
ಯೌವನದಲ್ಲಿ ಹುಡುಗ ಹುಡುಗಿಯರು ನೋಡಿ ಆಕರ್ಷಣೆಕೊಳ್ಳುವುದು ಸಹಜ. ಒಬ್ಬಬ್ಬರಿಗೂ ಒಂದೊಂದು ರೀತಿಯ ಭಾವನೆಗಳಿರುತ್ತವೆ. ಕೆಲವೊಂದು ಸಂಶೋಧನೆಗಳ ಪ್ರಕಾರ ಹುಡುಗಿಯರನ್ನು ಹುಡುಗರು ನೋಡುವಾಗ ಈ ಕೆಳಗಿನವುಗಳನ್ನು ಗಮನಿಸುತ್ತಾರೆ.
ತುಟಿಗಳು: ಹುಡುಗಿಯನ್ನು ನೋಡುವಾಗ ಹುಡುಗರು ಮೊದಲು ತುಟಿಯನ್ನು ಹೆಚ್ಚು ಗಮನಿಸುತ್ತಾರಂತೆ. ತುಟಿಗಳಿಂದಲೇ ಆಕರ್ಷಿತರಾಗುವುದು ಸಾಮಾನ್ಯವಂತೆ.
ಸ್ತನದಾಕರ್ಷಣೆ: ಹುಡುಗಿಯರ ದೇಹದ ಭಂಗಿಯು ಪಡ್ಡೆ ಹುಡುಗರಿಗೆ ಇಷ್ಟವಾಗುತ್ತದೆ. ಸ್ತನಗಳನ್ನು ನೋಡಿ ಆಕರ್ಷಿತರಾಗುವುದು ಸಹಜ ಎನ್ನುತ್ತಾರೆ ಮನೋಶಾಸ್ತ್ರಜ್ಞರು. ಆದರೆ ಎಲ್ಲ ಪುರುಷರ ಗುಣವಾಗಿರುವುದಿಲ್ಲ. ಇದು ಸ್ವಭಾವಿತರ ಮೇಲೆ ಅವಲಂಬತವಾಗಿರುತ್ತದೆ.
ಕೂದಲು: ಕೂದಲನ್ನು ಯಾವ ರೀತಿ ವಿನ್ಯಾಸ ಮಾಡಿಕೊಳ್ಳುತ್ತಾಳೆ ಎಂಬ ಅಂಶವು ಹುಡುಗರ ನೋಟದ ಪ್ರಧಾನ ಅಂಶವಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂದಲಿನ ಕಡೆ ಹೆಚ್ಚು ಆಸಕ್ತಿ ತೋರುವುದು ಮಾಮೂಲಿ ವಿಷಯವಾಗಿದೆ.
ಕಣ್ಣು: ಕಣ್ಣು ಸಹ ಹುಡುಗರ ನೋಟದ ಕೇಂದ್ರ ಬಿಂದು. ಕಣ್ಣೋಟಗಳೆ ಮನಸ್ಸಿನ ಭಾವನೆಗಳನ್ನು ಬದಲಿಸಿ ಸ್ನೇಹಕ್ಕೆ ತಿರುಗುತ್ತದೆ.
ತುಂಟನಗೆ: ತುಂಟತನದ ತುಂಟನಗೆ ಕೂಡ ಯುವಕರ ನೋಟದ ಆಕರ್ಷಣೆ. ಕೆಲವು ಹುಡುಗರಂತೂ ಹುಡುಗಿಯರ ತುಂಟನಗೆಗೆ ಬಿದ್ದು ಬಿಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.