ನನ್ನ ಸಹೋದ್ಯೋಗಿಯೊಂದಿಗೆ ಅಫೇರ್ ಇದೆ; ಏನು ಮಾಡಲಿ?

First Published May 2, 2018, 4:10 PM IST
Highlights

ನನಗೆ ಮದುವೆಯಾಗಿ ಆರು ವರ್ಷವಾಗಿದೆ. ಕಳೆದ ಮೂರು ವರ್ಷಗಳಿಂದ  ನನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೇನೆ. ಇದು ನನ್ನ ಅವಳನ್ನು ಬಿಟ್ಟರೆ ಬೇರೆ ಯಾವ ಮೂರನೇ ವ್ಯಕ್ತಿಗೂ ಗೊತ್ತಿಲ್ಲ. ಆದರೆ ಈಗ ನಾನು ಮಾಡಿದ್ದು ತಪ್ಪು ಎಂಬುದರ ಅರಿವಾಗಿದೆ. ಅವಳೊಂದಿಗಿನ ಸಂಬಂಧಕ್ಕೆ ಬ್ರೇಕ್ ಹಾಕಬೇಕು ಎಂದುಕೊಂಡಿದ್ದೇನೆ. ಇದನ್ನು ಅವಳೊಂದಿಗೆ ಹೇಳಲೂ ಆಗುತ್ತಿಲ್ಲ. ಹೇಳದೇ ಇರಲೂ ಆಗುತ್ತಿಲ್ಲ. ಒಮ್ಮೆ ಕಟ್ಟಿಕೊಂಡ ಸಂಬಂಧವನ್ನು ಈಗ  ಕಡಿದುಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ಗೊತ್ತಾಗುತ್ತಿದೆ. ಈ ಗೊಂದಲದಿಂದ ಹೊರ ಬಂದು ನನ್ನ ಹೆಂಡತಿಯೊಂದಿಗೆ ನೆಮ್ಮದಿಯಾಗಿ ಜೀವನ ನಡೆಸಲು ಏನು ಮಾಡಬೇಕು ಎನ್ನುವ ಸಲಹೆ ಕೊಡಿ ಎಂದು ಕೇಳಿದ್ದ ಅನಾಮಧೇಯ ವ್ಯಕ್ತಿಯ
ಪ್ರಶ್ನೆಗೆ ಬಂದ ಉತ್ತರಗಳು ಇಲ್ಲಿವೆ. 

ನನಗೆ ಮದುವೆಯಾಗಿ ಆರು ವರ್ಷವಾಗಿದೆ. ಕಳೆದ ಮೂರು ವರ್ಷಗಳಿಂದ  ನನ್ನ ಸಹೋದ್ಯೋಗಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೇನೆ. ಇದು ನನ್ನ ಅವಳನ್ನು ಬಿಟ್ಟರೆ ಬೇರೆ ಯಾವ ಮೂರನೇ ವ್ಯಕ್ತಿಗೂ ಗೊತ್ತಿಲ್ಲ. ಆದರೆ ಈಗ ನಾನು ಮಾಡಿದ್ದು ತಪ್ಪು ಎಂಬುದರ ಅರಿವಾಗಿದೆ. ಅವಳೊಂದಿಗಿನ ಸಂಬಂಧಕ್ಕೆ ಬ್ರೇಕ್ ಹಾಕಬೇಕು ಎಂದುಕೊಂಡಿದ್ದೇನೆ. ಇದನ್ನು ಅವಳೊಂದಿಗೆ ಹೇಳಲೂ ಆಗುತ್ತಿಲ್ಲ. ಹೇಳದೇ ಇರಲೂ ಆಗುತ್ತಿಲ್ಲ. ಒಮ್ಮೆ ಕಟ್ಟಿಕೊಂಡ ಸಂಬಂಧವನ್ನು ಈಗ ಕಡಿದುಕೊಳ್ಳುವುದು ಎಷ್ಟು ಕಷ್ಟ ಎನ್ನುವುದು ಗೊತ್ತಾಗುತ್ತಿದೆ. ಈ ಗೊಂದಲದಿಂದ ಹೊರ ಬಂದು ನನ್ನ ಹೆಂಡತಿಯೊಂದಿಗೆ ನೆಮ್ಮದಿಯಾಗಿ ಜೀವನ ನಡೆಸಲು ಏನು ಮಾಡಬೇಕು ಎನ್ನುವ ಸಲಹೆ ಕೊಡಿ ಎಂದು ಕೇಳಿದ್ದ ಅನಾಮಧೇಯ ವ್ಯಕ್ತಿಯ  ಪ್ರಶ್ನೆಗೆ ಬಂದ ಉತ್ತರಗಳು ಇಲ್ಲಿವೆ. 

ಎಚ್ಚರಿಕೆ ನೀಡಿ 
ನೀವು ಈಗ ಮುಳ್ಳಿನ ಮೇಲೆ ನಡೆಯುತ್ತಿದ್ದೀರಿ. ಸ್ವಲ್ಪ ಎಚ್ಚರ ತಪ್ಪಿದರೂ  ಜೀವನವೇ ಅಲ್ಲೋಲ ಕಲ್ಲೋಲವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಬಾಯಿಸಿ. ನಿಮ್ಮ ಸಹೋದ್ಯೋಗಿಯ ಮನಸ್ಥಿತಿಯನ್ನು  ಅರಿತುಕೊಂಡು ಅವರೊಂದಿಗೆ ಸೂಕ್ತವಾಗಿ ಮಾತನಾಡಿ ಸಂಬಂಧವನ್ನು ಸರಿ ಮಾಡಿಕೊಳ್ಳಿ. ಇಲ್ಲವಾದರೆ ನಿಮ್ಮಿಬ್ಬರಿಗೆ ಮಾತ್ರ ಗೊತ್ತಿರುವ ಸಂಬಂಧ ಮುಂದೆ  ಎಲ್ಲರಿಗೂ ಗೊತ್ತಾಗಿ ನಿಮ್ಮ ಸಂಸಾರದಲ್ಲಿ ದೊಡ್ಡ ಕಲಹವಾಗಬಹುದು. ನಿಮ್ಮ
ಸಹೋದ್ಯೋಗಿಯನ್ನು ನಿಧಾನಕ್ಕೆ ಒಪ್ಪಿಸಿ. ನಿಮ್ಮ ಪರಿಸ್ಥಿತಿ, ಮುಂದಿನ ಭವಿಷ್ಯದ ಬಗ್ಗೆ  ಅವರಿಗೆ ಮನವರಿಕೆಯಾಗುವ ಹಾಗೆ ತಿಳಿ ಹೇಳಿ.

-ಅನಾಮಿಕ 

ಸಹೋದ್ಯೋಗಿಗೆ ವಾಸ್ತವ ತಿಳಿಸಿ
ನೀವು ಈಗ ನಿಮ್ಮ ಸಹೋದ್ಯೋಗಿಯೊಂದಿಗಿನ ಸಂಬಂಧಕ್ಕೆ ಬ್ರೇಕ್ ಹಾಕಿ ನಿಮ್ಮ ಹೆಂಡತಿಯೊಂದಿಗೆ ಪ್ರಾಮಾಣಿಕವಾಗಿ ಇರಲು ಬಯಸುತ್ತಿದ್ದೀರಿ. ಇದಕ್ಕೆ ಮುಖ್ಯವಾಗಿ ನಿಮ್ಮ ಸಹೋದ್ಯೋಗಿ ಒಪ್ಪಿಕೊಳ್ಳಬೇಕು. ಒಂದು ವೇಳೆ ನೀವು ಏಕಾಏಕಿಯಾಗಿ ಅವರೊಂದಿಗಿನ ಸಂಬಂಧ ಕಳೆದುಕೊಂಡು ಅವರ ಇಷ್ಟಕಷ್ಟಗಳಿಗೆ ಬೆಲೆ ನೀಡಲಿಲ್ಲ ಎಂದರೆ ಮುಂದೆ ಇದೆ ನಿಮಗೆ ಮುಳುವಾಗಬಹುದು. ನಿಮ್ಮ ಸಂಬಂಧ ಬಯಲಿಗೆ ಬರಬಹುದು. ಆಗ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಮೊದಲು ನಿಮ್ಮ ಸಹೋದ್ಯೋಗಿಯೊಂದಿಗೆ ಮಾತನಾಡಿ, ಅವರ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡು ಮುಂದುವರೆಯಿರಿ. ಸಾಧ್ಯವಾದರೆ ಪರಿಣಿತರ ಸಹಾಯ ಪಡೆದುಕೊಳ್ಳಿ.

-ಅನಾಮಿಕ 

click me!