
ಒಂದೇ ರುಟೀನ್ ಫಾಲೋ ಮಾಡಿ ಲೈಫ್ ಬೋರಾಗಿರುತ್ತೆ. ಒಂದೇ ಕಡೆ ಸ್ಟ್ರಕ್ ಆಗಿರೋ ಅನುಭವವಾಗುತ್ತೆ. ಇದ್ರಿಂದ ಹೊಸ ಆಲೋಚನೆ, ಹೊಸ ಉತ್ಸಾಹ ಬರಲು ಸಾಧ್ಯವೇ ಇಲ್ಲ. ಜೀವನದಲ್ಲಿ ಚಿಗುಪ್ಸೆ ಬರೋದು ಸಹಜ. ನೀವೂ ಲೈಫ್ ನಲ್ಲಿ ಒಂದೇ ಕಡೆ ಸ್ಟ್ರಕ್ ಆಗಿದ್ದೀರಿ ಅಂದ್ರೆ ನಟ ಆರ್. ಮಾಧವನ್ ಸಲಹೆಯನ್ನು ಫಾಲೋ ಮಾಡಿ.
ನಟ ಆರ್ ಮಾಧವನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗೆ ಸರಳ ಸಲಹೆ ನೀಡಿದ್ದಾರೆ. ಆದ್ರೆ ಅವರ ಸಲಹೆ ನಮ್ಮ ಜೀವನ ಬದಲಿಸುತ್ತದೆ. ರಸವಿಲ್ಲದ ನಮ್ಮ ಜೀವನದಲ್ಲಿ ಮತ್ತೆ ಉತ್ಸಾಹ ನೀಡುತ್ತೆ. ಹೊಸ ಕೆಲಸಕ್ಕೆ ನಮ್ಮನ್ನು ಪ್ರೋತ್ಸಾಹಿಸುತ್ತೆ. ಮಾಧವನ್ ಪ್ರಕಾರ, ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೆಲ್ಸದಲ್ಲಿ ಒಂದೇ ಕಡೆ ಸ್ಟ್ರಕ್ ಆಗಿರ್ತಾರೆ. ಪ್ರತಿ ದಿನ ಅದೇ ಜಾಗ, ಅದೇ ಕೆಲಸ, ಅದೇ ಮುಖಗಳು, ಅದೇ ವಾತಾವರಣ. ಪ್ರತಿ ದಿನ ಬೆಳಿಗ್ಗೆ ಎದ್ದ ತಕ್ಷಣ ಹೊಸತು ಅನ್ನೋದು ಇರೋದೇ ಇಲ್ಲ. ಏನು ಮಾಡ್ಬೇಕು ಅನ್ನೋದು ನಮಗೆ ಮೊದಲೇ ಗೊತ್ತಿರೋದ್ರಿಂದ ಕೆಲ್ಸದಲ್ಲೂ ಉತ್ಸಾಹ ಕಳೆದುಕೊಳ್ತೇವೆ. ಮಶಿನ್ ರೀತಿ ದಿನ ಕಳೀತೇವೆ. ನಮ್ಮ ಜೀವನ ಮತ್ತೆ ಖುಷಿಯಿಂದ ತುಂಬಿರಬೇಕು, ಮಾಡ್ತಿರೋದು ಹಳೆ ಕೆಲ್ಸವಾದ್ರೂ ಅದನ್ನು ಸಂತೋಷದಿಂದ ಮಾಡ್ಬೇಕು ಅಂದ್ರೆ ವೀಕೆಂಡ್ ನಲ್ಲಿ ಚೇಂಜ್ ಬೇಕು.
Chanakya Niti: ಸೋತಾಗ ಈ 4 ತಪ್ಪುಗಳನ್ನು ಮಾಡಿದರೆ ಶತ್ರುಗಳೇ ಬಲಾಢ್ಯರಾಗುತ್ತಾರೆ,
ವಾರ ಪೂರ್ತಿ ಕೆಲಸದಲ್ಲಿ ಬ್ಯುಸಿ ಇರುವ ನೀವು ವಾರಾಂತ್ಯದವನ್ನು ಭಿನ್ನವಾಗಿ ಕಳೆಯಿರಿ ಎನ್ನುತ್ತಾರೆ ಮಾಧವನ್. ವಾರಾಂತ್ಯದಲ್ಲೂ ಅದೇ ಜಾಗದಲ್ಲಿದ್ರೆ ನಿಮ್ಮ ಬೋರಿಂಗ್ ಲೈಫ್ ಗೆ ಬಣ್ಣ ಸಿಗೋದಿಲ್ಲ. ವಾರಾಂತ್ಯದಲ್ಲಿ ಸಣ್ಣಪುಟ್ಟ ಬದಲಾವಣೆ, ಜಾಗ ಚೇಂಜ್ ಆದ್ರೆ ಮತ್ತೆ ಮನಸ್ಸು ಪುಟಿದೇಳುತ್ತದೆ.
ನೀವು ವೀಕೆಂಡ್ ನಲ್ಲಿ ಹೆಚ್ಚಿನ ಖರ್ಚು ಮಾಡ್ಬೇಕಾಗಿಲ್ಲ. ಮನೆ ಬಿಟ್ಟು ದೂರ ಎಲ್ಲೂ ಪ್ರಯಾಣ ಮಾಡ್ಬೇಕಾಗಿಲ್ಲ. ಮನೆ ಹತ್ತಿರ ಇರುವ ಕಾಫಿ ಶಾಪ್, ಹೊಟೇಲ್ ಇಲ್ಲ ಪಾರ್ಕ್ ಗೆ ಹೋಗಿ ಬನ್ನಿ. ಹತ್ತಿರದ ಪ್ರದೇಶಕ್ಕೆ ಟ್ರಿಪ್ ಪ್ಲಾನ್ ಕೂಡ ಮಾಡ್ಬಹುದು. ಹೊಸ ಜಾಗವನ್ನು ನೀವು ಕಣ್ತುಂಬಿಕೊಳ್ಬಹುದು. ಜಾಗ ಬದಲಾವಣೆ ನಿಮ್ಮ ಮನಸನ್ನು ರೀಬೂಟ್ ಮಾಡುತ್ತೆ. ಉತ್ಸಾಹದ ಶಕ್ತಿ ನೀಡುತ್ತೆ. ಅಲ್ಲಿ ಸಿಗುವ ಜನರ ಜೊತೆ ಮಾತನಾಡ್ತೀರಿ, ಅಲ್ಲಿಗೆ ಬರುವ ಭಿನ್ನ ಜನರನ್ನು ನೋಡ್ತೀರಿ, ಇದೆಲ್ಲ ಹೊಸ ದಾರಿ ತೋರಿಸುತ್ತೆ. ಕ್ರಿಯೇಟಿವಿಟಿ ಹಾಗೂ ಪ್ರೊಡೆಕ್ಟಿವಿಟಿಗೆ ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತೆ.
AI Brainfry: ನಾವಲ್ಲ, AI ನಮ್ಮನ್ನ ಆಳ್ತಿದೆ.. ಹಾರ್ವರ್ಡ್ ಸಂಶೋಧನೆಯಲ್ಲಿ
ವೀಕೆಂಡ್ ಒಂದು ದಿನ ನೀವು ಸ್ಪೇಷಲ್ ಆಗಿ ಕಳೆದ್ರೆ ಸಾಕು. ಸೋಮವಾರ ಹಳೆ ಕೆಲ್ಸವಾದ್ರೂ ಅದ್ರಲ್ಲಿ ನಿಮಗೆ ಉತ್ಸಾಹ ಕಂಡು ಬರುತ್ತೆ. ಒಂದೇ ಕಡೆ ಹೂತುಹೋಗಿದ್ದ ಜೀವನದಲ್ಲಿ ಬದಲಾವಣೆ ಕಾಣಿಸುತ್ತೆ. ವಾರ ಪೂರ್ತಿ ಕೆಲ್ಸ ಮಾಡಿರುವ ಜನರಿಗೆ ವಾರಾಂತ್ಯದಲ್ಲಿ ಮನೆಯಿಂದ ಹೊರ ಹೋಗೋದು ಬೇಸರದ ಸಂಗತಿ. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ. ಆದ್ರೆ ಈ ವಿಶ್ರಾಂತಿ ಜೊತೆಗೆ ಸ್ವಲ್ಪ ಸಮಯ ಹೊರಗಿನ ಪ್ರಪಂಚ, ಹೊಸಬರ ಭೇಟಿ ನಿಮ್ಮನ್ನು ಬದಲಿಸುತ್ತದೆ. ಉದ್ದೇಶಪೂರ್ವಕವಾಗಿ ಹೊಸ ಅನುಭವಗಳನ್ನು ಹುಡುಕುವ ಮೂಲಕ ಮತ್ತು ಸ್ಥಳಗಳನ್ನು ಬದಲಾಯಿಸುವ ಮೂಲಕ, ಜನರು ಮಾನಸಿಕ ನಿರ್ಬಂಧಗಳನ್ನು ಮುರಿಯಬಹುದು. ಉತ್ಸಾಹವನ್ನು ಮರು ಸ್ಥಾಪಿಸಬಹುದು ಎಂದು ಮಾಧವನ್ ಹೇಳ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.