ಅನಂತ್‌ನಾಗ್, ಮಧುಸೂದನ್ ಗೋವಿಂದ, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ ಅಭಿನಯಿಸಿರುವ ಮೇಡ್ ಇನ್ ಬೆಂಗಳೂರು ಸಿನಿಮಾ ಬಿಡುಗಡೆಯಾಗಿದೆ.
ಆರ್‌ಕೆ
ಈ ಐಟಿ-ಬಿಟಿ ಓದಿಕೊಂಡು, ಸಾಪ್‌್ಟವೇರ್ ಕಂಪನಿಗಳಲ್ಲಿ ಕೆಲಸ ಮಾಡುವವರ ದೊಡ್ಡ ಸಮಸ್ಯೆ ಏನೆಂದರೆ ಅವರು ತಾವೇ ಒಂದು ಕಂಪನಿಯ ಮಾಲೀಕರಾಗಬೇಕು, ಸ್ವಂತ ಉದ್ಯಮ ಆರಂಭಿಸಬೇಕೆಂದು ಸ್ಟಾರ್ಚ್ ಅಪ್‌ಗಳ ಮೊರೆ ಹೋಗುವುದು. ಅಲ್ಲಿ ಎದುರಿಸುವ ಸಂಕಷ್ಟಗಳನ್ನೇ ದೇಶದ ಬಹು ದೊಡ್ಡ ಕಷ್ಟಗಳು ಎನ್ನುವಂತೆ ಬಿಂಬಿಸಿ ಒದ್ದಾಡುವುದು. ಇಂಥ ಒದ್ದಾಟಗಳನ್ನು ಹೇಳುತ್ತಲೇ, ಸ್ಟಾರ್ಚ್ ಅಪ್ ಕಂಪನಿ ಮಾಡುವವನ ಸುತ್ತ ಸಾಗುವೇ ಚಿತ್ರವೇ ‘ಮೇಡ್ ಇನ್ ಬೆಂಗಳೂರು’. ಬೆಂಗಳೂರಿನಂತಹ ಮಹಾನಗರಗಳಲ್ಲಿ ಬದುಕಲು ಹಲವು ದಾರಿಗಳು ಇವೆ. ಇಲ್ಲಿಗೆ ಬದುಕು ಕಟ್ಟಿಕೊಂಡು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತಲ್ಲೇ ಇದೆ. ಮಹಾನಗರದ ಒಬ್ಬ ಹುಡುಗನ ಕತೆಯಂತೆ ತೆರೆದುಕೊಳ್ಳುವ ಈ ಚಿತ್ರವು ಒಂದೇ ಪಾಯಿಂಟ್ ಸುತ್ತ ತಿರುಗುತ್ತದೆ.
ತಾರಾಗಣ: ಅನಂತ್‌ನಾಗ್, ಮಧುಸೂದನ್ ಗೋವಿಂದ, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ.
ನಿರ್ದೇಶನ: ಪ್ರದೀಪ್ ಕೆ ಶಾಸ್ತ್ರಿ
ರೇಟಿಂಗ್: 2
Padavi Poorva Review: ಟೀನ್ ಬದುಕಿನ ಸಿಹಿ, ಕಹಿ ಮತ್ತು ಒಗರು
ಅಮೆರಿಕದಲ್ಲಿ ಇದ್ದವನನ್ನು ಮದುವೆ ಆಗುವ ಕನಸು ಕಾಣುವ ಹುಡುಗಿ, ವಿದೇಶ ಬಿಟ್ಟು ಸ್ವದೇಶಕ್ಕೆ ಬರುವ ಹುಡುಗನ ಮದುವೆ ಶಾಸ್ತ್ರದೊಂದಿಗೆ ಶುರುವಾಗುವ ಈ ಚಿತ್ರದಲ್ಲಿ ವಿದ್ಯಾವಂತ ಯುವಕ ಸುಹಾಸ್, ತನ್ನದೇ ಸ್ನೇಹಿತರ ತಂಡ ಕಟ್ಟಿಕೊಂಡು ಸ್ಟಾರ್ಚ್ ಅಪ್ ಕಂಪನಿ ಮಾಡುವ ಯೋಜನೆ ರೂಪಿಸುತ್ತಾನೆ. ಇದಕ್ಕಾಗಿ ಆತ ಹಣಕ್ಕಾಗಿ ಯಾರನ್ನೆಲ್ಲ ಭೇಟಿ ಮಾಡುತ್ತಾನೆ, ಆಗ ಎದುರಿಸುವ ಸಂಕಷ್ಟಗಳು, ಅವರು ಕೇಳುವ ಪ್ರಶ್ನೆಗಳು, ಹತಾಶೆ, ನೋವು- ಸಂಕಟ, ಮತ್ತೆ ಉತ್ಸಾಹ. ಕೊನೆಗೆ ಸ್ಟಾರ್ಚ್ ಅಪ್ ಕಂಪನಿ ಮಾಡಲು ಹಣ ಸಿಗುತ್ತದೆ. ಅದು ಕೂಡ ಕೊಟ್ಟಹಣವನ್ನು ಒಂದು ವರ್ಷದಲ್ಲಿ ಡಬಲ್ ಮಾಡಿ ಕೊಡಬೇಕು ಎನ್ನುವ ಷರತ್ತಿನೊಂದಿಗೆ. ಸಾಲ ಮಾಡಿ ಉದ್ಯಮ ಆರಂಭಿಸುವ ಸುಹಾಸ್‌ಗೆ ತನ್ನ ಕಂಪನಿ ಸೇರುವ ಇಬ್ಬರ ಮೋಸಗಾರರ ಬಗ್ಗೆ ತಿಳಿಯಲ್ಲ. ಅವರಿಂದ ಸುಹಾಸ್ ಬೀದಿಗೆ ಬರುತ್ತಾನೆ. ಸಾಲ ಕೊಟ್ಟವನು ಅಸಲು, ಬಡ್ಡಿಸಿ ಸೇರಿ 50 ಲಕ್ಷ ವಸೂಲಿಗೆ ಮುಂದಾಗುತ್ತಾನೆ. ಸ್ಟಾರ್ಚ್ ಅಪ್ ಕಂಪನಿ ಮಾಡಬೇಕು ಎಂದುಕೊಂಡ ಹೊರಟ ಸುಹಾಸ್, ಕೊನೆಗೆ ಕಳ್ಳನಾಗುತ್ತಾನೆ. ಮುಂದೆ ಏನಾಗುತ್ತದೆ, ಆತನನ್ನು ಇಡ್ಲಿ ಉದ್ಯಮ ಕೈ ಹಿಡಿಯುವುದು ಹೇಗೆ ಎಂಬುದು ಚಿತ್ರದ ಕತೆ.
JAMALIGUDDA REVIEW: ಜಮಾಲಿಗುಡ್ಡದ ಮರೆಯಲಾಗದ ಪ್ರೇಮ ಕತೆ
ಇಡೀ ಕತೆಯ ತಿರುವು ಇರುವುದು ರೆಡ್ಡಿ ಪಾತ್ರಧಾರಿ ಸಾಯಿಕುಮಾರ್ ಅವರಿಂದ ಸಾಲ ಪಡೆಯುವ ಅಕ್ರಮ ಹಣದ ಸುತ್ತ. ತನಗೆ ಹಣ ಕೊಟ್ಟರೆ ಅಕೌಂಟ್‌ನಲ್ಲಿ ಮಾತ್ರ ಕೊಡಿ ಎಂದು ಷರತ್ತು ವಿಧಿಸುವ ಸುಹಾಸ್, ಇದ್ದಕ್ಕಿದ್ದಂತೆ ರೆಡ್ಡಿ ಬಳಿ ಮಾತ್ರ ಕಪ್ಪು ಹಣವನ್ನು ಹೇಗೆ ಸಾಲ ಪಡೆದರು ಎನ್ನುವ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು. ವಿರಾಮಕ್ಕೂ ಮೊದಲೇ ಮುಗಿಯುವ ಕತೆಯನ್ನು ಮತ್ತಷ್ಟುಮಗದಷ್ಟುಬಲವಂತವಾಗಿ ಹಿಗ್ಗಿಸುತ್ತ ಹೋಗುವ ಹೊತ್ತಿಗೆ, ಸಿನಿಮಾ ನೋಡುವ ಪ್ರೇಕ್ಷಕ ಕುಗ್ಗುತ್ತಾ ಹೋಗುತ್ತಾನೆ. ನಿರೂಪಣೆಯ ಭಾರ, ದೊಡ್ಡ ಕತೆ ಹೇಳಬೇಕೆಂಬ ನಿರ್ದೇಶಕನ ಆಸೆ, ಒಂದೇ ಅಂಶವನ್ನು ಪದೇ ಪದೇ ಹೇಳುವುದು ‘ಮೇಡ್ ಇನ್ ಬೆಂಗಳೂರು’ ಚಿತ್ರದ ಬಹು ದೊಡ್ಡ ಕೊರತೆಗಳಲ್ಲಿ ಒಂದು. ಇನ್ನೂ ಅನಂತ್‌ನಾಗ್ ಅವರಂತಹ ಹಿರಿಯ ನಟರನ್ನು ನೆಪ ಮಾತ್ರಕ್ಕೆ ಬಳಸಿಕೊಂಡಿರುವುದು ಈ ಚಿತ್ರದ ಮತ್ತೊಂದು ಮೈನಸ್. ಇಷ್ಟರ ನಡುವೆಯೂ ಸಿನಿಮಾ ನೋಡಿದರೆ ಸ್ಟಾರ್ಚ್ ಅಪ್ ಸಾಹಸಿಗಳಿಗೆ ಇದೊಂದು ಪಠ್ಯವಾಗಬಹುದು!