ಈಗಿನ ಜನರೇಷನ್, ಅದರಲ್ಲೂ ಮುಖ್ಯವಾಗಿ ಕಾಲೇಜು ಹುಡುಗ-ಹುಡುಗಿಯರು ನೋಡಲೇಬೇಕಾದ ಕತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರ್ದೇಶಕರಾಗಿ ಪ್ರದೀಪ್ ದೊಡ್ಡಯ್ಯ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
ಆರ್.ಕೇಶವಮೂರ್ತಿ
ಕಾಲೇಜು, ಸೀನಿಯರ್ಸ್, ಜ್ಯೂನಿಯರ್ಸ್, ಪ್ರೀತಿ-ಪ್ರೇಮ, ಅನುಮಾನ, ಬ್ರೇಕಪ್, ಮತ್ತೆ ಪ್ಯಾಚಪ್, ಎಮೋಷನ್ ನೆರಳು, ಕೊನೆಗೊಂದು ಸಂದೇಶ... ಇವಿಷ್ಟನ್ನು ತೆರೆ ಮೇಲೆ ಜೋಡಿಸಿದರೆ ಅದು ‘ಔಟ್ ಆಫ್ ಸಿಲಬಸ್’ ಆಗುತ್ತದೆ. ಪಠ್ಯ ಪುಸ್ತಕಗಳಲ್ಲಿ ಹೇಳಿಕೊಡುವುದೇನು, ಜೀವನದಲ್ಲಿ ಎದುರಾಗುವುದೇನು, ಓದಿಗೂ ಜೀವನಕ್ಕೂ ಸಂಬಂಧ ಉಂಟಾ ಎನ್ನುವ ಸಂಗತಿಗಳನ್ನು ತೀರಾ ಸರಳವಾಗಿ ಹೇಳಿ ಮುಗಿಸಿರುವುದು ಕತೆಯ ಶಕ್ತಿ. ಜೀವನದ ಪಯಣದಲ್ಲಿ ನಾವೇ ದಕ್ಕಿಸಿಕೊಳ್ಳಬೇಕಾದ ತಿಳುವಳಿಕೆ ಎಂಬುದು ಒಂದು ಪ್ರೇಮ ಕತೆಯ ಮೂಲಕ ಹೇಳುತ್ತಾರೆ ನಿರ್ದೇಶಕರು.
undefined
ಈಗಿನ ಜನರೇಷನ್, ಅದರಲ್ಲೂ ಮುಖ್ಯವಾಗಿ ಕಾಲೇಜು ಹುಡುಗ-ಹುಡುಗಿಯರು ನೋಡಲೇಬೇಕಾದ ಕತೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರ್ದೇಶಕರಾಗಿ ಪ್ರದೀಪ್ ದೊಡ್ಡಯ್ಯ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಹೃತಿಕಾ ಶ್ರೀನಿವಾಸ್, ಭಾವುಕ ಸನ್ನಿವೇಶಗಳಲ್ಲಿ ಹೆಚ್ಚು ಇಷ್ಟವಾಗುತ್ತಾರೆ. ಅಚ್ಯುತ್ ಕುಮಾರ್ ಅವರದ್ದು ಜಾಲಿ ಜಾಲಿ ಪಾತ್ರ. ಮಹಾಂತೇಶ್ ಹಿರೇಮಠ ಹಾಗೂ ಜಹಾಂಗೀರ್ ಅವರು ಪ್ರೇಕ್ಷಕರನ್ನು ನಗಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಚಿತ್ರ : ಔಟ್ ಆಫ್ ಸಿಲಬಸ್
ತಾರಾಗಣ: ಪ್ರದೀಪ್ ದೊಡ್ಡಯ್ಯ, ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ರಾಮಕೃಷ್ಣ, ಮಹಾಂತೇಶ ಹಿರೇಮಠ, ಚಿತ್ಕಲಾ ಬಿರದಾರ್
ನಿರ್ದೇಶನ: ಪ್ರದೀಪ್ ದೊಡ್ಡಯ್ಯ
ರೇಟಿಂಗ್ : 3
5 ಸಾವಿರ ಟಿಕೆಟ್ ಮಾರಾಟ: ‘ಔಟ್ ಆಫ್ ಸಿಲಬಸ್’ ಚಿತ್ರದ 5 ಸಾವಿರ ಟಿಕೆಟ್‌ಗಳು ಬುಕ್ ಮೈ ಶೋ ಮೂಲಕ ಮುಂಗಡವಾಗಿ ಬುಕಿಂಗ್ ಆಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ‘ಔಟ್ ಆಫ್ ಸಿಲಬಸ್’ ಚಿತ್ರ ಹೊಸ ದಾಖಲೆ ಮಾಡಿದೆ. ಟೀಸರ್, ಚಿತ್ರದ ಪಾತ್ರಧಾರಿಗಳ ಔಟ್ ಲುಕ್, ಹಾಡುಗಳ ಮೂಲಕ ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ತಂಡವು ಸಿನಿಮಾ ಬಿಡುಗಡೆಗೆ ಮುನ್ನವೇ 50 ಸಾವಿರ ಟಿಕೆಟ್ ಮಾರಾಟದ ಗುರಿಯನ್ನು ಹಾಕಿಕೊಂಡಿದೆ.
ಪ್ರದೀಪ್ ದೊಡ್ಡಯ್ಯ ಹಾಗೂ ಹೃತಿಕಾ ಶ್ರೀನಿವಾಸ್ ಜೋಡಿಯಾಗಿ ನಟಿಸಿರುವ ‘ಔಟ್ ಆಫ್ ಸಿಲಬಸ್’ ಚಿತ್ರದ ಟ್ರೇಲರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ವಿಜಯಕಲಾ ಸುಧಾಕರ್, ತನುಷ್ ಎಸ್ ವಿ, ದೇಸಾಯಿ ಗೌಡ ನಿರ್ಮಿಸಿದ್ದಾರೆ. ನಿರ್ದೇಶಕ, ನಟ ಪ್ರದೀಪ್ ದೊಡ್ಡಯ್ಯ, ‘ನಟನೆ ಜತೆಗೆ ನಾನೇ ನಿರ್ದೇಶನ ಮಾಡಿದ್ದೇನೆ. ಮನರಂಜನೆಗೆ ಕೊರತೆ ಇಲ್ಲದಂತೆ ಕತೆ ರೂಪಿಸಿದ್ದೇನೆ. ಹೀಗಾಗಿ ಎಲ್ಲಾ ವರ್ಗದ ಜನರಿಗೆ ಸಿನಿಮಾ ಇಷ್ಟವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮಾತುಗಳಿಂದ ಸ್ಫೂರ್ತಿಗೊಳ್ಳುತ್ತಿರುವ ಪ್ರತಿಯೊಬ್ಬರಿಗೂ ಈ ಸಿನಿಮಾ ಕನೆಕ್ಟ್ ಆಗಲಿದೆ’ ಎನ್ನುತ್ತಾರೆ. ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಐಶ್ವರ್ಯ, ಪ್ರಕೃತಿ, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ನಟಿಸಿದ್ದಾರೆ.