿಳಿಸದೆ ಏನೆಲ್ಲ ಮಾಡುತ್ತಾನೆ, ಇಷ್ಟಕ್ಕೂ ಆತ ಸತ್ತಿದ್ದಾದರೂ ಹೇಗೆ ಎನ್ನುವ ಥ್ರಿಲ್ಲಿಂಗ್‌ ಕತೆ ತೆರೆದುಕೊಳ್ಳುತ್ತದೆ.

ಚಿತ್ರ: ಬಾಡಿಗಾಡ್‌

ತಾರಾಗಣ: ಮನೋಜ್‌, ಗುರುಪ್ರಸಾದ್‌, ಪದ್ಮಜಾ ರಾವ್‌, ದೀಪಿಕಾ ಆರಾದ್ಯ, ಅಶ್ವಿನ್‌ ಹಾಸನ್‌, ನಿರಂಜನ್‌

ನಿರ್ದೇಶನ: ಪ್ರಭು ಶ್ರೀನಿವಾಸ್‌

ರೇಟಿಂಗ್‌: 3

ಮನರಂಜನೆ ಜತೆಗೆ ಥ್ರಿಲ್ಲರ್‌ ಕ್ರೈಮ್‌ ನೆರಳು ಸೇರಿಕೊಂಡು ಕತೆ ಕೊನೆವರೆಗೂ ಪ್ರಯಾಣಿಸುತ್ತದೆ.  ಪ್ರಭು ಶ್ರೀನಿವಾಸ್‌ ಚಿತ್ರದ ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತೆಗೆದುಕೊಂಡು ಹೋಗಿದ್ದಾರೆ. ‘ಮೊಗ್ಗಿನ ಮನಸ್ಸು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಮನೋಜ್‌ ಗಮನಾರ್ಹ ನಟನೆ ನೀಡಿದ್ದಾರೆ. ಹೆಚ್ಚು ಖರ್ಚು ಇಲ್ಲದ, ಅದ್ದೂರಿ ಮೇಕಿಂಗ್‌ ಇಲ್ಲದ ತೀರಾ ಸರಳ ಮತ್ತು ಲಾಜಿಕ್‌ ಹೊರತಾದ ಕಾಮಿಡಿ ಚಿತ್ರ ನೋಡಬೇಕು ಎಂದುಕೊಳ್ಳುವವರು ‘ಬಾಡಿಗಾಡ್‌’ನನ್ನು ದರ್ಶನ ಮಾಡಿಕೊಳ್ಳಬಹುದು.

Ek Love Ya Film Review: ಪ್ರೀತಿಯ ಮತ್ತೊಂದು ಆಯಾಮ

ಬಾಡಿಗಾಡ್‌ ದೇಹದಿಂದ ದೇವರಾದ ಮಠ ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್. ಈ ಹಿಂದೆ ಮೊಗ್ಗಿನ ಮನಸ್ಸು ಮತ್ತು ಓ ಪ್ರೇಮವೇ ಚಿತ್ರದಲ್ಲಿ ನಟಿಸಿದ್ದ ಮನೋಜ್ ಈಗ ಬಾಡಿಗಾಡ್ ನಲ್ಲೂ ನಟಿಸಿದ್ದಾರೆ,ತಮ್ಮ ಸಂಭಾಷಣೆಯಲ್ಲೆ ಮನಮುಟ್ಟುತಿದ್ದ ಗುರುಪ್ರಾಸಾದ್ ಈಗ ನಟನೆಯಲ್ಲು ಮನಮುಟ್ಟಲಿದ್ದಾರೆ,ಜೀವ, ಪಾರಿಜಾತ, ಗಣಪ, ಕರಿಯ 2 ಚಿತ್ರದ ನಿರ್ದೇಶಕರಾದ ಪ್ರಭು ಶ್ರೀನಿವಾಸ್ ಅವರು ಒಂದು ಹೆಜ್ಜೆ ಮುಂದೆ ಇಟ್ಟು ನಿರ್ದೇಶನದ ಜೊತೆಗೆ ನಿರ್ಮಾಣವನ್ನು  ಮಾಡಿದ್ದಾರೆ. 

ಬಾಡಿಗಾಡ್ ಪ್ರಭು ಶ್ರೀನಿವಾಸ್ ನಿರ್ದೇಶನದ ಐದನೇ ಚಿತ್ರ.  ಇದೊಂದು ಬ್ಲಾಕ್ ಹ್ಯೂಮರ್ ವಿತ್ ಥ್ರಿಲ್ಲರ್ ಕಥೆಯಾಗಿದ್ದು, ಕಥೆಯೇ ಈ ಚಿತ್ರದ ಹೀರೋ ಎನ್ನುತ್ತಾರೆ ನಿರ್ದೇಶಕರು. ಸತ್ತಮೇಲೂ ಮಾತನಾಡುವ ಗುರುಪ್ರಸಾದ್ ಪಾತ್ರ, ಗುರುಪ್ರಸಾದ್ ರವರನ್ನು ನೋಡಿಕೊಳ್ಳಲೂ ಬಂದ ಮನೋಜ್ ಗೆ ಹಣದ ಸಮಸ್ಯೆ ಇದ್ದು ಸುಳ್ಳಿಂದ ಸುಳ್ಳುಗಳ ಸರಮಾಲೆ ಕಟ್ಟಿ ಬದುಕು ಸಮಸ್ಯೆಗಳ ಸಾಗರ ಮುಟ್ಟುತ್ತದೆ, ಪದ್ಮಜರಾವ್ ರವರು ಮುಖ್ಯಪಾತ್ರ ಒಂದನ್ನು ನಿಭಾಯಿಸಿದ್ದಾರೆ.

ಮೊದಲಭಾರಿ ದೀಪಿಕಾ ಆರಾಧ್ಯ ಎಂಬ ನವನಟಿ ನಟಿಸಿದ್ದಾರೆ, ಗಣಪ ಚಿತ್ರದ ಜನ ಪ್ರಸಿದ್ದ ಪಡೆದ ಹಾಡು 'ಮುದ್ದಾಗಿ ನೀನು ನನ್ನ ಕೂಗಿದೇ' ಮತ್ತು ಕರಿಯ 2 ಚಿತ್ರದ 'ಅನುಮಾನವೇ ಇಲ್ಲ ಅನುರಾಗಿ ನಾನೀಗ' ಮತ್ತು ಇನ್ನಿತರ ಹಾಡುಗಳ ಸಂಯೋಜಕ ಕರಣ್ ಬಿ ಕೃಪಾರವರ ಸಂಗೀತ ಈ ಚಿತ್ರಕ್ಕೂ ಇದೆ. ಅತಿಮುಖ್ಯವಾಗಿ ಕರ್ನಾಟಕ ರತ್ನ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್‌ರವರು ಕೊನೆಯದಾಗಿ 'ಆರೇಸ ಡಂಕಣಕ' ಎಂಬ ಹಾಡೊಂದನ್ನು ಹಾಡಿದ್ದಾರೆ.

click me!