ಕೆಲವೊಂದು ತರಕಾರಿಗಳಲ್ಲಿ ಪೋಷಕಾಂಶಗಳು ಅತ್ಯಧಿಕ ಪ್ರಮಾಣದಲ್ಲಿರುತ್ತವೆ.ಇವು ಡಯಟ್ ಫಾಲೋ ಮಾಡುವವವರಿಗೆ ತುಂಬಾ ಪ್ರಿಯವಾಗಿರುತ್ತವೆ. ಅಂಥ ತರಕಾರಿಗಳಲ್ಲಿ ಕೂರ್ಜೆಟ್ ಕೂಡ ಒಂದು. ಇದರಿಂದ ಸಬ್ಜಿ ತಯಾರಿಸುವುದು ಹೇಗೆ ಎಂಬುದನ್ನು ಬಾಲಿವುಡ್ ಬೆಡಗಿ ಅಲಿಯಾ ಭಟ್ ತಮ್ಮ ಯೂ ಟ್ಯೂಬ್ ಚಾನಲ್‍ನಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಬೆಡಗಿ ಅಲಿಯಾ ಭಟ್ ತನ್ನ ಬ್ಯೂಟಿ ಮೂಲಕ ಪಡ್ಡೆ ಹುಡುಗರ ಮನಸ್ಸು ಗೆದ್ದವರು. ಇವರ ಬ್ಯೂಟಿ, ಫಿಟ್‍ನೆಸ್‍ಗೆ ಯುವಕರು ಮಾತ್ರವಲ್ಲ,ಯುವತಿಯರು ಕೂಡ ಫಿದಾ ಆಗಿದ್ದಾರೆ.ತಮ್ಮ ಡಯಟ್ ಸೀಕ್ರೇಟ್ ಹಾಗೂ ಆರೋಗ್ಯಕರ ಆಹಾರ ಅಭ್ಯಾಸಗಳನ್ನು ಯೂ ಟ್ಯೂಬ್ ಚಾನೆಲ್ ಮೂಲಕ ಬಹಿರಂಗಪಡಿಸುತ್ತಿರುವ ಅಲಿಯಾ ಭಟ್, ಇತ್ತೀಚೆಗೆ ‘ಇನ್ ಮೈ ಕಿಚನ್’ ಸೀರಿಸ್‍ನಲ್ಲಿ ದಕ್ಷಿಣ ಭಾರತ ಶೈಲಿಯಲ್ಲಿ ಕೂರ್ಜೆಟ್ (ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ) ಪಲ್ಯ ಮಾಡೋದು ಹೇಗೆ ಎಂಬುದನ್ನು ವೀಕ್ಷಕರ ಮುಂದಿಟ್ಟಿದ್ದಾರೆ.
ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!
ಖಾದ್ಯದ ಹೆಸರು: ಕೂರ್ಜೆಟ್ (ಚೀನೀಕಾಯಿ) ಪಲ್ಯ
ಬೇಕಾಗುವ ಸಾಮಗ್ರಿಗಳು:
ಚೀನೀಕಾಯಿ (ಕೂರ್ಜೆಟ್)-1
ಅಡುಗೆ ಎಣ್ಣೆ-1/2 ಟೇಬಲ್ ಚಮಚ
ಸಾಸಿವೆ-1/4 ಟೇಬಲ್ ಚಮಚ
ಇಂಗು-2 ಟೀ ಚಮಚ
ಕರಿಬೇವಿನ ಎಲೆಗಳು
ಕತ್ತರಿಸಿದ ಹಸಿ ಮೆಣಸು-1
ಕೊತ್ತಂಬರಿ ಪುಡಿ-1/2 ಟೀ ಚಮಚ
ಜೀರಿಗೆ ಪುಡಿ-1/4 ಟೀ ಚಮಚ
ಸೋಂಪು ಕಾಳು-1/4 ಟೀ ಚಮಚ
ಡ್ರೈ ಮ್ಯಾಂಗೋ ಪೌಡರ್-1/4 ಟೀ ಚಮಚ
ತೆಂಗಿನಕಾಯಿ ತುರಿ-2 ಟೀ ಚಮಚ
ಮಾಡುವ ವಿಧಾನ:
• ಚೀನೀಕಾಯಿಯನ್ನು ಚಿಕ್ಕ ಹೋಳುಗಳನ್ನಾಗಿ ಕತ್ತರಿಸಬೇಕು.
• ಫ್ರೈಯಿಂಗ್ ಪ್ಯಾನ್ ಸ್ಟೌವ್ ಮೇಲಿಟ್ಟು ಬಿಸಿಯಾದ ಬಳಿಕ ಅದಕ್ಕೆ ಅಡುಗೆಎಣ್ಣೆ ಹಾಕಿ.ಆ ಬಳಿಕ ಸಾಸಿವೆ,ಇಂಗು,ಕರಿಬೇವು ಹಾಗೂ ಹಸಿಮೆಣಸು ಹಾಕಿ ಫ್ರೈ ಮಾಡಿ.
• ಈ ಮಿಶ್ರಣಕ್ಕೆ ಚೀನೀಕಾಯಿ ಹೋಳುಗಳನ್ನು ಹಾಕಿ.ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಕಿ ತಿರುಗಿಸಿ.ಈಗ ಪ್ಯಾನ್ ಅನ್ನು ಮುಚ್ಚಿ 2 ನಿಮಿಷಗಳ ಕಾಲ ಬೇಯಿಸಿ.ಆ ಬಳಿಕ ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಸೋಂಪು ಪುಡಿ ಹಾಗೂ ಡ್ರೈ ಮ್ಯಾಂಗೋ ಪುಡಿ ಸೇರಿಸಿ ಮಿಕ್ಸ್ ಮಾಡಿ.
• ಆ ಬಳಿಕ ತೆಂಗಿನಕಾಯಿ ತುರಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಸ್ವಲ್ಪ ಹೊತ್ತು ಕೈಯಾಡಿಸಿದರೆ ಚೀನೀಕಾಯಿ ಪಲ್ಯ ರೆಡಿ ಟು ಸರ್ವ್.
ಸಾಫ್ಟ್ ಇಡ್ಲಿ ಮಾಡೋದು ನಿಮಗೆ ಗೊತ್ತಾ? ಕತ್ರಿನಾ ಕೈಫ್ ಹೇಳಿಕೊಡ್ತಾರೆ ಕಲೀರಿ!
ಚೀನೀಕಾಯಿ ಆರೋಗ್ಯ ಪ್ರಯೋಜನಗಳೇನು?
ಸೂಪರ್ ಫುಡ್ ಕೂರ್ಜೆಟ್: ಈ ತರಕಾರಿಯಲ್ಲಿ ಖನಿಜಾಂಶಗಳು, ಜೀವಸತ್ತ್ವಗಳು ಹಾಗೂ ಆಂಟಿಆಕ್ಸಿಡೆಂಟ್‍ಗಳು ಹೇರಳವಾಗಿದ್ದು,ಕ್ಯಾನ್ಸರ್‍ನಿಂದ ರಕ್ಷಣೆ ನೀಡುವ ಗುಣ ಹೊಂದಿರುವುದನ್ನು ಆರೋಗ್ಯತಜ್ಞರು ದೃಢಪಡಿಸಿದ್ದಾರೆ. ಕೂರ್ಜೆಟ್‍ನಲ್ಲಿ ನೀರಿನ ಅಂಶ ಹೆಚ್ಚಿರುವ ಜೊತೆಗೆ ನಾರಿನಂಶ ಕೂಡ ಅಧಿಕವಾಗಿದ್ದು,ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.ಕೂರ್ಜೆಟ್ ಶಕ್ತಿವರ್ಧಕವೂ ಆಗಿದೆ.ಇದರಲ್ಲಿ ಶಕ್ತಿದಾಯಕ ಪೋಷಕಾಂಶಗಳಾದ ಫೋಲೇಟ್,ವಿಟಮಿನ್ ಬಿ, ರೈಬೋಫ್ಲವಿನ್ ಅಧಿಕವಾಗಿದ್ದು,ಇವು ಮಿದುಳಿಗೆ ಬೂಸ್ಟ್ ನೀಡುವ ಪೋಷಕಾಂಶಗಳಾಗಿವೆ.ಅಲ್ಲದೆ, ಮೂಡ್ ಹಾಗೂ ಶಕ್ತಿಗೆ ಸಂಬಂಧಿಸಿದ ಹಾರ್ಮೋನ್‍ಗಳನ್ನು ಪ್ರಚೋದಿಸುವ ಗುಣ ಹೊಂದಿದೆ.ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ.ಕೊಲೆಸ್ಟ್ರಾಲ್ ಹಾಗೂ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ತಗ್ಗಿಸುತ್ತದೆ.ಈ ತರಕಾರಿಯಲ್ಲಿ ಆಂಟಿಆಕ್ಸಿಡೆಂಟ್ ಗುಣವಿರುವ ಕಾರಣ ತ್ವಚೆಯ ಕಾಂತಿಯನ್ನು ಕಾಪಾಡುತ್ತದೆ.
ಒಂದೇ ಫುಡ್ ತಿನ್ನಲು ಬೇಜಾರು: ಈ ಅಡುಗೆ ವಿಡಿಯೋದಲ್ಲಿ ಅಲಿಯಾ ತನ್ನ ಡಯಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಒಂದೇ ತರಹದ ಆಹಾರ ಸೇವಿಸುವುದರಿಂದ ಬೇಸರ ಮೂಡುವ ಕಾರಣ ಆಗಾಗ ತನ್ನ ಡಯಟ್‍ನಲ್ಲಿ ಬದಲಾವಣೆ ಮಾಡುತ್ತಿರುತ್ತೇನೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ,ನಾನು ಸೇವಿಸಿದ ಆಹಾರ ಆರೋಗ್ಯಕರವಲ್ಲ ಎಂಬುದು ತಿಳಿದ ತಕ್ಷಣ ನನಗೆ ಬೇಸರವಾಗುತ್ತದೆ. ಅಡುಗೆ ಶೋಗಳನ್ನು ನೋಡುವುದೆಂದ್ರೆ ನನಗೆ ತುಂಬಾ ಇಷ್ಟವೆಂದು ಕೂಡ ಅಲಿಯಾ ತಿಳಿಸಿದ್ದಾರೆ.‘ಇನ್ ಮೈ ಕಿಚನ್’ ಸೀರೀಸ್‍ನಲ್ಲಿ ಅಲಿಯಾ ತನ್ನಿಷ್ಟದ ಅಡುಗೆಗಳನ್ನು ಸ್ವತಃ ಸಿದ್ಧಪಡಿಸುವ ಮೂಲಕ ವೀಕ್ಷಕರಿಗೆ ಡಯಟ್ ಪಾಠ ಮಾಡುತ್ತಿದ್ದಾರೆ.ಹೆಸರುಕಾಳಿನ ಹಲ್ವಾ ಹಾಗೂ ಹಾಲಿನ ಖೀರ್ ತನ್ನ ನೆಚ್ಚಿನ ಖಾದ್ಯಗಳೆಂಬ ಮಾಹಿತಿಯನ್ನು ಕೂಡ ಅಲಿಯಾ ಈ ಶೋನಲ್ಲಿ ಬಹಿರಂಗಪಡಿಸಿದ್ದಾರೆ.