ಸ್ನೇಹಿತ ಯುವರಾಜ್‌ಗಾಗಿ ದೀಪಿಕಾ ಪಡುಕೋಣೆ ಪ್ರೀತಿಯನ್ನ ತ್ಯಾಗ ಮಾಡಿದ್ರಾ ಎಂಎಸ್‌ ಧೋನಿ?

By Santosh Naik  |  First Published Jul 22, 2024, 5:34 PM IST

deepika padukone confesses love for dhoni ಎಂಎಸ್‌ ಧೋನಿ ಇತ್ತೀಚೆಗೆ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಪತ್ನಿ ಸಾಕ್ಷಿ ಸಿಂಗ್‌ ಜೊತೆ ಧೋನಿ ಡಾನ್ಸ್‌ ಕೂಡ ಮಾಡಿರುವ ವಿಡಿಯೋ ವೈರಲ್‌ ಆಗಿದ್ದವು.
 


ಟೀಮ್‌ ಇಂಡಿಯಾ ಮಾಜಿ ನಾಯಕ ಹಾಗೂ 2011ರ ಏಕದಿನ ವಿಶ್ವಕಪ್‌ ಗೆಲ್ಲಿಸಿಕೊಟ್ಟ ಕ್ಯಾಪ್ಟನ್‌ ಕೂಲ್‌ ಎಂಎಸ್‌ ಧೋನಿ ಇತ್ತೀಚೆಗೆ ತಮ್ಮ 15ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಪತ್ನಿ ಸಾಕ್ಷಿ ಸಿಂಗ್‌ ಜೊತೆ ಧೋನಿ ರೋಮ್ಯಾಂಟಿಕ್‌ ಡಾನ್ಸ್‌ ಮಾಡಿರುವ ವಿಡಿಯೋ ಕೂಡ ವೈರಲ್‌ ಆಗಿದ್ದವು. ಸಾಕಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ ಮದುವೆಯಾಗುವ ಮುನ್ನ ಇಂಡಿಯನ್‌ ಕ್ರಿಕೆಟ್‌ ಟೀಮ್‌ನ ಕ್ಯಾಪ್ಟನ್‌ ಕೂಲ್‌ ಹಲವು ರೋಮ್ಯಾಂಟಿಕ್‌ ರಿಲೇಷನ್‌ಷಿಪ್‌ಗಳನ್ನು ಹೊಂದಿದ್ದರು. ಆದರೆ, ಅದಾವುದನ್ನೂ ಅವರು ಸಾರ್ವಜನಿಕವಾಗಿ ಎಂದೂ ತೋರಿಸಿಕೊಂಡಿರಲಿಲ್ಲ. ಕೆಲವೊಂದು ಗಾಸಿಪ್‌ಗಳು ಬರುತ್ತಿದ್ದರೂ, ಅಷ್ಟೇ ಬೇಗ ಅವುಗಳು ತಣ್ಣಗಾಗುತ್ತಿದ್ದವು. ಸಾಕ್ಷಿ ಸಿಂಗ್‌ ಅವರನ್ನು ಮದುವೆಯಾಗುವ ಮುನ್ನ ಧೋನಿ ಬಾಳಿನಲ್ಲಿ ಹಲವು ಹುಡುಗಿಯರು ಬಂದಿದ್ದರು. ಇದರಲ್ಲಿ ಇನ್ನೇನು ಮದುವೆಯಾಗಿಯೇ ಬಿಟ್ಟರು ಎನ್ನುವ ಹಂತಕ್ಕೆ ಬಂದು ಬ್ರೇಕಪ್‌ ಆಗಿದ್ದು ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ.

ಕನ್ನಡದ ಐಶ್ವರ್ಯ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಬಂದಿದ್ದ ದೀಪಿಕಾ ಪಡುಕೋಣೆ, ಆ ಬಳಿಕ ಓಂ ಶಾಂತಿ ಓಂ ಸಿನಿಮಾದ ಮೂಲಕ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿ ದೊಡ್ಡ ಸ್ಟಾರ್‌ ಆಗಿರುವುದು ಈಗ ಇತಿಹಾಸ. ಇದೆಲ್ಲವೂ ಆಗುವ ಮುನ್ನ ದೀಪಿಕಾ ಪಡುಕೋಣೆ ಮಾಡೆಲ್‌ ಆಗಿದ್ದರು. ವಿಜಯ್‌ ಮಲ್ಯ ಅವರ ಕಿಂಗ್‌ಫಿಶರ್‌ ಕ್ಯಾಲೆಂಡರ್‌ಗೆ ಬಿಕಿನಿಯಲ್ಲಿ ಆಕೆ ಪೋಸ್‌ ನೀಡಿದ್ದರು. ಕೋಲ್ಗೇಟ್‌ನ ಜಾಹೀರಾತಿನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಇನ್ನೊಂದೆಡೆ ಎಂಎಸ್‌ ಧೋನಿ 2007ರಲ್ಲಿ ಟಿ20 ವಿಶ್ವಕಪ್‌ ಗೆಲ್ಲಿಸಿಕೊಟ್ಟ ನಾಯಕರಾಗಿ ಜನಪ್ರಿಯರಾಗಿದ್ದರು. ಓಂ ಶಾಂತಿ ಓಂ ಸಿನಿಮಾ ರಿಲೀಸ್‌ ಆಗುವ ಮುನ್ನವೇ ಧೋನಿ ಹಾಗೂ ದೀಪಿಕಾ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಮೊದಲ ನೋಟದಲ್ಲಿಯೇ ಇಬ್ಬರ ನಡುವೆ ಲವ್‌ ಎಟ್‌ ಫರ್ಸ್ಟ್‌ ಸೈಟ್‌ ಕೂಡ ಆಗಿತ್ತು.

Tap to resize

Latest Videos

undefined

ಧೋನಿ ಹಾಗೂ ದೀಪಿಕಾ ಪಡುಕೋಣೆ ನಡುವಿನ ಅಫೇರ್‌ ಬಗ್ಗೆ ಹೆಚ್ಚುನವರಿಗೆ ತಿಳಿದಿಲ್ಲ. 2007-08 ಧೋನಿ ಕ್ರೀಡಾ ಜೀವನದಲ್ಲಿಯೇ ಉತ್ತುಂಗದ ಸಮಯ. ಈ ಹಂತದಲ್ಲಿಯೇ ಅವರು ದೀಪಿಕಾ ಅವರ ಪ್ರೇಮಪಾಶದಲ್ಲಿ ಬಿದ್ದಿದ್ದರು. ಇದು ಅಂದಿನ ಟೀಮ್‌ ಇಂಡಿಯಾದ ಕೆಲವು ಸಹ ಆಟಗಾರರಿಗೂ ತಿಳಿದಿತ್ತು. ಧೋನಿ, ದೀಪಿಕಾ ಪಡುಕೋಣೆ ಎದುರು ಮದುವೆ ಪ್ರಸ್ತಾಪವನ್ನೂ ಇಟ್ಟಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ಹಂತದಲ್ಲಿ ದೀಪಿಕಾ ಪಡುಕೋಣೆ ಮಾಡಿದ ಒಂದು ತಪ್ಪು ನಿರ್ಧಾರದಿಂದಾಗಿ ಇಬ್ಬರ ಮದುವೆ ಸಾಧ್ಯವಾಗಿರ್ಲಿಲ್ಲ.

2007ನೇ ವರ್ಷದ ಕೊನೆಯ ಹಂತದಲ್ಲಿ ದೀಪಿಕಾ ಪಡುಕೋಣೆ ಹೆಸರು ಟೀಮ್‌ ಇಂಡಿಯಾದ ಮತ್ತೊಬ್ಬ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಜೊತೆ ಕೇಳಿ ಬಂದಿತು. ಸಾಮಾನ್ಯವಾಗಿ ಕ್ರಿಕೆಟ್‌ ಹಾಗೂ ಬಾಲಿವುಡ್‌ನಲ್ಲಿ ಯಾವುದೇ ಗಾಸಿಪ್‌ಗಳು ಬಂದರೂ ಅದಕ್ಕೆ ಕಾರಣ ಇದ್ದೇ ಇರುತ್ತದೆ. ಯುವರಾಜ್‌ ಹಾಗೂ ದೀಪಿಕಾ ಪಡುಕೋಣೆ ಸಂಬಂಧ ಗೊತ್ತಾದ ಬಳಿಕ, ಧೋನಿ ಹೃದಯ ಭಗ್ನಗೊಂಡಿತ್ತು. 2007ರಲ್ಲಿ ಜೈಪುರದಲ್ಲಿ ನಡೆದ ಪಂದ್ಯವೊಂದರಲ್ಲಿ ಯುವರಾಜ್‌ ಸಿಂಗ್‌ರನ್ನು ಚಿಯರ್‌ ಮಾಡುವ ಸಲುವಾಗಿ ದೀಪಿಕಾ ಸ್ಟೇಡಿಯಂಗೆ ಬಂದಿದ್ದರು. ಅಪಾರ ಪ್ರೀತಿ ಇರಿಸಿಕೊಂಡಿದ್ದ ಧೋನಿ ಅಂದೇ ತಮ್ಮ ಜೀವನದಲ್ಲಿ 'ದೀಪಿಕಾ' ಇಲ್ಲ ಅನ್ನೋದನ್ನ ತೀರ್ಮಾನಿಸಿಬಿಟ್ಟಿದ್ದರು. ಈ ವಿಚಾರವನ್ನೂ ಕೂಡ ಅಲ್ಲಿಗೇ ನಿಲ್ಲಿಸಿದ್ದ ಎಂಎಸ್‌ ಧೋನಿ ಎಂದಿನ ಕೂಲ್‌ ಆಟಿಟ್ಯೂಡ್‌ನೊಂದಿಗೆ ಕ್ರಿಕೆಟ್‌ ಆಟ ಮುಂದುವರಿಸಿ ದೊಡ್ಡ ಯಶಸ್ಸು ಕೂಡ ಕಂಡರು.

ದೀಪಿಕಾ ಕತ್ರಿನಾಗೆ ಕೈ ಕೊಟ್ಟ ಬಳಿಕ ತನಗೆ ಸಿಕ್ಕ ಸ್ತ್ರೀಲೋಲ ಇಮೇಜ್ ಬಗ್ಗೆ ರಣ್ಬೀರ್ ಬಿಚ್ಚುಮಾತು

ಇನ್ನು ಯುವರಾಜ್‌ ಸಿಂಗ್‌ ಜೊತೆಗಿನ ದೀಪಿಕಾ ಪಡುಕೋಣೆ ಅಫೇರ್‌ ಕೂಡ ಹೆಚ್ಚಿನ ಕಾಲ ಉಳಿಯಲಿಲ್ಲ. ಇನ್ನೊಂದೆಡೆ ಧೋನಿ ಹಾಗೂ ದೀಪಿಕಾ ಕೂಡ ಆ ಬಳಿಕ ಎಲ್ಲೂ ಜೊತೆಯಾಗಿ ಕಾಣಿಸಿಕೊಳ್ಳಲಿಲ್ಲ. 2007ರ ಬಳಿಕ ಕೆಲವೊಂದು ಕಾರ್ಯಕ್ರಮದಲ್ಲಿ ಯುವರಾಜ್‌ ಹಾಗೂ ದೀಪಿಕಾ ಒಟ್ಟಾಗಿ ಕಾಣಿಸಿಕೊಂಡರು. ದೀಪಿಕಾ ಪಡುಕೋಣೆ ಅವರ 22ನೇ ಜನ್ಮದಿನದಂದು ಇಬ್ಬರೂ ಒಟ್ಟಿಗೆ ಪಬ್‌ನಿಂದ ಹೊರಬಂದಿದ್ದನ್ನು ಕ್ಯಾಮೆರಾಗಳು ಕೂಡ ಸೆರೆಹಿಡಿದಿದ್ದವು. ಆತ್ಮೀಯ ಸ್ನೇಹಿತ ಯುವರಾಜ್‌ ಸಿಂಗ್‌ಗಾಗಿ ಧೋನಿ ತಮ್ಮ ಪ್ರೀತಿಯನ್ನು ತ್ಯಾಗ ಮಾಡಿದ್ದರು.

ಅನಂತ್​ ಅಂಬಾನಿ ಮದುವೆಯಲ್ಲಿ ಗರ್ಭಿಣಿ ದೀಪಿಕಾ ಝಗಮಗ... ಫಿಟ್​ನೆಸ್​ ತಲೆ ಕೆಡಿಸಿಕೊಂಡ ಫ್ಯಾನ್ಸ್​

2008ರಲ್ಲಿ ದೀಪಿಕಾ ಪಡುಕೋಣೆ ಹಾಗೂ ಯುವರಾಜ್‌ ಸಿಂಗ್‌ ಬ್ರೇಕಪ್‌ ಮಾಡಿಕೊಂಡರು. ಬಹಳ ದೀರ್ಘ ಕಾಲದವರೆಗೂ ಇವರಿಬ್ಬರ ನಡುವಿನ ಬ್ರೇಕ್ಅಪ್‌ಗೆ ಕಾರಣವೇನು ಅನ್ನೋದು ಗೊತ್ತಾಗಿರಲಿಲ್ಲ. ಆದರೆ, ಒಂದು ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಬ್ರೇಕಪ್‌ನ ಕಾರಣವನ್ನು ಬಹಿರಂಗ ಮಾಡಿದ್ದರು. ತಮ್ಮ ಬದುಕಿನ ಕೆಲವೊಂದು ನಿರ್ಧಾರಗಳಿಗೆ ಯುವರಾಜ್‌ ಸಿಂಗ್‌ ಮೂಗು ತೂರಿಸುತ್ತಿದ್ದರು. ಇದು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ನಮ್ಮಿಬ್ಬರ ನಡುವಿನ ಸಂಬಂಧ ಹಳಸಿತ್ತು. ಇದಕ್ಕಾಗಿ ಬ್ರೇಕಪ್‌ ಮಾಡಿಕೊಂಡೆವು ಎಂದು ದೀಪಿಕಾ ತಿಳಿಸಿದ್ದರು.
 

click me!