The Vacant House Review: ನಿಗೂಢತೆ, ಗ್ಲಾಮರ್, ಅಂಜಿಕೆ ಅಡಗಿಸಿಟ್ಟಿರುವ ವೇಕೆಂಟ್ ಹೌಸ್

Published : Nov 18, 2023, 10:38 AM IST
The Vacant House Review: ನಿಗೂಢತೆ, ಗ್ಲಾಮರ್, ಅಂಜಿಕೆ ಅಡಗಿಸಿಟ್ಟಿರುವ ವೇಕೆಂಟ್ ಹೌಸ್

ಸಾರಾಂಶ

ಎಸ್ತರ್ ನರೋನ್ಹಾ, ಸಂದೀಪ್ ಮಲಾನಿ, ಶ್ರೇಯಸ್ ಚಿಂಗಾ, ಸೀಮಾ ನಟಿಸಿರುವ ದಿ ವೇಕೆಂಟ್ ಹೌಸ್ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ...

ಆರೆಸ್

ಖಾಲಿ ಮನೆಯ ನಿಗೂಢತೆ, ಸಂಬಂಧಗಳ ಕೌತುಕ, ತಿರುವು ಮುರುವುಗಳಲ್ಲಿ ಕುತೂಹಲ, ಚೆಂದಕ್ಕೆ ಗ್ಲಾಮರ್‌, ದಿಗಿಲು ಬೀಳುವುದಕ್ಕೆ ಹಾರರ್ ಎಲ್ಲವನ್ನೂ ಅಡಗಿಸಿಟ್ಟುಕೊಂಡಿರುವ ಕೊಂಚ ವಿಭಿನ್ನ ಮತ್ತು ಶ್ಲಾಘನೀಯ ಪ್ರಯತ್ನ ಇದು.

ಹೆಸರಲ್ಲೇ ಕತೆಯ ಸುಳಿವಿದೆ. ಅಲ್ಲೊಂದು ಒಂಟಿ ಮನೆ. ಖಾಲಿ ಮನೆ. ಖಾಲಿ ಮನೆ ಎಂದ ತಕ್ಷಣವೇ ಅಲ್ಲೊಂದು ಕೌತುಕ ಅಡಗಿಕೊಂಡಿರಬೇಕು ಎಂಬುದು ಖಾತ್ರಿಯಾಗುತ್ತದೆ. ಇಲ್ಲದಿದ್ದರೆ ಆ ಖಾಲಿ ಮನೆಗೆ ಅರ್ಥವಿಲ್ಲ. ಅಂಥದ್ದೊಂದು ಭಯದಾಯಕ ಮನೆಗೆ ಇಬ್ಬರ ಆಗಮನ. ಆ ಇಬ್ಬರು ಯಾರೆಂಬ ಹುಡುಕಾಟದಲ್ಲಿ ಮೂರನೆಯವರ ಪ್ರವೇಶ. ಅಲ್ಲಿಗೆ ಕಥೆಯ ಆರಂಭ.

ಚಿತ್ರ: ದಿ ವೇಕೆಂಟ್ ಹೌಸ್

ನಿರ್ದೇಶನ: ಎಸ್ತರ್ ನರೋನ್ಹಾ

ತಾರಾಗಣ: ಎಸ್ತರ್ ನರೋನ್ಹಾ, ಸಂದೀಪ್ ಮಲಾನಿ, ಶ್ರೇಯಸ್ ಚಿಂಗಾ, ಸೀಮಾ

SAPTA SAGARADAACHE ELLO SIDE B REVIEW: ಅವಳು ಸುಖವಾಗಿರಲಿ ಎಂದು ಹಾರೈಸುತ್ತಾ...

ನಿರ್ದೇಶಕಿ ಕತೆಯನ್ನು ಮುನ್ನಡೆಸಲು ಇಲ್ಲೊಂದು ಅನಾಹುತವನ್ನು ತರುತ್ತಾರೆ. ಅಲ್ಲಿಂದ ಮುಂದೆ ಕತೆ ಹರಿವು ಸರಾಗ. ನಿರೂಪಣೆಯಲ್ಲಿ ಕುತೂಹಲ, ಆತಂಕ, ಭಯ, ನಿಗೂಢತೆ ಎಲ್ಲವನ್ನೂ ದಾಟಿಸುವುದಕ್ಕೆ ನಿರ್ದೇಶಕಿ ಸಕಲ ಪ್ರಯತ್ನವನ್ನೂ ಮಾಡಿದ್ದಾರೆ. ಅದರ ಜೊತೆಗೆ ರುಚಿಗೆ ತಕ್ಕಷ್ಟು ಪ್ರಣಯ ಕಾಲ, ಭಾವನಾತ್ಮಕತೆಯನ್ನು ಕತೆಯೊಳಗೆ ತಂದಿದ್ದಾರೆ. ಅವೆಲ್ಲವೂ ಅದರದರ ಪಾಡಿಗೆ ಕತೆಯನ್ನು ಗೆಲ್ಲಿಸುವ ಪ್ರಯತ್ನದಲ್ಲಿ ನಿರತವಾಗಿವೆ.

Tagaru Palya Review: ಭಾಷೆ ಸೊಗಸು, ದೃಶ್ಯ ಚಂದ, ಕಥನ ವಿಶಿಷ್ಟ

ಕತೆ ಸರ‍ಳವೆಂಬಂತೆ ಕಂಡರೂ ಭಾವಗಳಲ್ಲಿ, ಸಂಬಂಧಗಳಲ್ಲಿ ಸಂಕೀರ್ಣತೆಯಿದೆ. ಅದನ್ನು ಕಟ್ಟಿಕೊಡುವ ಪ್ರಯತ್ನದಲ್ಲಿ ನಿರ್ದೇಶಕಿ ಗೆಲುವಿನ ಪಥದಲ್ಲಿ ಇದ್ದಾರೆ. ನಿರ್ದೇಶನದಲ್ಲಿ ಭರವಸೆ ಹುಟ್ಟಿಸುವ ಎಸ್ತರ್ ತೆರೆ ಮೇಲೆ ಮುದ್ದಾಗಿ ಕಾಣಿಸುತ್ತಾರೆ. ಬರವಣಿಗೆ ಮತ್ತು ನಟನೆ ಎರಡರಲ್ಲೂ ತೊಡಗಿಸಿಕೊಂಡು ಮೆಚ್ಚುಗೆ ಗಳಿಸುತ್ತಾರೆ. ನರೇಂದ್ರ ಗೌಡ ಛಾಯಾಗ್ರಹಣ ಸೊಗಸಾಗಿದೆ. ವೇಗದ ಜಗತ್ತಿನಲ್ಲಿ ಸ್ವಲ್ಪ ಸಾವಧಾನದ ನಿರೂಪಣೆ ಇರುವುದು ಈ ಸಿನಿಮಾದ ವಿಶೇಷತೆ. ಇದೊಂದು ಕುತೂಹಲ ಹುಟ್ಟಿಸುವ ವಿಶಿಷ್ಟ ಹಾರರ್, ಥ್ರಿಲ್ಲರ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ