Modala Miditha Review: ಮೊದಲ ಮಿಡಿತಕ್ಕೆ ಪ್ರೇಕ್ಷಕ ಸ್ತಂಭೀಭೂತ

Published : Dec 17, 2022, 09:16 AM IST
Modala Miditha Review: ಮೊದಲ ಮಿಡಿತಕ್ಕೆ ಪ್ರೇಕ್ಷಕ ಸ್ತಂಭೀಭೂತ

ಸಾರಾಂಶ

ಫ್ಯಾಮಿಲಿ, ಪ್ರೀತಿ-ಪ್ರೇಮ ಹಾಗೂ ಸೆಂಟಿಮೆಂಟ್‌ ಕತೆಯನ್ನು ಒಳಗೊಂಡ ಪ್ರೇಮ ಕಥಾ ಹಂದರದ ಸಿನಿಮಾ ‘ಮೊದಲ ಮಿಡಿತ’ ಇಂದು ಬಿಡುಗಡೆಯಾಗಿದೆ.

ಪೀಕೆ

ಮೊದಲ ಮಿಡಿತ ಚಿತ್ರ ಲವ್‌ ಎಟ್‌ ಫಸ್ಟ್‌ ಸೈಟ್‌ ಅಂತೀವಲ್ಲಾ, ಹಾಗೆ ಮೊದಲ ನೋಟದಲ್ಲೇ ಪ್ರೇಮಿಗಳಾದವರ ಕಥೆ ಈ ಚಿತ್ರದ್ದು. ಪ್ರೇಮಕ್ಕೆ ಬರುವ ಅಡೆತಡೆಗಳು, ಇದರಿಂದ ಪ್ರೇಮಿಗಳು ಪಡುವ ಪಾಡು, ಕೊನೆಗೂ ಪ್ರೇಮ ಗೆದ್ದಿತಾ ಅನ್ನೋದು ಚಿತ್ರದ ಒನ್‌ಲೈನ್‌.

ಶ್ರೀಮಂತ ಹುಡುಗ, ಮನಸ್ಸಲ್ಲಿ ಬಯಸಿದ್ದನ್ನು ಕ್ಷಣದಲ್ಲಿ ಪಡೆಯುವ ಅದೃಷ್ಟವಂತ ರಾಹುಲ್‌. ಸುರಿವ ಮಳೆಯಲ್ಲಿ ಆತನಿಗೆ ಕೊಡೆ ಹಿಡಿದವಳು ಪ್ರಿಯಾ. ಲವ್‌ ಎಟ್‌ ಫಸ್ಟ್‌ ಸೈಟ್‌. ಮೊದಲ ನೋಟದಲ್ಲೇ ಹುಡುಗಿ ಮನಸ್ಸು ಕದಿಯುತ್ತಾಳೆ. ಒಮ್ಮೆ ಸಿಕ್ಕವಳು ಮತ್ತೆ ಮತ್ತೆ ಸಿಗುತ್ತಾಳೆ. ನಡುವೆ ಸ್ನೇಹಿತರ ತರಲೆಗಳು, ರೌಡಿಗಳ ಫೈಟಿಂಗ್‌, ಜೋರಾಗಿ ಆಕಳಿಸುತ್ತಾ ಯಾವಾಗ ಇಂಟರ್‌ವಲ್‌ ಬರುತ್ತಪ್ಪಾ ಅಂತ ಆಗಾಗ ಮೊಬೈಲ್‌ ನೋಡಿಕೊಳ್ಳುವ ಪ್ರೇಕ್ಷಕರು.

BOND RAVI FILM REVIEW: ಅಭಿನಯ ಸೂಪರು ಕತೆ ಏರುಪೇರು

ತಾರಾಗಣ: ನಿಮೀಶ್‌ ಸಾಗರ್‌, ರಶ್ಮಿಕಾ, ನಾಗಾಭರಣ, ರಾಮಕೃಷ್ಣ, ಸಂಗೀತ

ರೇಟಿಂಗ್‌: 2

ಎರಡನೇ ಭಾಗದಲ್ಲಿ ಹಳ್ಳಿಯ ದೃಶ್ಯ. ಬಡವರ ಭೂಮಿ ಹೊಡೆಯುವ ರೌಡಿಗಳ ಅಟ್ಟಹಾಸ, ಅವರ ಹುಟ್ಟಡಗಿಸುವ ಹೀರೋನ ಕರಾಮತ್ತು. ಕೊನೆಗಾದರೂ ಸಿನಿಮಾದಲ್ಲಿ ಏನಾದರೂ ಇದೆಯಾ ಅನ್ನೋರಿಗೆ ಒಂದು ಸಂದೇಶವನ್ನು ಇಟ್ಟಿದ್ದಾರೆ ನಿರ್ದೇಶಕರು. ಅಲ್ಲಿಗೆ ನಾಲ್ಕು ಹಾಡು, ನಾಲ್ಕೈದು ಫೈಟು, ಲವ್ವು, ಫ್ಯಾಮಿಲಿ ಸೆಂಟಿಮೆಂಟು, ಹಾಸ್ಯ, ಮೆಸೇಜ್‌ಗಳ ಪ್ಯಾಕೇಜ್‌ ರೆಡಿ!

ಮನಸ್ಸಲ್ಲಿ ಉಳಿಯುವಂಥದ್ದು ಏನೂ ಇಲ್ಲಿ ಸಿಗಲ್ಲ. ಪೇಲವ ಕಥೆ, ಅಷ್ಟೇ ನೀರಸ ನಿರೂಪಣೆ, ನಟನೆಯಲ್ಲೂ ಜೋಷ್‌ ಕಾಣಿಸದು. ಮತ್ಯಾಕೆ ಸಿನಿಮಾ ನೋಡ್ಬೇಕು ಅಂದ್ರೆ ಅದಕ್ಕೆ ಉತ್ತರ ಹೇಳೋದು ಕಷ್ಟ, ಆ ಪ್ರಯತ್ನವೂ ವ್ಯರ್ಥ.

Vijayanand Film Review: ಸಾಧನೆಯ ವಿಜಯ, ಗೆಲುವಿನ ಆನಂದ

ಫ್ಯಾಮಿಲಿ, ಪ್ರೀತಿ-ಪ್ರೇಮ ಹಾಗೂ ಸೆಂಟಿಮೆಂಟ್‌ ಕತೆಯನ್ನು ಒಳಗೊಂಡ ಪ್ರೇಮ ಕಥಾ ಹಂದರದ ಸಿನಿಮಾ ‘ಮೊದಲ ಮಿಡಿತ’ ಇಂದು ಬಿಡುಗಡೆಯಾಗಿದೆ. ನಿಮೀಶ್‌ ಸಾಗರ್‌ ಹಾಗೂ ರಶ್ಮಿತ ರೋಜ ಚಿತ್ರದ ನಾಯಕ, ನಾಯಕಿ. ಕೃಷ್ಣಪ್ಪ ಗುಂಡಸಂದ್ರ, ಗುಟ್ಟಹಳ್ಳಿ ವಿಶ್ವನಾಥ್‌ ಚಿತ್ರದ ನಿರ್ಮಾಪಕರು. ‘ಒಂದೇ ನೋಟದಲ್ಲಿ ಹುಟ್ಟಿಕೊಳ್ಳುವ ಪ್ರೇಮ ಕತೆಯನ್ನು ಈ ಚಿತ್ರದ ಮೂಲಕ ಹೇಳಲಾಗಿದೆ’ ಎಂದು ನಿರ್ದೇಶಕ ಹರಿಚೇತ್‌ ಹೇಳಿದ್ದಾರೆ.

ನಾಗಾಭರಣ ಅವರು ನಾಯಕಿ ತಂದೆಯಾಗಿ, ರಾಮಕೃಷ್ಣ ಅವರು ನಾಯಕನ ತಂದೆ ಹಾಗೂ ಸಂಗೀತ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಕಿಲ್ಲರ್‌ ವೆಂಕಟೇಶ್‌, ಕೆಂಪೇಗೌಡ, ಅರವಿಂದ್‌ ರಾವ್‌, ಭಾಸ್ಕರ್‌ ಶೆಟ್ಟಿನಟಿಸಿದ್ದಾರೆ. ರಮೇಶ್‌ ಕ್ಯಾಮೆರಾ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?