Mehaboob Review ಪ್ರೀತಿಯ ಹಿಂದೆ ಸಾವುಂಟು!

Published : Mar 16, 2024, 12:19 PM IST
Mehaboob Review ಪ್ರೀತಿಯ ಹಿಂದೆ ಸಾವುಂಟು!

ಸಾರಾಂಶ

ಶಶಿ, ಪಾವನಾ, ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಸಂದೀಪ್‌, ಬುಲೆಟ್‌ ಪ್ರಕಾಶ್‌, ಕಬೀರ್‌ ದುಹಾನ್‌ ಸಿಂಗ್‌ ನಟನೆಯ ಮೆಹಬೂಬ್ ಸಿನಿಮಾ ರಿಲೀಸ್ ಆಗಿದೆ.   

ಆರ್‌. ಕೆ

ಜಾತಿ, ಧರ್ಮಗಳ ಬೇಲಿ ಮೀರಿದ ಪ್ರೇಮ ಕತೆಗಳನ್ನು ಆಗಾಗ ಬೆಳ್ಳಿತೆರೆಯನ್ನು ಬೆಳಗುತ್ತಲೇ ಬಂದಿವೆ. ಅದೇ ಸಾಲಿಗೆ ಸೇರುವ ಸಿನಿಮಾ ‘ಮೆಹಬೂಬಾ’. ಬಿಗ್‌ಬಾಸ್‌ ವಿಜೇತ ಶಶಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಸಿನಿಮಾ ಇದು. ರಾಜಕೀಯ ಕುಟುಂಬದ ಕಾರ್ತಿಕ್, ಸಾಮಾನ್ಯ ಮುಸ್ಲಿಂ ಕುಟುಂಬದ ಹುಡುಗಿ ನಜ್ರಿಯಾ ಭಾನು. ಈ ಇಬ್ಬರ ಆಕಸ್ಮಿಕ ಭೇಟಿ, ಪರಿಚಯ, ಸ್ನೇಹ, ಮುಂದೆ ಪ್ರೀತಿ. ಕೊನೆಗೂ ಇಬ್ಬರು ಮದುವೆ ಆಗುವ ನಿರ್ಧಾರಕ್ಕೆ ಬರುತ್ತಾರೆ. ಆದರೆ, ಇವರ ಮದುವೆ ಆಗುತ್ತದೆಯೇ, ಪ್ರೀತಿ ಗೆಲ್ಲುತ್ತದೆಯೇ ಎಂಬುದು ಚಿತ್ರದ ಕತೆ.

SOMU SOUND ENGINEER REVIEW ತೀವ್ರ ಗಾಢ ಭಾವಗಳ ಆರ್ದ್ರ ಕಥನ

ತಾರಾಗಣ: ಶಶಿ, ಪಾವನಾ, ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಸಂದೀಪ್‌, ಬುಲೆಟ್‌ ಪ್ರಕಾಶ್‌, ಕಬೀರ್‌ ದುಹಾನ್‌ ಸಿಂಗ್‌

ನಿರ್ದೇಶನ : ಅನೂಪ್‌ ಆಂಟೋನಿ

ರೇಟಿಂಗ್‌: 3

ಸಾವಯವ ಕೃಷಿಯ ಕುರಿತು ಪ್ರಾಜೆಕ್ಟ್‌ ಮಾಡುತ್ತಿರುವ ನಾಯಕಿ, ಜವಾಬ್ದಾರಿ ಇಲ್ಲದೆ ಓಡಿಡಾಡಿಕೊಂಡಿರುವ ಹುಡುಗ. ಈ ಎರಡೂ ಪಾತ್ರಗಳ ಮೂಲಕ ನಿರ್ದೇಶಕ ಅನೂಪ್‌ ಆಂಟೋನಿ ಅವರು ಒಂದು ಸೌಹಾರ್ದ ಸಂಬಂಧವನ್ನು ಬೆಸೆಯುವ ಪ್ರೇಮ ಕತೆಯನ್ನು ಹೇಳಿದ್ದಾರೆ. ಆದರೆ, ಇದರ ಅಂತ್ಯ ಏನು ಎಂಬುದೇ ಚಿತ್ರದ ಕುತೂಹಲ ಮತ್ತು ತಿರುವು. ಹೀಗಾಗಿ ಒಮ್ಮೆ ನೋಡುವ ಸಿನಿಮಾ ಇದು. ನಿಧಾನವಾಗಿಯಾದರೂ ಕತೆಯ ಪ್ರತಿಯೊಂದನ್ನು ಹೇಳಬೇಕು ಎನ್ನುವ ನಿರ್ದೇಶಕರ ತುಡಿತ ಕೊನೆತನಕ ಸಾಗುತ್ತದೆ.

Kerebete Review ಮಲೆನಾಡ ಕತೆಯ ಕುತೂಹಲಕರ ಪ್ರಯಾಣ

ಮೊದಲ ಚಿತ್ರದಲ್ಲಿ ಶಶಿ ನಟನೆ ಹಾಗೂ ಆ್ಯಕ್ಷನ್‌ನಲ್ಲಿ ಭರವಸೆ ಮೂಡಿಸಿದ್ದಾರೆ. ಮುಸ್ಲಿಂ ಹುಡುಗಿ ಪಾತ್ರದಲ್ಲಿ ಪಾವನಾ ಗೌಡ ಮುದ್ದಾಗಿ ಕಾಣುತ್ತಾರೆ. ಜೈ ಜಗದೀಶ್‌, ವಿಜಯಲಕ್ಷ್ಮೀ ಸಿಂಗ್‌, ಶಿವರಾಮಣ್ಣ, ಬುಲೆಟ್‌ ಪ್ರಕಾಶ್‌ ಅವರ ಪಾತ್ರಗಳು ಕತೆಗೆ ಪೂರಕವಾಗಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಅಖಂಡ 2' ಫಸ್ಟ್ ರಿವ್ಯೂ ವೈರಲ್.. ಹುಚ್ಚೆಬ್ಬಿಸುವಂತಿವೆ ಬಾಲಯ್ಯ ಮಾಸ್ ಡೈಲಾಗ್‌ಗಳು, ಚಿತ್ರದ ಮೈನಸ್ ಏನು?
ಪ್ರೇಮವೋ, ದ್ವೇಷವೋ, ಥ್ರಿಲ್ಲರೋ?: ಇಲ್ಲಿದೆ ಅನೇಕ ತಿರುವುಗಳ 'ಫ್ಲರ್ಟ್' ಸಿನಿಮಾ ವಿಮರ್ಶೆ