ಹೇರ್​ಡೈನಿಂದ ಹೆಚ್ಚುವ ಕ್ಯಾನ್ಸರ್! ಕೂದಲು ಶಾಶ್ವತ ಕಪ್ಪಾಗಿಸಲು ಯೋಗ ಗುರು ಸಿಂಪಲ್​ ಟಿಪ್ಸ್​ ಕೇಳಿ...

Published : Jan 08, 2025, 12:44 PM ISTUpdated : Jan 08, 2025, 12:55 PM IST
ಹೇರ್​ಡೈನಿಂದ ಹೆಚ್ಚುವ ಕ್ಯಾನ್ಸರ್! ಕೂದಲು ಶಾಶ್ವತ ಕಪ್ಪಾಗಿಸಲು ಯೋಗ ಗುರು ಸಿಂಪಲ್​ ಟಿಪ್ಸ್​ ಕೇಳಿ...

ಸಾರಾಂಶ

ಇಂದಿನ ಜೀವನಶೈಲಿಯಿಂದ ಚಿಕ್ಕವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತಿದೆ. ಹೇರ್ ಡೈ ಬಳಕೆ ಕ್ಯಾನ್ಸರ್, ಮಾನಸಿಕ ರೋಗಗಳಿಗೆ ಕಾರಣವಾಗಬಹುದು. ಯೋಗಗುರು ಚನ್ನಬಸವಣ್ಣನವರು ಸೀಬೆ ಎಲೆ, ಮೆಹಂದಿ, ಲಿಂಬೆರಸದ ಮಿಶ್ರಣದಿಂದ ಕೂದಲು ಕಪ್ಪಾಗಿಸುವ ಸುಲಭ ವಿಧಾನ ತಿಳಿಸಿದ್ದಾರೆ. ಸರಿಯಾಗಿ ಬಳಸಿದರೆ ಶಾಶ್ವತ ಪರಿಹಾರ ಸಿಗಬಹುದು ಎನ್ನುತ್ತಾರೆ.

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 25-30 ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ  ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್​ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ. 

ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ.  ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ. ಇವೆಲ್ಲಾ ಕೆಲವರಿಗೆ ಗೊತ್ತಿದ್ದರೂ ವಯಸ್ಸಾಗದಂತೆ ಕಾಣಬೇಕು ಎನ್ನುವ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವ ಅನಿವಾರ್ಯತೆಯೂ ಇದೆ. ಇದಕ್ಕಾಗಿಯೇ, ಸುಲಭದಲ್ಲಿ ತಲೆಗೂದಲನ್ನು ಕಪ್ಪಗಾಗಿಸಿ ಎಂದು ಹಲವಾರು ಯೂಟ್ಯೂಬರ್​ಗಳು  ಟಿಪ್ಸ್​ ಕೊಡುತ್ತಿರುವುದು ಹೆಚ್ಚುತ್ತಿದೆ. ಅದನ್ನು ನಂಬಿ ಪ್ರಯೋಗ ಮಾಡಿದರೆ ಅದರಲ್ಲಿ ಹೆಚ್ಚಿನವು ಫೇಕ್​ ಆಗಿರುತ್ತದೆ. ಒಂದಿಷ್ಟು ಲೈಕ್ಸ್​, ವ್ಯೂಸ್​​ಗೋಸ್ಕರ್​ ಇಷ್ಟಬಂದ ರೀತಿಯಲ್ಲಿ ವಿಡಿಯೋ ಮಾಡಲಾಗುತ್ತದೆ. ಅದಕ್ಕೆ ಬರುವ ಕಮೆಂಟ್ಸ್​ಗಳನ್ನು ನೋಡಿದರೆ, ಎಷ್ಟು ಮಂದಿ ಮೋಸ ಹೋಗಿದ್ದಾರೆ ಎನ್ನುವುದು ತಿಳಿಯುತ್ತದೆ.

ಉರಿ ಮೂತ್ರಕ್ಕೆ ಐದೇ ನಿಮಿಷಗಳಲ್ಲಿ ಪರಿಹಾರ: ಸದ್ಗುರು ಜಗ್ಗಿ ವಾಸುದೇವ ಟಿಪ್ಸ್​ ಕೇಳಿ...

ಆದರೆ ಇದೀಗ ಯೋಗಗುರು ವೈದ್ಯ ಶ್ರೀ ಚನ್ನಬಸವಣ್ಣ ಅವರು ವಿವಿಧ ಮಂದಿಯ ಮೇಲೆ ಪ್ರಯೋಗ ಮಾಡಿ, ಪರ್ಮನೆಂಟ್​ ಆಗಿ ತಲೆಗೂದಲನ್ನು ಕಪ್ಪಗಾಗಿಸುರುವುದಾಗಿ ಹೇಳಿದ್ದು ಅದರ ಟಿಪ್ಸ್​ ಕೊಟ್ಟಿದ್ದಾರೆ.  ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ತಾವು ಹೇಳಿದಂತೆಯೇ ಮಾಡಿದರೆ ಖಂಡಿತವಾಗಿಯೂ ಫಲಿತಾಂಶ ಸಿಗುತ್ತದೆ ಎನ್ನುವುದು ಅವರ ಮಾತು. ಯೋಗಗುರು ಹೇಳಿದ್ದು ಇಷ್ಟು:   ಸೀಬೆ ಗಿಡದ ಎಲೆಯನ್ನು ತೆಗೆದು ಸುಮಾರು  50 ಗ್ರಾಮ್​ನಷ್ಟು ಪೇಸ್ಟ್​ ತಯಾರಿಸಿಕೊಳ್ಳಬೇಕು. ಅಷ್ಟೇ ಸಮ ಪ್ರಮಾಣದಲ್ಲಿ ಮೆಹಂದಿ ಪೌಡರ್​ ಸೇರಿಸಿಕೊಳ್ಳಬೇಕು. 40-50 ಎಂಎಲ್​ನಷ್ಟು ಲಿಂಬೆಹಣ್ಣಿನ ರಸ ಸೇರಿಸಬೇಕು. ಕಬ್ಬಿಣದ ಪಾತ್ರೆಯಲ್ಲಿಯೇ ಹಾಕಿ ಮುಚ್ಚಿಡಬೇಕು. 2-3 ದಿನ ಹಾಗೆಯೇ ಇಡಬೇಕು. ನಡುನಡುವೆ ನೋಡುತ್ತಾ ತಿರುಗಿಸುತ್ತಾ ಇರಬೇಕು. ಇಲ್ಲದಿದ್ದರೆ ಬೂಸ್ಟ್​ ಬರುತ್ತದೆ. ಹಾಗೆಯೇ ಮತ್ತೆ ಮುಚ್ಚಿಟ್ಟು ಮತ್ತೆ 2-3 ದಿನಕ್ಕೊಮ್ಮೆ ನೋಡಿ ಮಿಶ್ರಣವನ್ನು ತಿರುಗಿಸುತ್ತಾ ಇರಬೇಕು. 9ನೇ ದಿನದವರೆಗೂ ಹೀಗೆಯೇ ಮಾಡಬೇಕು. 9ನೇ ದಿನ ಸಿಕ್ಕಾಪಟ್ಟೆ ಕಪ್ಪು ಆಗಿರುತ್ತದೆ. ಅದರ ಬಣ್ಣ ಏನಾದ್ರೂ ಬಟ್ಟೆಯ ಮೇಲೆ ಬಿದ್ದರೆ ಕಲೆ ಹೋಗುವುದಿಲ್ಲ, ಅಷ್ಟು ಕಪ್ಪಾಗಿರುತ್ತದೆ. 

ಅದನ್ನು ತಲೆಗೆ ಅಪ್ಲೈ ಮಾಡಬೇಕು. ಆದರೆ ಅದಕ್ಕೂ ಒಂದು ವಿಧಾನವಿದೆ. ನೀವು ಬಳಸಿರುವ ಕೆಮಿಕಲ್​ ಹೇರ್​ಡೈ ಸಂಪೂರ್ಣವಾಗಿ ಕೂದಲಿನಿಂದ ಹೋಗಿ ಕೂದಲು ಬಿಳಿಯಾಗಿರಬೇಕು. ಸ್ವಲ್ಪವೇ ಕೆಮಿಕಲ್​ ಇದ್ದರೂ ಈ ಲೇಪನ ವರ್ಕ್​ ಆಗುವುದಿಲ್ಲ. ಆದ್ದರಿಂದ ಸಂಪೂರ್ಣವಾಗಿ ಕೆಮಿಕಲ್​ ಹೋಗಬೇಕು. ರಾತ್ರಿ ತಲೆಗೆ ಬೇರಿನಿಂದ ತುದಿಯವರೆಗೂ ಸರಿಯಾಗಿ ಲೇಪಿಸಿ ಬೆಳಿಗ್ಗೆ ಎದ್ದು ಕೊಬ್ಬರಿ ಎಣ್ಣೆ ಹಚ್ಚಿ ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಬೇಕು. ಮಧ್ಯಾಹ್ನದ ಹೊತ್ತು ಅಂಟವಾಳದ ಕಾಯಿ ಅಥವಾ ಮುಲ್ತಾನಿ ಮಿಟ್ಟಿಯಿಂದ ತಲೆ ತೊಳೆದುಕೊಳ್ಳಬೇಕು. ಮೂರ್ನಾಲ್ಕು ದಿನ ಬಿಟ್ಟು ಮತ್ತೆ ತಲೆ ತೊಳೆದುಕೊಂಡರೆ, ಶಾಶ್ವತವಾಗಿ ಕೂದಲು ಕಪ್ಪಾಗುತ್ತದೆ. ಅದು ಹೋಗುವುದೇ ಇಲ್ಲ ಎಂದಿದ್ದಾರೆ. 

ದುಡ್ಡಿನ ಸಮಸ್ಯೆನಾ? ಮದ್ವೆ-ಮಕ್ಕಳು ಆಗ್ತಿಲ್ವಾ? ಹಾಗಿದ್ರೆ ಈ ನಂಬರ್​ ಬರೆದು ನೋಡಿ: ಸಂಖ್ಯಾ ಶಾಸ್ತ್ರಜ್ಞೆ ಹೇಳಿದ್ದೇನು?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!