ಜೀವನದಲ್ಲಿ ಖುಷ್ ಖುಷಿಯಾಗಿರೋದು ಅಷ್ಟು ಸುಲಭವಲ್ಲ. ಆದರೊಮ್ಮೆ ಖುಷಿ ಆಗಿರ್ಬೇಕು ಎಂದು ಡಿಸೈಡ್ ಮಾಡಿದರೆ ಅದಕ್ಕೆ ಬದ್ಧರಾಗಿಲು ಕೆಲವೊಂದು ಟಿಪ್ಸ್ ಫಾಲೋ ಮಾಡಬೇಕು. ಏನವು?
ಪ್ರೀತಿ ಅಂದ್ಮೇಲೆ ಜಗಳ- ವಾದ- ಕೋಪ ಸಹಜ. ಅಷ್ಟೇ ಅಲ್ಲ ಇವುಗಳು ಒಂದಕ್ಕೊಂದು ಲಿಂಕ್ ಆಗಿರುತ್ತವೆ. ಇವೆಲ್ಲ ಇಲ್ಲವಾದರೆ ಅದು ಪ್ರೀತಿನೇ ಅಲ್ಲ...ಬಟ್ ಆ ಲಿಮಿಟ್ ಲೈನ್ ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್.....
ಹೆಣ್ಣು ಮಕ್ಕಳ ಮೂಡ್ ಬದಲಾಗುತ್ತಿದ್ದಂತೆ ಜೋಡಿಗಳಲ್ಲಿ ಮನಸ್ತಾಪ ಉಂಟಾಗುತ್ತದೆ. ಒಬ್ಬರು ಒಮ್ಮೆ ಡಾಮಿನೇಟ್ ಮಾಡಿದರೆ, ಇನ್ನೊಮ್ಮೆ ಇನ್ನೊಬ್ಬರು ಡಾಮಿನೇಟ್ ಮಾಡುತ್ತಾರೆ. ಸಂದರ್ಭಕ್ಕೆ ತಕ್ಕಂತೆ ಒಬ್ಬರಿಗೊಬ್ಬರು ಪೂರಕವಾಗಿ ಸ್ಪಂದಿಸುತ್ತಾರೆ.
ಪ್ರೀತಿ ಪಾತ್ರರೊಂದಿಗಿದ್ದಾಗ ಧನಾತ್ಮಕ ಎನರ್ಜಿ ಪಡೆಯಲು ಬಯಸುತ್ತೇವೆ. ಆದರೆ ಅವರು ನಿಮ್ಮನ್ನು ಕೀಳಾಗಿ ನೋಡುವುದು ಅಥವಾ ನಿಮಗೆ ಅವರಿಂದ ನೆಗಟಿವ್ ರೆಸ್ಪಾನ್ಸ್ ಸಿಗುತ್ತಿದೆ, ಎಂದರೆ ದೂರವಾಗಿ ಬಿಡಿ.
ಕಳೆದ ದಿನಗಳ ಬಗ್ಗೆ ಚಿಂತಿಸಿ ಪ್ರಯೋಜನವಿಲ್ಲ, ಮಾಡಿದ ತಪ್ಪಿನಿಂದ ಪಾಠ ಕಲಿತು ಖುಷಿಯಾಗಿರಲು ದಾರಿ ಹುಡುಕಿ. ನಿಮ್ಮ ಸಂಗಾತಿಗೆ ನಿಮ್ಮ ಹಿಂದಿನ ಜೀವನ ಹಾಗೂ ತಪ್ಪುಗಳ ಬಗ್ಗೆ ಗೊತ್ತಿರಲಿ. ಆದರೆ ಅದನ್ನು ಒಪ್ಪಿಕೊಂಡು ಬಿಟ್ಟರೆ ಜೀವನ ಸುಗಮ.
ತಪ್ಪುಗಳ ಬಗ್ಗೆ ಯೋಚಿಸದಿರಿ. ಬೇರೆಯವರು ಮಾಡಿದರೆ ತಪ್ಪು, ತಾವು ಮಾಡಿದರೆ ಸರಿ ಎಂಬ ಮನೋಭಾವವನ್ನು ತೆಗೆದು ಹಾಕಿ. ಇಬ್ಬರು ಪ್ರಮಾಣಿಕರಾಗಿರುವುದರಿಂದ ಸಾಕಷ್ಟು ಕೆಟ್ಟ ಅನುಭವಗಳನ್ನು ತಪ್ಪಿಸಬಹುದು.
ನಿಮ್ಮಗೆಂದೇ ಸಮಯ ಮೀಸಲಿಡಿ. ಇದರಿಂದ ನಿಮ್ಮೆಎಲ್ಲ ಕೆಲಸಕ್ಕೂ ಸಮಯ ಸಿಕ್ಕಂತಾಗುತ್ತದೆ. ನಿಮ್ಮವರನ್ನೂ ಸಂತೋಷದಿಂದ ಇಡ ಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.