ರೊಮ್ಯಾಂಟಿಕ್ ಫ್ಲರ್ಟ್ ಎಂದ್ರೆ ಹೆಣ್ಣಿಗಿಷ್ಟ...!

By Web DeskFirst Published Jan 10, 2019, 3:37 PM IST
Highlights

ದಾಂಪತ್ಯದಲ್ಲಿ ಸುಖ ಹೆಚ್ಚಿಸೋ ಸೆಕ್ಸ್‌ನಲ್ಲಿ ಏಕಾತಾನತೆ ಇರಬಾರದು. ಜೋಡಿಗೆ ಅದ್ಭುತ ಅನುಭವ ಸಿಗಬೇಕೆಂದರೆ ತುಸು ತರಲೆ ತರಲೆ ಮಾತುಗಳು, ಪ್ರೀತಿಯ ಹೊಗಳಿಕೆ....ಜತೆಗೆ ‌ಗೌರವಯುತ ನಡೆ ಎಲ್ಲವೂ ಅಗತ್ಯ....

 

ಪ್ರೀತಿ ಮತ್ತು ಸೆಕ್ಸ್ ಪ್ರತಿಯೊಬ್ಬರ ದಾಂಪತ್ಯ ಜೀವನಕ್ಕೆ ಸುಖದ ಮೆಟ್ಟಿಲುಗಳು. ಪತ್ನಿಯನ್ನು ತನ್ನಿಷ್ಟದಂತೆ ಬಳಸಬಹುದೆಂದು ಬಹುತೇಕ ಪುರುಷರ ಏಕಮುಖದ ಅಭಿಪ್ರಾಯವಾಗಿರುತ್ತದೆ. ಆದರೆ, ಯಾವಾಗ ತರಲೆ, ಸಮಾನತೆ, ಗೌರವ....ಎಲ್ಲವೂ ಮೇಳೈಸುತ್ತೋ ಆಗ ದಾಂಪತ್ಯ ಆದರ್ಶವಾಗುತ್ತದೆ.

ಹೆಣ್ಣು ಮೂಲತಃ ಭಾವನಾಜೀವಿ. ಆದರೆ, ತಾನು ಬೆಳೆದ ವಾತಾವಾರಣ ಹಾಗೂ ಪತಿ ನಡೆದುಕೊಳ್ಳುವ ರೀತಿಯಿಂದ ತನ್ನಿಚ್ಛೆಯನ್ನು ವ್ಯಕ್ತಪಡಿಸುವ ಉಸಾಬರಿಗೇ ಹೋಗುವುದಿಲ್ಲ. ಆದರೆ, ಸ್ವಲ್ಪ ಆಕೆಯ ಆಸೆ-ಆಕಾಂಕ್ಷೆಗಳಿಗೆ ಪತಿ ಬೆಲೆ ಕೊಟ್ಟು ಬಿಟ್ಟರೆ, ಇನ್ನೇನು ಬೇಕು ಹೆಣ್ಣಿಗೆ ಹೇಳಿ? ಅಷ್ಟಕ್ಕೂ ಹೆಣ್ಣು ಸೆಕ್ಸ್‌ಗೂ ಮುನ್ನ ಏನೆಲ್ಲಾ ಬಯಸುತ್ತಾಳೆ ಗೊತ್ತಾ?

ಕಿಸ್: ಮುತ್ತಿಡೋ ಗಂಡನೆಂದರೆ ಹೆಣ್ಣಿಗೆ ಹೆಚ್ಚುತ್ತೆ ಒಲವು. ಪ್ರೀತಿಯುಕ್ತ ಮುತ್ತಿನಿಂದಲೇ ರೊಮ್ಯಾನ್ಸ್ ಆರಂಭಿಸಿದರೆ ಮನಸ್ಸು ನಿರಾಳವಾಗುತ್ತದೆ. ಆತಂಕ ದೂರವಾಗುತ್ತದೆ. ಹೆಣ್ಣು ಮುಂದಿನ ನಡೆಗೆ ಮಾನಸಿಕವಾಗಿ ಸನ್ನದ್ಧಳಾಗಿ ಬಿಡುತ್ತಾಳೆ.

ಆ ಹುಡುಗ ನಿಜವಾಗ್ಲೂ ಲವ್ ಮಾಡ್ತಾ ಇದ್ದಾನಾ?

ಫ್ಲರ್ಟ್ ಮಾಡಿ: ಏನೇನೋ ಯೋಚಿಸಬೇಡಿ. ಇದೊಂಥರಾ ರೊಮ್ಯಾಂಟಿಕ್ ಫ್ಲರ್ಟ್. ನೀ ಕೊಡೆ, ನಾ ಬಿಡೆ....ಎನ್ನುವ ರೀತಿ. ಕೊಡ್ತೀನಿ ಹೇಳಿ ಕೊಡದೇ ಆಟವಾಡಿಸುವುದು, ಸತಾಯಿಸಿ ಕೊಟ್ಟು ಬಿಟ್ಟರೆ ಹೆಣ್ಣು ಸಂತೃಪ್ತಳಾಗುತ್ತಾಳೆ.

ಡರ್ಟಿ ಟಾಕ್: ಆತಂಕವನ್ನು ದೂರ ಮಾಡಲು, ದೈಹಿಕ ಹಾಗೂ ಮಾನಸಿಕ ಸುಖಕ್ಕೆ ಹೆಣ್ಣು ಗಂಡು ದೈಹಿಕ ಸಂಪರ್ಕ ಬಯಸುತ್ತಾರೆ. ಆಗ ಬರೀ ಸೀರಿಯಸ್ ಆದ ವಿಷಯಗಳ ಬಗ್ಗೆ ಮಾತನಾಡೋ ಬದಲು, ತುಸು ಡರ್ಟಿ ಟಾಕ್ ಇರಲಿ. ಎಷ್ಟೇ ಅಂದರೂ ನಾಲ್ಕು ಗೋಡೆ ಮಧ್ಯೆ ನೀವಿಬ್ಬರೇ ತಾನೇ ಇರುವುದು. ಇಬ್ಬರಿಗೂ ಖುಷಿ ಎನಿಸುವಂಥ ಮಾತಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

ಗೌರವ: ಕೈ ತುಂಬಾ ದುಡಿಯುವ ಗಂಡ, ಕೇಳಿದ್ದನ್ನು ಕೊಡಿಸೋ ಒಲವು...ಏನೇ ಇದ್ದರೂ ಹೆಣ್ಣು ಅಂತಿಮವಾಗಿ ಬಯಸುವುದು ಗೌರವವನ್ನು. ಇದೇ ಗೌರವವನ್ನು ಆಕೆ ಬೆಡ್ ಮೇಲೂ ನಿರೀಕ್ಷಿಸುತ್ತಾಳೆ. ಆಕೆಯ ಇಷ್ಟವನ್ನೂ ಅರಿತು ಗಂಡು ಮುನ್ನಡಿ ಇಡಲೆಂದು ಇಚ್ಛಿಸುತ್ತಾಳೆ. ಆಕೆಯ ಮನಸ್ಸಿನಲ್ಲಿ ಏನಿದೆ, ಮೂಡ್ ಇದ್ಯಾ ಎಂಬುದನ್ನು ಅರಿತೇ ರೊಮ್ಯಾನ್ಸ್‌ಗೆ ಮುಂದಾದರೆ ಇಬ್ಬರೂ ಸುಖಾನುಭವ ಪಡೆಯಬಹದು.

ಹುಟ್ಟಿದ ತಿಂಗಳು ಬಿಚ್ಚಿಟ್ತು ಸೆಕ್ಸ್ ಲೈಫ್ ಸಿಕ್ರೇಟ್!

ಪ್ರೀತಿ ಮಾತು: ಭರವಸೆಯುಳ್ಳ ಪ್ರೀತಿಯ ಮಾತುಗಳಿಗಾಗಿ ಹೆಣ್ಣು ಹಂಬಲಿಸುತ್ತಾಳೆ. ಇದರಿಂದ ಆಕೆ ಭದ್ರತಾ ಭಾವ ಹೊಂದುತ್ತಾಳೆ. ಆ ಭದ್ರತಾ ಭಾವವೇ ಆಕೆಗೆ ಎಲ್ಲಿಲ್ಲದ ವಿಶ್ವಾಸ ತುಂಬುತ್ತೆ. ಈ ವಿಶ್ವಾಸವೇ ಸಾಕು ಅವಳ ಸುಖ, ನೆಮ್ಮದಿಯ ನಿದ್ರೆಗೆ. ಸಮಾಜದಲ್ಲಿಯೂ ವಿಶ್ವಾಸಯುಳ್ಳ ಹೆಣ್ಣು ಎಂದು ಹೆದರುತ್ತೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಒಂದೊಳ್ಳೆ ಸಂಸಾರ ಮುನ್ನುಡಿ ಬರೆಯುತ್ತೆ.

.

click me!