Nam Naani Maduve Prasanga 1 Review: ಸಮಸ್ಯೆ ಸಮಾಧಾನಗಳ ಮಧ್ಯೆ ನಗೆ ಬಾಂಬ್‌

By Kannadaprabha News  |  First Published Apr 10, 2023, 9:40 AM IST

ಹೇಮಂತ್‌ ಹೆಗಡೆ, ಗೀತಾಂಜಲಿ, ರಾಜೇಶ್‌ ನಟರಂಗ, ಪದ್ಮಜಾ ರಾವ್‌ ಅಭಿನಯಿಸಿರುವ ನಮ್‌ ನಾಣಿ ಮದ್ವೆ ಪ್ರಸಂಗ 1 ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? ಭಾಗ ಎರಡು ಯಾಕೆ? 


ಪೀಕೆ

ಒಂದು ಸಮುದಾಯದ ಗಂಡುಮಕ್ಕಳ ಸಮಸ್ಯೆಯನ್ನು ನಗೆ ಉಕ್ಕಿಸುವಂತೆ ಪ್ರಸ್ತುತಪಡಿಸುವ ಸಿನಿಮಾ ‘ನಮ್‌ ನಾಣಿ ಮದ್ವೆ ಪ್ರಸಂಗ’. ಉತ್ತರ ಕನ್ನಡ ಭಾಗದ ಹವ್ಯಕ, ಕೃಷಿಕ ಹುಡುಗನÜ ಮದುವೆ ಪ್ರಯತ್ನ ಸಿನಿಮಾದ ಕೇಂದ್ರ. ವಯಸ್ಸು 37 ದಾಟಿದೆ, ಕೃಷಿಕ, ಸಾಮಾನ್ಯ ಬುದ್ಧಿಮತ್ತೆ. ಹೊಟ್ಟೆಗೆ ಹಿಟ್ಟಿಗೆ ಕೊರತೆಯಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದ ಹುಡುಗಿಯ ಕೊರತೆಯಂತೂ ಇದೆ. ಆ ಕೊರತೆ ಯಾಕೆ ಉದ್ಭವಿಸಿದೆ, ಹುಡುಗಿ ಸಿಗದ ಮೂವತ್ತೇಳು ದಾಟಿದ ಹುಡುಗರ ಪಡಿಪಾಟಲುಗಳೇನು ಅನ್ನೋದನ್ನು ಸಿನಿಮಾ ಹಾಸ್ಯದ ಚೌಕಟ್ಟಿನಲ್ಲಿ ಪ್ರಸ್ತುತಪಡಿಸುತ್ತದೆ. ಕಾಮಿಡಿ ಪ್ರಧಾನವಾಗಿರುವ ಕಾರಣ ಸಮಸ್ಯೆಯನ್ನು ಸೂಕ್ಷ್ಮವಾಗಿ, ಆಳವಾಗಿ ನೋಡುವ ಪ್ರಯತ್ನ ಮಾಡದೇ ಇರೋದನ್ನು ಕೊರತೆ ಅನ್ನಲಾಗದೇನೋ. ಹೀಗಾಗಿ ಹಾಸ್ಯದ ಮರ್ಜಿಗೆ ಬಿದ್ದು ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಶೇಡ್‌ನಲ್ಲೇ ಕಥೆ ಒಪ್ಪಿಕೊಳ್ಳದೇ ವಿಧಿಯಿಲ್ಲ.

Tap to resize

Latest Videos

ತಾರಾಗಣ: ಹೇಮಂತ್‌ ಹೆಗಡೆ, ಗೀತಾಂಜಲಿ, ರಾಜೇಶ್‌ ನಟರಂಗ, ಪದ್ಮಜಾ ರಾವ್‌

ನಿರ್ದೇಶನ: ಹೇಮಂತ್‌ ಹೆಗಡೆ

ಈ ಸಿನಿಮಾ ಎರಡು ಭಾಗಗಳಲ್ಲಿ ಬರುತ್ತಿದೆ. ಈಗ ಬಿಡುಗಡೆ ಆಗಿರೋದು ಮೊದಲ ಭಾಗ. ಈ ಕಾರಣಕ್ಕೆ ಇಂಟರ್‌ವಲ್‌ಗಿಂತ ಮೊದಲಿನ ಭಾಗದಲ್ಲಿ ಹೇಳಿಕೊಳ್ಳುವಂಥಾ ಕಥೆ, ಪ್ರಸಂಗ ಏನೂ ಇಲ್ಲದಿದ್ದರೂ ಅನಿವಾರ್ಯವಾಗಿ ಕೂರಬೇಕು. ಸಹನೆಯಿಟ್ಟು ಕೂತರೆ ಎರಡನೇ ಭಾಗದಲ್ಲಿ ಮನರಂಜನೆಗೆ ಕೊರತೆಯಿಲ್ಲ. ಎದುರಾಗುವ ಪ್ರಸಂಗಗಳು, ಅದರಿಂದ ಉದ್ಭವವಾಗುವ ಹಾಸ್ಯ ಸನ್ನಿವೇಶಗಳನ್ನು ಆಗ್ರ್ಯಾನಿಕ್‌ ಆಗಿ ನಗೆ ಉಕ್ಕಿಸುವಂತೆ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

GURUDEV HOYSALA REVIEW: ಅಬ್ಬರದ ಜೊತೆ ಪಿಸುಮಾತು ಧರಿಸಿರುವ ಪೊಲೀಸ್‌ ಕಥನ

ಪದ್ಮಜಾ ರಾವ್‌ ಹವ್ಯಕ ಭಾಷೆ ಮಾತಾಡಲು ಸರ್ಕಸ್ಸು ಮಾಡೋದು ಗೊತ್ತಾಗುತ್ತೆ. ಇವರ ಮಾತಿನ ಎಷ್ಟೋ ಕಡೆ ಹವ್ಯಕ ಕನ್ನಡ ಬೆಂಗಳೂರು ಕನ್ನಡವಾಗಿ ಬದಲಾಗುತ್ತೆ.

Kabza Review ಅದ್ದೂರಿ ಚಿತ್ರಿಕೆ ಅಗಾಧ ಕಥನ

ಭಾಷೆಯ ಕಾರಣಕ್ಕೆ ಇವರ ನಟನೆ ಕೊಂಚ ಇರಿಸುಮುರಿಸು ತರುತ್ತದೆ. ಹೇಮಂತ್‌ ಹೆಗಡೆ ಪಕ್ಕಾ ಹವ್ಯಕ ಮಾಣಿಯಾಗಿ ನಗೆ ಉಕ್ಕಿಸುತ್ತಾರೆ. ಮಧು ಹೆಗಡೆ, ರಾಜೇಶ್‌ ನಟರಂಗ ಹಾಸ್ಯದಲ್ಲಿ ಕಚಗುಳಿ ಇಡುತ್ತಾರೆ. ಶ್ರೇಯಾ, ಶ್ರುತಿ ನಟನೆಯಲ್ಲಿ ಸಹಜತೆ ಇದೆ. ಒಂದೆರಡು ಏರಿಯಲ್‌ ಶಾಟ್‌ ಬಿಟ್ಟರೆ ಮಲೆನಾಡಿನ ಪರಿಸರ ಹೆಚ್ಚು ದಾಖಲಾಗಿಲ್ಲ. ಸಿನಿಮಾಟೋಗ್ರಫಿ ನಿರಾಸೆ ಮೂಡಿಸುತ್ತದೆ. ಸಂಭಾಷಣೆ ಮುದ ನೀಡುತ್ತೆ. ಹೊಟ್ಟೆತುಂಬ ನಗಬೇಕು ಅನ್ನೋರು ಈ ಸಿನಿಮಾದ ಇಂಟರ್‌ವಲ್‌ ನಂತರದ ಭಾಗ ನೋಡಬಹುದು.

 

click me!