ಗನ್‌ ಅಬ್ಬರ, ಗುಲಾಬಿ ಸುಂದರ: ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್ ಎಂಟರ್‌ಟೇನರ್‌ ಗನ್ಸ್‌ ಆ್ಯಂಡ್‌ ರೋಸಸ್‌

By Kannadaprabha News  |  First Published Jan 4, 2025, 1:35 PM IST

ಹೀರೋ ಎದ್ದು ನಿಲ್ಲುವ ಹೊತ್ತಿಗೆ ಸೌಂಡ್‌ ಮಾಡುವ ಚಿಳ್ಳೆಪಿಳ್ಳೆಗಳೂ ಸೈಲೆಂಟಾಗುತ್ತವೆ. ಆಮೇಲೆ ಏನಿದ್ರೂ ಸೂರ್ಯ ವರ್ಸ್‌. ತನ್ನ ಹೆಸರಿನಂತೇ ಸದಾ ಜ್ವಾಜ್ವಲ್ಯಮಾನನಾಗಿ ಹೊಳೆಯುವ ಹೀರೋ ಸೂರ್ಯ.


ಪೀಕೆ

ತನ್ನ ಎದುರು ನಿಲ್ಲುವ ಹತ್ತಾರು ಪುಡಿ ರೌಡಿಗಳನ್ನು ಗಾಳಿಯಲ್ಲಿ ಗಿರ ಗಿರ ತಿರುಗಿಸೋ ಹೀರೋ. ಗನ್ನು, ಮಚ್ಚಿನ ಅಬ್ಬರಕ್ಕೆ ಹೆದರಿ ಬಾಲ ಮಡಚಿಕೊಂಡು ಹೋಗುವ ಡೈಲಾಗ್, ನಿರಂತರವಾಗಿ ಕಣ್ಣಾಮುಚ್ಚಾಲೆಯಾಡುವ ಫ್ಲಾಶ್‌ಬ್ಯಾಕ್‌. . ಹೆಚ್‌ ಎಸ್‌ ಶ್ರೀನಿವಾಸ್‌ ಕುಮಾರ್‌ ನಿರ್ದೇಶನದ ‘ಗನ್ಸ್‌ ಆ್ಯಂಡ್‌ ರೋಸಸ್‌’ ಸಿನಿಮಾದ ಹೈಲೈಟ್‌ಗಳನ್ನು ಹೀಗೆಲ್ಲ ಪಟ್ಟಿ ಮಾಡುತ್ತಾ ಹೋಗಬಹುದು. ಇದೊಂದು ಔಟ್‌ ಆ್ಯಂಡ್‌ ಔಟ್‌ ಮಾಸ್‌ ಆ್ಯಕ್ಷನ್ ಎಂಟರ್‌ಟೇನರ್‌. ಆರಂಭದಲ್ಲಿ ಎನ್‌ಕೌಂಟರ್‌ ಸ್ಪೆಷಲಿಸ್ಟ್ ಚಿರಂತ್‌ (ಕಿಶೋರ್‌) ಬುಲೆಟ್‌ ಸೌಂಡಲ್ಲೇ ಹವಾ ಎಬ್ಬಿಸಿ ಮುಂದಿನ ಕಥೆ ಎದುರಿಸಲು ಪ್ರೇಕ್ಷಕರನ್ನು ಸಜ್ಜುಗೊಳಿಸುತ್ತಾರೆ. 

Tap to resize

Latest Videos

ಹೀರೋ ಎದ್ದು ನಿಲ್ಲುವ ಹೊತ್ತಿಗೆ ಸೌಂಡ್‌ ಮಾಡುವ ಚಿಳ್ಳೆಪಿಳ್ಳೆಗಳೂ ಸೈಲೆಂಟಾಗುತ್ತವೆ. ಆಮೇಲೆ ಏನಿದ್ರೂ ಸೂರ್ಯ ವರ್ಸ್‌. ತನ್ನ ಹೆಸರಿನಂತೇ ಸದಾ ಜ್ವಾಜ್ವಲ್ಯಮಾನನಾಗಿ ಹೊಳೆಯುವ ಹೀರೋ ಸೂರ್ಯ. ಹತ್ತಾರು ರೌಡಿಗಳನ್ನು ಏಕಕಾಲಕ್ಕೆ ಸದೆಬಡಿಯಬಲ್ಲಷ್ಟು ಪೌರುಷವಂತ. ಸಹಜವಾಗಿಯೇ ತನ್ನ ಗ್ಯಾಂಗ್‌ನ ಬ್ರಾಂಡ್‌ ಅಂಬಾಸಿಡರ್‌ನಂತಿರುವ ಸೂರ್ಯನನ್ನು ಕಂಡರೆ ಗ್ಯಾಂಗ್‌ ಲೀಡರ್‌ ನಾಯಕ್‌ಗೆ ಅಭಿಮಾನ. 

ಪೊಲೀಸ್‌ಗೆ ಧಮ್ಕಿ ಹಾಕಿ ಪೊಲೀಸ್‌ ವ್ಯಾನ್‌ನಲ್ಲೇ ಡ್ರಗ್ಸ್‌ ಪೆಡ್ಲಿಂಗ್ ಮಾಡುವ ಹೀರೋಗೆ, ವಿಂಟೇಜ್‌ ಬ್ಯೂಟಿಯೊಂದು ತಗಲಾಕಿಕೊಂಡ ಮೇಲೆ ಆತನ ಸ್ಥಿತಿ ಏನಾಯ್ತು ಅನ್ನೋದು ಸಿನಿಮಾದ ಮುಖ್ಯ ತಿರುವು. ಫೋಕಸ್ಡ್‌ ಆಗಿ ಕಥೆ ಹೇಳೋದ್ರಲ್ಲಾಗಲೀ, ಟರ್ನ್‌ ಆ್ಯಂಡ್‌ ಟ್ವಿಸ್ಟ್‌ ಕಾನ್ಸೆಪ್ಟ್‌ನಲ್ಲಾಗಲೀ ಅಷ್ಟಾಗಿ ನಂಬಿಕೆ ಇಲ್ಲದಂತೆ ತೋರುವ ನಿರ್ದೇಶಕರು ಫ್ಯಾಶ್‌ಬ್ಯಾಕ್‌ನಲ್ಲಿ ಕಥೆ ಹೇಳುವ ಟೆಕ್ನಿಕ್‌ಗೆ ಮನಸೋತಂತಿದೆ. ಸಿನಿಮಾದಲ್ಲಿ ತೃತೀಯ ಲಿಂಗದವರಿಗೆ ನೋವುಂಟು ಮಾಡುವಂಥಾ ಡೈಲಾಗ್‌ ಇದೆ. ಉಳಿದಂತೆ ನಾಯಕ ಅರ್ಜುನ್‌ ವಿಶ್ವಕರ್ಮ ಡೈಲಾಗ್‌ಗಿಂತ ಆ್ಯಕ್ಷನ್‌ನಲ್ಲೇ ಮಿಂಚುತ್ತಾರೆ. ಇವರ ಸ್ಕ್ರೀನ್‌ ಪ್ರೆಸೆನ್ಸ್‌ ಇಂಟರೆಸ್ಟಿಂಗ್‌.

ಗನ್ಸ್‌ ಆ್ಯಂಡ್‌ ರೋಸಸ್‌
ನಿರ್ದೇಶನ:
ಹೆಚ್‌ ಎಸ್‌ ಶ್ರೀನಿವಾಸ್‌ ಕುಮಾರ್
ತಾರಾಗಣ: ಅರ್ಜುನ್‌ ವಿಶ್ವಕರ್ಮ, ಯಶ್ವಿಕಾ ನಿಶ್ಕಲಾ, ಜೀವನ್‌ ರಿಚ್ಚಿ, ಕಿಶೋರ್‌ ಕುಮಾರ್‌

ಉತ್ತಮ ಪಾತ್ರದಲ್ಲಿ ನಟಿಸುತ್ತಿದ್ದೇನೆ: ನಿರ್ದೇಶಕ ಶ್ರೀನಿವಾಸ್‌ ಕುಮಾರ್‌, ‘ಹಲವು ವರ್ಷಗಳಿಂದ ಸಹ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ‌’ ಎಂದರು. ನಿರ್ಮಾಪಕ ಹೆಚ್ ಆರ್ ನಟರಾಜ್, ‘ನಾನು ರಾಜಕೀಯದಲ್ಲಿ ಸಕ್ರಿಯವಾಗಿದ್ದೇನೆ‌. ಬಿಲ್ಡರ್ ಕೂಡ. ನಿರ್ದೇಶಕ ಶ್ರೀನಿವಾಸ್ ನನ್ನ ಸ್ನೇಹಿತರು. ಅವರು ಹೇಳಿದ ಕತೆ ಕೇಳಿ ನಿರ್ಮಾಣಕ್ಕೆ ಮುಂದಾದೆ’ ಎಂದರು. ಅರ್ಜುನ್, ‘ಉತ್ತಮ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದರು. ಯಶ್ವಿಕ ನಿಷ್ಕಲ ನಾಯಕಿಯಾಗಿ ನಟಿಸುತ್ತಿದ್ದಾರೆ. ಶರತ್‌ ಕತೆ, ಸಂಭಾಷಣೆ ಬರೆದಿದ್ದಾರೆ. ಶಶಿಕುಮಾರ್ ಸಂಗೀತ ನಿರ್ದೇಶನ, ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಚಿತ್ರಕ್ಕಿದೆ.

click me!