RRR Review ರಾಜಮೌಳಿ ಚಿತ್ರಕ್ಕೆ ಎಷ್ಟು ರೇಟಿಂಗ್ ಕೊಟ್ಟಿದ್ದಾರೆ ಕನ್ನಡಿಗರು?

By Suvarna News  |  First Published Mar 25, 2022, 12:52 PM IST

ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಂಡ ಎಸ್‌ಎಸ್‌ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ. ರಾಮ್ ಚರಣ್‌ ಮತ್ತು ಜ್ಯೂ. ಎನ್‌ಟಿಆರ್‌ ಕಾಂಬಿನೇಷನ್‌ ಹೇಗಿದೆ?


ಬಾಹುಬಲಿ (Bhabubali) ಮತ್ತು ಕೆಜಿಎಫ್ ಚಾಪ್ಟರ್ 1 (KGF chapter 1) ಸಿನಿಮಾ ನಂತರ ಭಾರತೀಯ ಸಿನಿ ರಸಿಕರು ತುದಿಗಾಲಿನಲ್ಲಿ ನಿಂತು ವೀಕ್ಷಿಸಲು ಕಾಯುತ್ತಿದ್ದ ಸಿನಿಮಾ ಆರ್‌ಆರ್‌ಆರ್‌ (RRR). ಇಂದು ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿರುವ ಆರ್‌ಆರ್‌ಆರ್‌ ಸಿನಿಮಾದ ಹವಾ ಕರ್ನಾಟಕದಲ್ಲೂ ಹೆಚ್ಚಾಗಿದೆ. ಟೀಸರ್, ಟ್ರೈಲರ್, ಸಾಂಗ್ ಮತ್ತು ಪೋಸ್ಟರ್ ಲುಕ್‌ ಮೂಲಕ ದೊಡ್ಡ ಮಟ್ಟದಲ್ಲಿ ಹವಾ ಕ್ರಿಯೇಟ್ ಮಾಡಿರುವ ಈ ಸಿನಿಮಾಗೆ ಬಿಗ್ ಹೈಲೈಟ್‌ ಜ್ಯೂ.ಎನ್‌ಟಿಆರ್‌ ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು. 

ರಾಮರಾಜು ಮತ್ತು ಭೀಮಾ ದೆಹಲಿಯಲ್ಲಿ ಸ್ನೇಹಿತರಾಗುತ್ತಾರೆ. ಇಬ್ಬರು ಭೇಟಿಯಾದಾಗ ಅವರ ನಿಜವಾದ ಉದ್ದೇಶ ಬಯಲಾಗುತ್ತದೆ. ಸುಮಾರು 5 ವರ್ಷಗಳ ಶ್ರಮ ವಹಿಸಿ ರಾಜಮೌಳಿ ಮಾಡಿರುವ ಈ ಚಿತ್ರದಲ್ಲಿ ತುಂಬಾನೇ ವಾವ್ ಎಲಿಮೆಂಟ್‌ಗಳಿದೆ. ಫೈಯರ್‌ (Fire) ಆಗಿ angery ಯಂಗ್ ಪೊಲೀಸ್‌ ರಾಮರಾಜು ಉರ್ಫ್‌ ರಾಮ್ ಚರಣ್ (Ram Charan). ಬ್ರಿಟಿಷರಿಗೆ ಹೆದರುವ ಈತನಿಗೆ ಬಣ್ಣ ತಾರತಮ್ಯದಿಂದ ಸರಿಯಾದ ಗೌರವ ಸಿಗುವುದಿಲ್ಲ. ವಾಟರ್ (ನೀರು) ಆಗಿ ಸ್ವೀಟ್‌, ಸಿಂಪಲ್ ಮತ್ತು ಮುದ್ಧ ಯುವಕನಾಗಿ ಜ್ಯೂ.ಎನ್‌ಟಿಆರ್‌. ಭೀಮಾ ತುಂಬಾನೇ ಬಲಶಾಲಿಯಾಗಿದ್ದು ಜನರಿಗೆ ಒಳಿತು ಮಾಡುವ ಉದ್ದೇಶಕ್ಕೆ ಮಾತ್ರ ಬಲ ಉಪಯೋಗಿಸುತ್ತಾನೆ. ಭೀಮಾ ಗೋಂಡ ಟ್ರೈಬ್‌ಗೆ ಸೇರಿದವನು, ಅವರ ಜನಾಂಗದ ಯುವತಿಯರನ್ನು ಮಲ್ಲಿಯಿಂದ ರಕ್ಷಿಸಲು ಮುಂದಾಗುತ್ತಾನೆ.

Tap to resize

Latest Videos

1920ರಲ್ಲಿ ದಿಲ್ಲಿ ಹೇಗಿತ್ತು, ಭೀಮಾ nizams ವಿರುದ್ಧ ಹೇಗೆ ಹೋರಾಡುತ್ತಿದ್ದ, ಬ್ರಿಟಿಷರಿಗೆ ಹೇಗೆ ಎಚ್ಚರಿಕೆ ಕೊಡುತ್ತಿದ್ದ ಎನ್ನುವುದು ಸಿನಿಮಾ. ಸಿನಿಮಾದ ಮೊದಲ ಭಾಗದಲ್ಲಿ ಎಲ್ಲಾ ರೀತಿ ಎಮೋಷನ್‌ಗಳಿದೆ. ಸಾಂಗ್ ಡ್ಯಾನ್ಸ್‌, ಫ್ರೆಂಡ್‌ಶಿಪ್‌ ಹಾಗೂ ಭೀಮಾ ಜೆಮಿಫರ್‌ ಕಾಮಿಡಿ. ಕೆಲವೊಂದು ದೃಶ್ಯಗಳು ಅವಶ್ಯಕತೆಗೂ ಹೆಚ್ಚಿಗೆ ತೋರಿಸಲಾಗಿದೆ. ರಾಮ್‌ಚರಣ್ ಗರ್ಲ್‌ಫ್ರೆಂಡ್‌ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ ಎನ್ನಲಾಗಿದೆ.  ಸಿನಿಮಾ ಕೊನೆ ಕೊನೆಯಲ್ಲಿ ವೀಕ್ಷಕರಿಗೆ ಸರ್ಪ್ರೈಸ್‌ ಕೊಡುತ್ತದೆ.

James vs RRR ಸಿನಿಮಾಗಳ ವಿವಾದ ಸುಖಾಂತ್ಯ: ಕಿಶೋರ್‌ ಪತ್ತಿಕೊಂಡ

ಕಮರ್ಷಿಯಲ್, ಆಕ್ಷನ್ ಡ್ರಾಮ ಸಿನಿಮಾದ ಪ್ರತಿಯೊಂದು ದೃಶ್ಯವನ್ನು ವೀಕ್ಷಕರು ಕಣ್ಣು ಮುಚ್ಚದೆ ನೋಡುತ್ತಾರೆ. ಜ್ಯೂ.ಎನ್‌ಟಿಆರ್‌ ವೃತ್ತಿ ಜೀವನದಲ್ಲಿ ಇದೊಂದು ಬೆಸ್ಟ್‌ ಸಿನಿಮಾ ಎನ್ನುತ್ತಿದ್ದಾರೆ ಸಿನಿ ರಸಿಕರು. ಒಲಿವಿಯಾ ಮೋರಿಸ್, ಸಮುದ್ರಕನಿ, ಅಜಯ್ ದೇವಗನ್, ಶ್ರಿಯಾ ಸರನ್ ತಮ್ಮ ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾರೆ. 'ಈ ಸಿನಿಮಾ ಎಮೋಷನಲ್‌ ರೋಲರ್‌ ಕೋಸ್ಟರ್ ಆಗಿರುತ್ತದೆ. ನಿಮ್ಮ ಸೀಟ್‌ಗಳನ್ನು ನೀವು ಹಿಡಿದಿಟ್ಟುಕೊಳ್ಳುವ ಸಂದರ್ಭಗಳಿವೆ. ಸಿನಿಮಾ ನೋಡಿ ನೀವು ನಗುತ್ತೀರಿ, ಅಳುತ್ತೀರಿ ಕೊನೆಗೆ ನೀವೇ ಅನೇಕ ರೀತಿಯಲ್ಲಿ ಬದಲಾಗುತ್ತೀರಿ' ಎಂದು ಜ್ಯೂ. ಎನ್‌ಟಿಆರ್‌ ಹೇಳಿದ್ದಾರೆ.

RRR ಕನ್ನಡ ವರ್ಷನ್ನಿಗೆ ಜಾಗ ಕೊಡಿ!

'ನಾನು ಮೊದಲ ದಿನವೇ ಎಲ್ಲಾ ಭಾಷೆಗಳಿಂದ 100 ಕೋಟಿ ರೂಪಾಯಿ ದಾಖಲೆ ಮಾಡುತ್ತದೆ ಎಂದು ನಂಬಿರುವೆ. ಭಾರತದಲ್ಲಿ ಹೊಸ ರೆಕಾರ್ಡ್ ಬ್ರೇಕ್ ಆಗುತ್ತದೆ' ಎಂದು ಸಿನಿಮಾ ನಿರ್ಮಾಪಕ ಗಿರಿಶ್‌ ಹೇಳಿದ್ದಾರೆ. 'ಆರ್‌ಆರ್‌ಆರ್‌ ಮೇಕರ್‌ಗಳಿಂದ ನಮಗೆ ಸಣ್ಣ ಪುಟ್ಟ ಮಾಹಿತಿ ಲಭ್ಯವಾಗಿದೆ. ಆ ಮಾಹಿತಿ ಪ್ರಕಾರ ನಿರ್ಮಾಪಕರು ಸಿನಿಮಾ ಮಾಡಲು 336 ಕೋಟಿ ಬಂಡವಾಳ ಹಾಕಿದ್ದಾರೆ. ಇದರಲ್ಲಿGST, ನಟ-ನಟಿಯರ ಸಂಭಾವನೆ ಸೇರಿಕೊಂಡಿದೆ. ಸಿನಿಮಾದ ಬಗ್ಗೆ ಮಾಹಿತಿ ಮುಖ್ಯಮಂತ್ರಿಗಳಿಗೆ ನೀಡುತ್ತೇವೆ. ಚಿತ್ರದ ಟಿಕೆಟ್‌ ಬೆಲೆ ಹೆಚ್ಚಿಸಬೇಕು ಎನ್ನುವುದರ ಬಗ್ಗೆ ಅವರು ನಿರ್ಧಾರ ಮಾಡುತ್ತಾರೆ' ಎಂದು ಆಂದ್ರ ಪ್ರದೇಶ ಸಚಿವ ಪೆರ್ನಿ ನಾನಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಹೈಪ್‌ ಹೆಚ್ಚಿದೆ. ಕೆಲವರು 3.5/5 ಕೊಡಬಹುದು ಎಂದಿದ್ದಾರೆ ಇನ್ನೂ ಕೆಲವರು 4/5 ಎನ್ನುತ್ತಿದ್ದಾರೆ. ಬಾಕ್ಸ್‌ ಆಫೀಸಿನಲ್ಲಿ ಸಿನಿಮಾ ಗೆಲ್ಲಿಸುವುದು ವೀಕ್ಷಕರ ಕೈಯಲ್ಲಿದೆ. 

click me!