Pampa Review ಕನ್ನಡ ಪ್ರೊಫೆಸರ್‌ ಹತ್ಯೆಯ ಪ್ರಸಂಗ

By Kannadaprabha News  |  First Published Sep 18, 2022, 8:57 AM IST

ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಕೃಷ್ಣಾ ಭಟ್, ರಾಘವ್ ನಾಯಕ್ ಮತ್ತು ಅರವಿಂದ್ ನಟಿಸಿರುವ ಪಂಪ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿದೆ?


ಕೇಶವ

ಕನ್ನಡಕ್ಕಾಗಿ ಹೋರಾಡು ಕನ್ನಡದ ಕಂದ ಎನ್ನುವ ಮಾತನ್ನು ಸದಾ ಪಾಲಿಸುತ್ತಾ ಬರುವ ಕನ್ನಡ ಪ್ರೊಫೆಸರ್‌ ಹತ್ಯೆಯ ಸುತ್ತ ‘ಪಂಪ’ ಸಿನಿಮಾ ಸಾಗುತ್ತದೆ. ಇಲ್ಲಿ ಪಂಪ ಅಂದರೆ ಆದಿ ಕವಿ ಅಲ್ಲ. ಪಂಚಳ್ಳಿ ಪರಶಿವಮೂರ್ತಿ ಎಂಬುದು. ಪಂಪ ಅವರು ಕನ್ನಡಕ್ಕಾಗಿ ಧ್ವನಿ ಎತ್ತು, ಹೋರಾಡುವ ಶಕ್ತಿಯಾಗಿರುತ್ತಾರೆ. ಈ ನಡುವೆ ಅವರ ಹತ್ಯೆ ನಡೆದು ಸರ್ಕಾರ ಸಂಕಷ್ಟಕ್ಕೆ ಸಿಲುಕುತ್ತದೆ. ಮುಂದೇನು ಎಂಬುದು ಸಿನಿಮಾ. ಮರ್ಡರ್‌ ಮಿಸ್ಟ್ರಿ, ಸಾಹಿತ್ಯ, ಹೋರಾಟ, ಪ್ರೀತಿ- ಪ್ರೇಮದ ಅಂಶಗಳೇ ಚಿತ್ರದ ಪ್ರಧಾನ.

Tap to resize

Latest Videos

ತಾರಾಗಣ: ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಕೃಷ್ಣಾ ಭಟ್‌, ರಾಘವ್‌ ನಾಯಕ್‌, ಅರವಿಂದ್‌, ಆದಿತ್ಯ ಶೆಟ್ಟಿ, ರೇಣುಕಾ, ರವಿಭಟ್‌, ಶ್ರೀನಿವಾಸ ಪ್ರಭು

ನಿರ್ದೇಶನ: ಎಸ್‌ ಮಹೇಂದರ್‌

ರೇಟಿಂಗ್‌: 2

MONSOON RAGA REVIEW ಒಂದೇ ದಾರಿಯಲ್ಲಿ ನಾಲ್ಕು ಪ್ರೇಮ ಕತೆಗಳು

ಆದರೆ, ಪಂಪ ಅವರ ಸುತ್ತ ಗಾಸಿಪ್‌ ಹಬ್ಬುತ್ತದೆ. ಅಂದರೆ ತಮ್ಮದೇ ಕಾಲೇಜಿನ ವಿದ್ಯಾರ್ಥಿನಿ ಜತೆಗೆ ಪಂಪ ಸಂಬಂಧ ಇಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ಚಿತ್ರಕ್ಕೊಂದು ತಿರುವು ಕೊಡುವ ಜತೆಗೆ ಅದನ್ನು ಕ್ರೈಮ್‌ಗೂ ಲಿಂಕ್‌ ಮಾಡುತ್ತಾರೆ ನಿರ್ದೇಶಕ ಎಸ್‌ ಮಹೇಂದರ್‌. ಕನ್ನಡ ಹೋರಾಟ, ಪ್ರೊಫೆಸರ್‌ ಹತ್ಯೆ, ಸರ್ಕಾರದ ನಡೆ ಇತ್ಯಾದಿ ಅಂಶಗಳು ನೈಜ ಘಟನೆಗಳಿಗೆ ತಳುಕು ಹಾಕಿದಂತೆ ಕಂಡರೂ ಅತ್ಯಂತ ಪೇಲವ ಚಿತ್ರಕಥೆ, ಪಾತ್ರಗಳ ಸಂಯೋಜನೆಯಿಂದ ‘ಪಂಪ’ ಸಿನಿಮಾ ಕಳಪೆಯಾಗಿ ಮೂಡಿ ಬಂದಿದೆ. ಹೀಗಾಗಿ ಎಸ್‌ ಮಹೇಂದರ್‌ ನಿರ್ದೇಶನ, ಅದ್ಭುತ ಕಲಾವಿದರು, ಹಂಸಲೇಖ ಸಂಗೀತ ಇರುವ ಸಿನಿಮಾ ಎಂಬುದುಕೊಂಡು ಹೋದವರಿಗೆ ನಿರಾಸೆ ಖಂಡಿತ.

Lucky Man Review ಲಕ್ಕಿಮ್ಯಾನ್‌ ಚಿತ್ರದ ನಿಜವಾದ ಅದೃಷ್ಟಪುನೀತ್‌

ಪಾತ್ರವನ್ನು ಡೈಲಾಗ್‌ಗಳಿಂದ ಕನ್ನಡ ಹೋರಾಟಗಾರನನ್ನಾಗಿಸಿರುವುದು, ಚಿತ್ರಕ್ಕೆ ಸಂಬಂಧವಿಲ್ಲದ ಕನ್ನಡದ ಕಾರ್ಯಕ್ರಮಗಳನ್ನು ಚಿತ್ರದಲ್ಲಿ ತೋರಿಸಿರುವುದು ನೋಡಿದಾಗ ಇಡೀ ಸಿನಿಮಾ ಸೋಷಿಯಲ್‌ ಮೀಡಿಯಾದಲ್ಲಿ ಬರುವ ವಿಡಿಯೋದಂತೆ ಸಾಗುತ್ತದೆ. ಭಾಷೆಯ ಸುತ್ತ ಹೋರಾಟದ ಧ್ವನಿ, ಉತ್ತರ ಮತ್ತು ದಕ್ಷಿಣ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಹೊತ್ತಿನಲ್ಲಿ ಬಂದಿರುವ ‘ಪಂಪ’ ಚಿತ್ರ ಅದ್ಯಾವುದನ್ನೂ ನೆನಪಿಸಲ್ಲ. ಪ್ರಬುದ್ಧ ಕಲಾವಿದರಾದ ರವಿ ಭಟ್‌, ಶ್ರೀನಿವಾಸ ಪ್ರಭು, ಅರವಿಂದ್‌ ರಾವ್‌ ಹಾಗೂ ನೋಡಲು ಮತ್ತು ಪಾತ್ರಕ್ಕೆ ಜೀವ ತುಂಬಬಹುದಾದ ಕೀರ್ತಿ ಭಾನು, ಸಂಗೀತಾ ಶೃಂಗೇರಿ, ಕೃಷ್ಣಾ ಭಟ್‌, ರಾಘವ್‌ ನಾಯಕ್‌ರಂತಹ ಪ್ರತಿಭಾವಂತ ಹೊಸ ನಟ- ನಟಿಯರು ಇದ್ದಾಗಲೂ ಸಿನಿಮಾ ನೋಡಗರಿಗೆ ಹತ್ತಿರವಾಗಲ್ಲ. ಅವಸರಕ್ಕೆ ಮಾಡಿದ ಅಡುಗೆಯನ್ನು ಹೇಗೋ ಬಡಿಸಿದರೆ ಆಯಿತು ಎನ್ನುವಂತೆ ‘ಪಂಪ’ ಚಿತ್ರವನ್ನು ಸುತ್ತಿ ಪ್ರೇಕ್ಷಕರ ಮುಂದೆ ಇಡಲಾಗಿದೆ.

click me!