JC Movie Review: ಗಾಢ ಸಂದೇಶ ಕೊಟ್ಟು, ರೌಡಿಸಂ ಕತೆಯ ಕೊನೆಯಲ್ಲಿ ಸಣ್ಣ ನಿಟ್ಟುಸಿರು!

Published : Feb 07, 2026, 04:18 PM IST
jc the university movie hero prakyath

ಸಾರಾಂಶ

JC Kannada Movie Review: ಸೂರ್ಯ ಪ್ರಖ್ಯಾತ್‌, ರಂಗಾಯಣ ರಘು, ಭಾವನಾ ರೆಡ್ಡಿ, ವಿಜಯ್‌ ಸಿಂಹ ನಟನೆಯ ಜೆಸಿ ಸಿನಿಮಾ ರಿಲೀಸ್‌ ಆಗಿದೆ. ಈ ಚಿತ್ರಕ್ಕೆ ನಟ ಧನಂಜಯ ಅವರು ಹಣ ಹೂಡಿದ್ದಾರೆ. 

ಚಿತ್ರ: ಜೆಸಿ

ನಿರ್ದೇಶನ: ಚೇತನ್ ಜೈರಾಮ್

ತಾರಾಗಣ: ಸೂರ್ಯ ಪ್ರಖ್ಯಾತ್, ರಂಗಾಯಣ ರಘು, ಭಾವನಾ ರೆಡ್ಡಿ, ವಿಜಯ್ ಸಿಂಹ

ರೇಟಿಂಗ್: 3

- ರಾಜೇಶ್

ಜೆಸಿ ಎಂದರೆ ಜುಡಿಷಿಯಲ್ ಕಸ್ಟಡಿ ಎಂದರ್ಥ. ಈ ಸಿನಿಮಾದಲ್ಲಿ ನಾಯಕ ಮೂರು ಬಾರಿ ಜೈಲಿಗೆ ಹೋಗುತ್ತಾನೆ. ಆ ಮೂರು ಹಂತಗಳು ಅವನ ಜೀವನದ ಮೂರು ಘಟ್ಟಗಳು. ಆ ಘಟ್ಟಗಳನ್ನು ಸೊಗಸಾಗಿ ಕಟ್ಟಿಕೊಟ್ಟಿರುವುದು ಈ ಸಿನಿಮಾದ ಮತ್ತು ನಿರ್ದೇಶಕರ ಹೆಚ್ಚುಗಾರಿಕೆ.

ಒಬ್ಬ ತರುಣ ಜೈಲಿಗೆ ಪ್ರವೇಶ ಪಡೆಯುವಲ್ಲಿಂದ ಕಥೆ ಶುರುವಾಗುತ್ತದೆ. ಅವನ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಕಾಲೇಜು ನವಿರು ಪ್ರೇಮ, ತಾರುಣ್ಯದ ಹುಮ್ಮಸ್ಸು, ಸ್ನೇಹದ ಗೌಜಿ, ಒಂದು ತಿರುವು ಮತ್ತು ಹೊಸ ದಾರಿ. ಸಿನಿಮಾದ ಚಿತ್ರಕಥೆಯನ್ನು ನಾನ್ ಲೀನಿಯರ್ ಮಾದರಿಯಲ್ಲಿ ಹೇಳುತ್ತಾ ಹೋಗುತ್ತಾರೆ ನಿರ್ದೇಶಕರು. ಎಲ್ಲಿಂದಲೋ ಆರಂಭವಾಗಿ ಮತ್ತೆಲ್ಲಿಗೋ ಹೋಗುತ್ತದೆ. ಈ ಮಧ್ಯೆ ತಂದೆ ತಾಯಿ ಮಮತೆ, ಬದುಕಿನ ಗೋಜಲು, ಪ್ರೇಮದ ಪರದಾಟ ಎಲ್ಲವೂ ಬಂದು ಹೋಗುತ್ತದೆ. ಒಂದು ಹಂತದಲ್ಲಿ ಆಕಸ್ಮಿಕವಾಗಿ ರೌಡಿಸಂ ಪರಿಚಯಕ್ಕೆ ಬೀಳುತ್ತಾನೆ. ಆಮೇಲೆ ಏನಾಗುವುದು ಅನ್ನುವುದು ಕಥೆ.

ಇಲ್ಲಿ ಕಥೆ ಸರಳವಾಗಿದೆ ಮತ್ತು ಅಂತ್ಯದ ವೇಳೆಗೆ ಪ್ರೇಕ್ಷಕರಿಗೆ ಗಾಢ ಸಂದೇಶವೊಂದನ್ನು ದಾಟಿಸಲು ಯತ್ನಿಸುತ್ತದೆ. ಇಲ್ಲಿ ರೌಡಿಸಂನ ಪುನರಾವರ್ತನೆ, ಕ್ರೌರ್ಯದ ಮೇಲುಗೈ, ಪರಿಸ್ಥಿತಿಯ ಅಸಹಾಯಕತೆ, ಮತ್ತದೇ ಕಥೆ ಅನ್ನಿಸುವ ಅಂಶಗಳು ಎಲ್ಲವೂ ಇದೆ. ಅದರ ಜೊತೆಗೆ ತಂದೆಯ ಮೌನವಿದೆ. ರಂಗಾಯಣ ರಘು ಪಾತ್ರದ ಸುದೀರ್ಘ ನಿಟ್ಟುಸಿರು ತಣ್ಣಗೆ ಕಾಡುತ್ತದೆ. ಆ ಒಂದು ಅಂಶವೇ ಈ ಸಿನಿಮಾವನ್ನು ಭಿನ್ನವಾಗಿಸಿದೆ.

ಹುಮ್ಮಸ್ಸು, ಸಾಮರ್ಥ್ಯ ಮತ್ತು ಮಾಗುವಿಕೆಯನ್ನು ತೋರಿಸಿರುವ ಸೂರ್ಯ ಪ್ರಖ್ಯಾತ್ ಮೆಚ್ಚುಗೆ ಹುಟ್ಟಿಸುತ್ತಾರೆ. ಜೊತೆಗೆ ಈ ಸಿನಿಮಾದ ಖಳನಾಯಕ ವಿಜಯ ಸಿಂಹ ದೊಡ್ಡದಾಗಿ ಬೆಳೆಯುವ ಲಕ್ಷಣ ತೋರಿಸುತ್ತಾರೆ. ಎಲ್ಲಾ ಪಾತ್ರಗಳು ಅವರವರ ಕೆಲಸ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Single Salma Movie Review: ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದೆ 'ಸಿಂಗಲ್ ಸಲ್ಮಾ'.. ಓಪನ್ ರಿಲೇಷನ್ ಶಿಪ್ ಸರಿಯೇ? ಈ ಸ್ಟೋರಿ ನೋಡಿ..
ರೂಪಾ ಅಯ್ಯರ್ 'ಆಜಾದ್ ಭಾರತ್' ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು? ಇಲ್ಲಿದೆ ಮುಖ್ಯ ಕಾರಣ..