Ranchi Review: ನಿರ್ದೇಶಕನೊಬ್ಬನ ನಿಗೂಢ ಸಾಹಸ

By Kannadaprabha NewsFirst Published Dec 2, 2023, 10:14 AM IST
Highlights

ಪ್ರಭು ಮುಂಡ್ಕೂರ್, ದಿವ್ಯ ಉರುಡುಗ, ಸುರೇಶ್ ಹೆಬ್ಳೀಕರ್, ಅರವಿಂದ್‌ ರಾವ್‌, ಲಕ್ಷ್ಮಣ್‌ ರಾಂಚಿ ಸಿನಿಮಾ ರಿಲೀಸ್‌....ಸಿನಿಮಾ ಹೇಗಿದೆ? 

ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಸರಣಿ ರಾಬರಿ ಹಾಗೂ ಕೊಲೆಗಳಿಗೂ ಕನ್ನಡ ಸಿನಿಮಾ ನಿರ್ದೇಶಕರಿಗೂ ಇರುವ ನಂಟು ಏನೆಂಬುದೇ ಈ ‘ರಾಂಚಿ’ ಚಿತ್ರದ ಕತೆ. ಇದು 2009ರಲ್ಲಿ ನಡೆದ ನಿರ್ದೇಶಕ ಶಶಿಕಾಂತ್‌ ಗಟ್ಟಿ ಅವರ ಸ್ವಂತ ಅನುಭವದ ಕತೆಯಂತೆ. ನಿರ್ದೇಶಕರ ಪಾತ್ರದಲ್ಲಿ ಪ್ರಭು ಮುಂಡ್ಕೂರ್, ರಾಂಚಿಯ ಎಸ್‌ಎಸ್‌ಪಿ ಪ್ರವೀಣ್‌ಕುಮಾರ್‌ ಸಿಂಗ್‌ ಪಾತ್ರದಲ್ಲಿ ತೋಟಾ ರಾಯ್ ಚೌಧರಿ ನಟಿಸಿದ್ದಾರೆ. ಇದು ಸಿನಿಮಾ ನಿರ್ದೇಶಕನ ನಿಗೂಢ ಸಾಹಸ ಕತೆ.

ನೂರಾರು ಕೊಲೆ, ದರೋಡೆ, ಅತ್ಯಾಚಾರ ಮಾಡಿರುವ ರಾಂಚಿಯ ಬಹುದೊಡ್ಡ ಗ್ಯಾಂಗ್‌ವೊಂದನ್ನು ಸಿನಿಮಾ ನಿರ್ದೇಶಕ ಹೇಗೆ ಹಿಡಿದುಕೊಟ್ಟ ಎಂಬುದನ್ನು ತೆರೆ ಮೇಲೆ ನೋಡಬಹುದು. ಆದರೆ, ಇಂಥ ದೊಡ್ಡ ಗ್ಯಾಂಗ್‌ ಅನ್ನು ಹಿಡಿದುಕೊಟ್ಟದ್ದು ಎಲ್ಲೂ ಸುದ್ದಿ ಆಗಿಲ್ಲ. ಇದು ರೀಲೋ, ರಿಯಲ್ಲೋ ಎಂಬುದು ಸದ್ಯದ ಪ್ರಶ್ನೆ.

SWATHI MUTTHINA MALE HANIYE REVIEW: ಮುಟ್ಟಿದರೆ ಕರಗುವ ಮಂಜು ಹನಿ ಮತ್ತು ನಶ್ವರತೆ

ತಾರಾಗಣ: ಪ್ರಭು ಮುಂಡ್ಕೂರ್, ದಿವ್ಯ ಉರುಡುಗ, ಸುರೇಶ್ ಹೆಬ್ಳೀಕರ್, ಅರವಿಂದ್‌ ರಾವ್‌, ಲಕ್ಷ್ಮಣ್‌

ನಿರ್ದೇಶನ: ಶಶಿಕಾಂತ್‌ ಗಟ್ಟಿ

Bad Manners Review: ಕತ್ತಲು ಬೆಳಕು ಜಗತ್ತಲ್ಲಿ ಅನೂಹ್ಯ ಪಾತ್ರಗಳ ತಾಳಮೇಳ

ಒಂದು ಕ್ರೈಮ್‌ ಕತೆಯನ್ನು ತೀರಾ ಸಹಜವಾಗಿ ನಿರ್ದೇಶಕರು ನಿರೂಪಿಸಿದ್ದು, ನಿಧಾನಗತಿ ನಿರೂಪಣೆಯಿಂದ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತದೆ ಎಂಬುದು ಚಿತ್ರದ ಪ್ರಮುಖ ಕೊರತೆಗಳಲ್ಲಿ ಒಂದು. ಪ್ರಭು ಮುಂಡ್ಕೂರ್, ದಿವ್ಯ ಉರುಡುಗ ಚಿತ್ರದ ಪ್ರಮುಖ ಆಕರ್ಷಣೆ. ತುಂಬಾ ಹಿಂದೆ ‘ಬೆಂಕಿಪಟ್ಣ’ ಚಿತ್ರದಲ್ಲಿ ಕತ್ಲೆ ಶಿವು ಪಾತ್ರದಲ್ಲಿ ಮಿಂಚಿದ್ದ ಲಕ್ಷ್ಮಣ್‌ ಇಲ್ಲಿ ಮತ್ತೆ ಖಳನಾಯಕನ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ.

click me!