
ಪ್ರೇಮ ಕತೆಯಲ್ಲಿರುವ ಮಾಧುರ್ಯ, ತಾರುಣ್ಯದ ಸೌಂದರ್ಯ, ಪ್ರೀತಿಯ ಆಹ್ಲಾದ, ಬದುಕಿನ ತಮಾಷೆ ಎಲ್ಲವೂ ಸೇರಿಕೊಂಡಿರುವ ಸರಳ ಸಂಕೀರ್ಣ, ಸುಂದರ ಕಥನ.
ಇಲ್ಲಿ ಮೂರು ಪ್ರೇಮ ಕತೆಗಳನ್ನು ಹೇಳುತ್ತಾರೆ ನಿರ್ದೇಶಕರು. ಆ ಮೂರು ಕತೆಗಳೂ ಒಂದಕ್ಕೊಂದು ಹೆಣೆದುಕೊಂಡಿವೆ. ಆ ಹೆಣಿಗೆಯೇ ಈ ಕತೆಯನ್ನು ಮತ್ತಷ್ಟು ಕುತೂಹಲಕರವನ್ನಾಗಿ ಮಾಡಿದೆ. ಹರೆಯದ ಪ್ರೇಮ ಮತ್ತು ಜೀವನದ ನಿಗೂಢತೆಯನ್ನು ಹದವಾಗಿ ಬೆರೆಸಿ ಒಂದು ಸೊಗಸಾದ ಚಿತ್ರಕತೆಯನ್ನು ರಚಿಸಲಾಗಿದೆ. ಆ ಮಟ್ಟಿಗೆ ಈ ಸಿನಿಮಾ ಲೈವ್ಲಿಯಾಗಿ ಸಾಗುತ್ತದೆ ಮತ್ತು ಸುಂದರವಾಗಿ ಕಾಣುತ್ತದೆ.
MEHABOOB REVIEW ಪ್ರೀತಿಯ ಹಿಂದೆ ಸಾವುಂಟು!
ನಿರ್ದೇಶನ: ಕೇಂಜ ಚೇತನ್‌ಕುಮಾರ್
ತಾರಾಗಣ: ಅರುಣಾ ಬಾಲರಾಜ್, ಸುಶ್ಮಿತಾ ಭಟ್, ಸಾಗರ್ ಗೌಡ, ಧನುಷ್ ಎಸ್ ಬೈಕಂಪಾಡಿ, ಸಂಕಲ್ಪ ಶರ್ಮಾ, ಗೀತಾ ಬಂಗೇರ
ರೇಟಿಂಗ್: 3
ಜೊತೆಗೆ ಇಲ್ಲಿ ಪ್ರೇಮ ಭಾವದ ಸಂಕೀರ್ಣತೆಯನ್ನೂ ತಣ್ಣಗೆ ದಾಟಿಸಲಾಗಿದೆ.ನಿರ್ದೇಶಕರು ಶ್ರದ್ಧೆಯಿಂದ ಕತೆ, ಚಿತ್ರಕತೆ ರಚಿಸಿ ಅದಕ್ಕೆ ಹೊಸ ಕಾಲದ ತರುಣ, ತರುಣಿಯರನ್ನು ಪಾತ್ರಗಳನ್ನಾಗಿಸಿದ್ದಾರೆ. ಆ ಎಲ್ಲಾ ಕಲಾವಿದರೂ ಇಲ್ಲಿನ ಪಾತ್ರಗಳಿಗೆ ಜೀವ ತುಂಬಿ ಕಥೆಗೊಂದು ಆಹ್ಲಾದತೆ ತಂದಿದ್ದಾರೆ. ಜೊತೆಗೆ ತಾಯಿ ಪಾತ್ರದಲ್ಲಿ ನಟಿಸಿರುವ ಅರುಣಾ ಬಾಲರಾಜ್ ಈ ಚಿತ್ರಕ್ಕೆ ಮತ್ತು ಕತೆಗೆ ಘನತೆ ತಂದಿದ್ದಾರೆ.
Somu Sound Engineer Review ತೀವ್ರ ಗಾಢ ಭಾವಗಳ ಆರ್ದ್ರ ಕಥನ
ಈ ಚಿತ್ರದ ಹೆಸರಲ್ಲೇ ಖಾರ ಮತ್ತು ಸಿಹಿ ಇರುವಂತೆ ಈ ಚಿತ್ರದಲ್ಲೂ ಸಿಹಿಯೂ ಖಾರವೂ ಬೆರೆತುಕೊಂಡಿದೆ. ಸಿಹಿಯಾದ ಭಾವಗಳೂ, ಖಾರ ಕಟು ವಾಸ್ತವವೂ ಸೇರಿಕೊಂಡು ಇದಕ್ಕೊಂದು ವಿಶಿಷ್ಟ ಫ್ಲೇವರ್ ಪ್ರಾಪ್ತವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕಲಾವಿದರು, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮುನಿ ಬೆಳಗೆರೆ, ನಿರ್ದೇಶಕರು ಸೇರಿದ ಈ ತಂಡದ ಪ್ರಯತ್ನ ಶ್ಲಾಘನೀಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.