
ನಾನು ಕೆಲಸ ಮಾಡುವ ಜಾಗದಲ್ಲಿ ನನ್ನ ಸಹೋದ್ಯೋಗಿಯಿಂದ ನಿತ್ಯವೂ ಕಿರಿಕಿರಿಯಾಗುತ್ತಿದೆ. ಕೆಲಸಕ್ಕೆ ಹೋಗುವುದೇ ನರಕ ಎನ್ನುವಂತಾಗಿದೆ. ಹೆಂಗಸಾದ ನನ್ನನ್ನು ಅವನು ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾನೆ. ಇದನ್ನು ಮೇಲಿನ ಅಧಿಕಾರಿಗಳಿಗೆ ಹೇಳೋಣ ಎಂದರೆ ಭಯವಾಗುತ್ತೆ. ಅವರು ನನ್ನ ಮಾತನ್ನು ನಂಬುತ್ತಾರಾ ಎನ್ನಿಸುತ್ತೆ. ಇದನ್ನು ನನ್ನ ಗಂಡನ ಬಳಿಯೂ ಹೇಳಿಕೊಳ್ಳಲು ಮನಸ್ಸಾಗುತ್ತಿಲ್ಲ. ಒಮ್ಮೆ ಅವನಿಗೆ ನೇರವಾಗಿ ನನ್ನ ಜೊತೆಗೆ ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಹೇಳಿದರೂ ಅವರ ವರ್ತನೆ ಬದಲಾಗಿಲ್ಲ. ಅವರು ನನಗಿಂತ ಹಿರಿಯ ಅಧಿಕಾರಿ ಆಗಿರುವುದರಿಂದ ನಾನು ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಏನಾದರೂ ಸಲಹೆ ಇದ್ದರೆ ಕೊಡಿ.
-ಅನಾಮಿಕ
ಈ ಮಹಿಳೆಗೆ ಸಲಹೆ ನೀಡಿ. ನಿಮ್ಮ ಸಲಹೆಯನ್ನು suvarnanewsindia@gmail.com ಗೆ ಕಳುಹಿಸಿ.
-ಸಾಂದರ್ಭಿಕ ಚಿತ್ರ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.