Jersey Number 10 Review: ಪ್ರೇಮತ್ಯಾಗ ದುಃಖದಾಯಕ, ಆಟದ ಕತೆ ಸ್ಫೂರ್ತಿದಾಯಕ

Published : May 22, 2023, 10:34 AM IST
Jersey Number 10 Review: ಪ್ರೇಮತ್ಯಾಗ ದುಃಖದಾಯಕ, ಆಟದ ಕತೆ ಸ್ಫೂರ್ತಿದಾಯಕ

ಸಾರಾಂಶ

ಅಧ್ಯ ತಿಮ್ಮಯ್ಯ, ದತ್ತಣ್ಣ, ಚಂದನ್‌ ಆಚಾರ್‌, ಮಂಡ್ಯ ರಮೇಶ್‌, ಟೆನ್ನಿಸ್‌ ಕೃಷ್ಣ, ಥ್ರಿಲ್ಲರ್‌ ಮಂಜು, ಅನುಷ ಸಂಚಯ, ಸೋನಿ, ಸ್ನೇಹ ಖುಷಿ ನಟಿಸಿರುವ ಸಿನಿಮಾ ಜೆರ್ಸಿ ನಂಬರ್ 10 ಬಿಡುಗಡೆಯಾಗಿದೆ. 

ಆರ್‌ಎಸ್‌

ದೊಡ್ಡದೊಂದು ಕನಸು ಕಾಣುವುದು, ಅದಕ್ಕಾಗಿ ಹೋರಾಟ ನಡೆಸುವುದು, ಈ ಮಧ್ಯೆ ಪ್ರೀತಿಯಲ್ಲಿ ಬೀಳುವುದು, ಉದ್ದೇಶ ಸಾಧನೆಗೆ ಅಡೆತಡೆ ಉಂಟಾಗುವುದು, ಪ್ರೀತಿಯಲ್ಲಿ ಡ್ಯುಯೆಟ್ಟು ಬ್ರೇಕಪ್‌ ಸಾಂಗು ಹಾಡುವುದು, ತಪ್ಪಿದ ದಾರಿಯಲ್ಲಿ ಒದ್ದಾಡುವುದು, ಅಂತಿಮವಾಗಿ ಮತ್ತೆ ಕನಸಿನ ಹಾದಿಗೆ ಹಿಂತಿರುಗುವುದು. ಇಂಥದ್ದೊಂದು ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾ ತಾರುಣ್ಯದ ಆತ್ಮಕತೆಯಂತೆ ಕಾಣಿಸುತ್ತದೆ. ಇಲ್ಲಿ ಹಾಕಿ ಆಟವಿದೆ, ಕಾಲೇಜು ತರ್ಲೆಗಳಿವೆ, ಸಂತೋಷದ ಲವ್‌ ಸ್ಟೋರಿ ಇದೆ, ಭಗ್ನ ಪ್ರೇಮದ ತೀರದ ನೋವಿಗೆ, ತಾತ ಮೊಮ್ಮಗನ ಬಾಂಧವ್ಯವಿದೆ, ಕೊನೆಗೆ ಸಾಕಷ್ಟುಸಂದೇಶವೂ ಇದೆ. ಅಷ್ಟರ ಮಟ್ಟಿಗೆ ಇದೊಂದು ರಂಜನೆ ಪ್ರಧಾನವಾದ ಸಂದೇಶಾತ್ಮಕ ಸಿನಿಮಾ.

ನಿರ್ದೇಶನ: ಅಧ್ಯ ತಿಮ್ಮಯ್ಯ

ತಾರಾಗಣ: ಅಧ್ಯ ತಿಮ್ಮಯ್ಯ, ದತ್ತಣ್ಣ, ಚಂದನ್‌ ಆಚಾರ್‌, ಮಂಡ್ಯ ರಮೇಶ್‌, ಟೆನ್ನಿಸ್‌ ಕೃಷ್ಣ, ಥ್ರಿಲ್ಲರ್‌ ಮಂಜು, ಅನುಷ ಸಂಚಯ, ಸೋನಿ, ಸ್ನೇಹ ಖುಷಿ

ಕೊಡಗಿನ ಹಿನ್ನೆಲೆಯಲ್ಲಿ ನಡೆಯುವ ಕತೆ. ಅಲ್ಲೊಬ್ಬ ಹಾಕಿ ಆಟದಲ್ಲಿ ರಾಷ್ಟ್ರ ಮಟ್ಟದ ಸಾಧನೆ ಮಾಡಬೇಕು ಎಂಬ ಆಸೆ ಇದ್ದ ತಾತ. ಆ ತಾತನ ಕನಸು ಅರ್ಧಕ್ಕೆ ನಿಂತು ಹೋಗಿರುತ್ತದೆ. ಮೊಮ್ಮಗನಾದರೂ ಆ ಸಾಧನೆ ಮಾಡಬೇಕು ಎಂಬುದು ತಾತನ ಮತ್ತೊಂದು ಆಸೆ. ಅದಕ್ಕಾಗಿ ಕಷ್ಟಪಡುವ ಮೊಮ್ಮಗನ ಬದುಕು ಪ್ರೀತಿಯಲ್ಲಿ ಬೀಳುವ ಮೂಲಕ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ಎಲ್ಲೆಲ್ಲಿಗೋ ಸಾಗಿ ಮತ್ತೆ ಹಾಕಿ ಕಡೆ ಬರುವ ವೇಳೆಗೆ ಕನಸು ದೊಡ್ಡದಾಗಿ ಬೆಳೆದಿರುತ್ತದೆ. ಎಲ್ಲವನ್ನೂ ಮೀರಿ ಆ ಕನಸು ನನಸು ಮಾಡುತ್ತಾನಾ ಎಂಬುದೇ ಕುತೂಹಲ. ಆ ಹಿನ್ನೆಲೆಯಲ್ಲಿ ನೋಡಿದರೆ ಇದೊಂದು ಮೋಟಿವೇಷನಲ್‌ ಸಿನಿಮಾ. ಮೋಟಿವೇಷನ್‌ ಕಡೆಯಲ್ಲಿ ಸಿಗುವುದರಿಂದ ಅಲ್ಲಿಯವರೆಗೆ ಪ್ರೇಮ ಪಾಠ ಸಿಗುತ್ತಿರುತ್ತದೆ.

Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್‌ ಕಥನ

ಅಧ್ಯ ತಿಮ್ಮಯ್ಯ ಈ ಸಿನಿಮಾ ಮೂಲಕ ನಟನೆ, ನಿರ್ದೇಶನದ ಕನಸು ನನಸು ಮಾಡಿಕೊಂಡಿದ್ದಾರೆ. ಗ್ರೀಕ್‌ ಯೋಧನಂತೆ ಕಾಣಿಸಿಕೊಳ್ಳುವ ಅವರದು ಚಿತ್ರದಲ್ಲಿ ಕಟ್ಟುಮಸ್ತು ನಟನೆ. ದತ್ತಣ್ಣ ಸ್ಕ್ರೀನ್‌ನಲ್ಲಿ ಇರುವಷ್ಟುಹೊತ್ತು ಸಂಭ್ರಮ. ಚಿತ್ರದಲ್ಲಿರುವ ಕೆಲವು ಮಿಸ್ಸಿಂಗ್‌ ಲಿಂಕ್‌ಗಳು ಚಿತ್ರದ ಕತೆಯ ಮುಂದೆ ಗಣನೆಗೆ ಬಾರದಷ್ಟುಹಿಂದೆ ಉಳಿಯುತ್ತವೆ. ಎಷ್ಟುಸಾಧನೆ ಮಾಡಿದರೂ ಮನುಷ್ಯ ಸರಳವಾಗಿರಬೇಕು ಎಂಬ ತತ್ವವನ್ನು ಅವರು ಕೊನೆಯ ದೃಶ್ಯದಲ್ಲಿ ಕಾಣಿಸುತ್ತಾರೆ. ಆ ಮೂಲಕ ಸಿನಿಮಾದಲ್ಲಿ ಮನೋರಂಜನೆ ಮತ್ತು ತತ್ವ ಎರಡನ್ನೂ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

Daredevil Musthafa Review: ತೇಜಸ್ವೀತನ ಬಿಟ್ಟುಕೊಡದ ಡೇರ್‌ಡೆವಿಲ್‌ ಕಥನ

ಸಾಧನೆಗೆ ತಾಳ್ಮೆ ಬೇಕು ಎಂದು ನಂಬಿಕೊಂಡು ಸಾಧಿಸುವ ಹಂಬಲದಲ್ಲಿ ತಾಳ್ಮೆಯಿಂದ ಕಾಯುತ್ತಾ ಸ್ಫೂರ್ತಿ ಬಯಸುವವರಿಗೆ ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆಸ್ಫೂರ್ತಿ ಇದೆ. ಹಾಗಾಗಿಯೇ ಈ ಕತೆ ಸ್ಫೂರ್ತಿದಾಯಕ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಳ್ಳಭಟ್ಟಿ ದಂಧೆ ನಡುವೆ ಅರಳುವ ಪ್ರೀತಿ: ಇಲ್ಲಿದೆ 'ಧರ್ಮಂ' ಸಿನಿಮಾ ವಿಮರ್ಶೆ
'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?