ಟೈಮ್ ಪಾಸ್ ಸಿನಿಮಾ ವಿಮರ್ಶೆ: ಚಿತ್ರರಂಗದ ಒಳಗುಟ್ಟು ಹೇಳುವ ಮನರಂಜನಾತ್ಮಕ ಸಿನಿಮಾ

Published : Oct 18, 2025, 11:45 AM IST
Time Pass movie

ಸಾರಾಂಶ

ಸೋತ ನಿರ್ಮಾಪಕನ ಭಾವುಕತೆ ಜೊತೆಗೆ ಆಕ್ರೋಶ, ಪ್ರತಿಭಾವಂತ ನಿರ್ದೇಶಕನ ಕನಸುಗಳ ಜೊತೆಗೆ ಹೋರಾಟ, ನಟ-ನಟಿ ಎನಿಸಿಕೊಳ್ಳುವುದಕ್ಕೆ ಕಾಯುತ್ತಿರುವವರು... ಹೀಗೆ ಪುಟ್ಟ ಪುಟ್ಟ ಪಾತ್ರಗಳೇ ಚಿತ್ರದ ಜೀವಾಳ ಎಂಬುದು ಟೈಮ್‌ ಪಾಸ್‌.

ಕೇಶವ

ಆತ ಸೋತ ನಿರ್ಮಾಪಕ. ಈತ ಏನಾದರು ಮಾಡಿ ನಿರ್ದೇಶಕ ಎನಿಸಿಕೊಳ್ಳಬೇಕೆಂದು ಕಾಯುತ್ತಿರುವ ಯುವಕ. ಕೊನೆಗೆ ಇಬ್ಬರು ಭೇಟಿ ಆಗುತ್ತಾರೆ. ಮುಂದೇನು ಎನ್ನುವ ಪ್ರಶ್ನೆಗೆ ‘ಟೈಮ್‌ ಪಾಸ್‌’ ಎನ್ನುವ ಚಿತ್ರವೇ ಉತ್ತರ. ಚಿತ್ರದ ಹೆಸರಿಗೆ ತಕ್ಕಂತೆ ಇದು ಪಕ್ಕಾ ಟೈಮ್‌ ಪಾಸ್‌. ಜೊತೆಗೆ ಎಂಟರ್‌ಟೈನ್‌ಮೆಂಟ್‌ ಕೂಡ. ತುಂಬಾ ದಿನಗಳ ನಂತರ ಸಿನಿಮಾದವರ ಕತೆ ಹೇಳುವ ಚಿತ್ರವೊಂದನ್ನು ನಿರ್ದೇಶಕ ಚೇತನ್‌ ಜೋಡಿದಾರ್‌ ಪ್ರೇಕ್ಷಕರ ಮುಂದೆ ತಂದಿದ್ದಾರೆ.

ಸೋತ ನಿರ್ಮಾಪಕನ ಭಾವುಕತೆ ಜೊತೆಗೆ ಆಕ್ರೋಶ, ಪ್ರತಿಭಾವಂತ ನಿರ್ದೇಶಕನ ಕನಸುಗಳ ಜೊತೆಗೆ ಹೋರಾಟ, ನಟ-ನಟಿ ಎನಿಸಿಕೊಳ್ಳುವುದಕ್ಕೆ ಕಾಯುತ್ತಿರುವವರು... ಹೀಗೆ ಪುಟ್ಟ ಪುಟ್ಟ ಪಾತ್ರಗಳೇ ಚಿತ್ರದ ಜೀವಾಳ ಎಂಬುದು ‘ಟೈಮ್‌ ಪಾಸ್‌’ ಚಿತ್ರಕ್ಕಿರುವ ಮೊದಲ ಕ್ವಾಲಿಫಿಕೇಷನ್‌. ಟೈಮ್‌ ಪಾಸ್‌ಗೆ ಅಂತ ಮಾಡಿದ ಸಿನಿಮಾ ದುಡ್ಡು ಮಾಡಿ ಕೊಡುತ್ತದೆ. ಆದರೆ, ಆ ಸಿನಿಮಾ ಮಾಡಿದ ನಿರ್ಮಾಪಕ ಕೊನೆಗೆ ಏನಾಗುತ್ತಾನೆ ಎನ್ನುವುದನ್ನು ಅತ್ಯಂತ ಆಪ್ತವಾಗಿ ಹೇಳಿರುವುದು ಚಿತ್ರದ ಎಮೋಷನ್‌ ಪಾಯಿಂಟ್‌.

ಚಿತ್ರ: ಟೈಮ್‌ ಪಾಸ್‌
ತಾರಾಗಣ: ಇಮ್ರಾನ್‌ ಪಾಶಾ, ರಕ್ಷಾ ರಾಮ್‌, ಪ್ರಭಾಕರ್‌ ರಾವ್‌, ಅಶ್ವಿನಿ ಶ್ರೀನಿವಾಸ್‌, ನವೀನ್‌ ಮಹಾಬಲೇಶ್ವರ್‌, ಓಂಶ್ರೀ ಯಕ್ಷಶಿಫ್‌\B
ನಿರ್ದೇಶನ: ಕೆ. ಚೇತನ್‌ ಜೋಡಿದಾರ್‌
ರೇಟಿಂಗ್‌: 3

ಚಿತ್ರರಂಗದ ಒಳ ಗುಟ್ಟುಗಳನ್ನು ಸಾಧ್ಯವಾದಷ್ಟು ಟಚ್‌ ಮಾಡಲು ನಿರ್ದೇಶಕ ಪ್ರಯತ್ನಿಸಿದ್ದಾರೆ. ಮೊದಲರ್ಧ ಹಾಸ್ಯ, ದ್ವಿತಿಯಾರ್ಧ ಭಾವುಕತೆಯ ನೆರಳಿನಲ್ಲಿ ಒಂದು ಸಣ್ಣ ಎಳೆ ಸಿನಿಮಾ ಆಗಿದೆ. ಚಿತ್ರದಲ್ಲಿ ಸಣ್ಣ ಪುಟ್ಟ ಕೊರತೆಗಳೂ ಕಂಡರೂ ಚಿತ್ರರಂಗದ ನಿಜ ಅರಿಯಲು ‘ಟೈಮ್‌ ಪಾಸ್‌’ ಚಿತ್ರವನ್ನು ನೋಡಬಹುದು. ನಿರ್ದೇಶಕನಾಗಿ ಇಮ್ರಾನ್‌ ಪಾಶಾ, ನಿರ್ಮಾಪಕನಾಗಿ ಪ್ರಭಾಕರ್‌ ರಾವ್‌, ನಾಯಕಿ ಪಾತ್ರದಲ್ಲಿ ಅಶ್ವಿನಿ ಶ್ರೀನಿವಾಸ್‌, ನೆಗೆಟಿವ್‌ ಪಾತ್ರದಲ್ಲಿ ಓಂಶ್ರೀ ಯಕ್ಷಶಿಫ್‌ ನಟನೆ ಗಮನ ಸೆಳೆಯುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ