ಮನೆ ನಿರ್ವಹಣೆ ಮಾಡುವುದರಲ್ಲಿ ಮತ್ತು ಎಲ್ಲಾ ವಸ್ತುಗಳನ್ನು 100 ಪ್ರತಿಶತ ಬಳಸಿಕೊಳ್ಳುವುದರಲ್ಲಿ ಹೆಣ್ಮಕ್ಕಳು ಬಹಳ ಫೇಮಸ್. ಯಾವುದೇ ವಸ್ತು ವೇಸ್ಟ್ ಆಗದಂತೆ ಹೇಗೆ ಬಳಸಬೇಕೆಂದು ಅವರಿಗೆ ತಿಳಿದಿದೆ. ಅದು ಆಹಾರ ಪದಾರ್ಥವಾಗಿರಬಹುದು ಅಥವಾ ಬಟ್ಟೆ-ಆಭರಣ ಇನ್ನೇನೇ ಆಗಿರಲಿ, ವೇಸ್ಟ್ ಆಗಬಾರದೆಂಬುದಷ್ಟೇ ಅವರ ಏಕೈಕ ಉದ್ದೇಶ. ಹಾಗಾಗಿ ಹಣವನ್ನು ಉಳಿಸಲು ಅವರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.
ಇದೀಗ ಅಂತಹ ಒರ್ವ ಸ್ಮಾರ್ಟ್ ಭಾರತೀಯ ಮಹಿಳೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಮಹಿಳೆ ಸಾಸಿವೆ ಎಣ್ಣೆಯ ಪ್ರತಿ ಹನಿ ವ್ಯರ್ಥವಾಗದಂತೆ ಬಳಸುತ್ತಿರುವುದನ್ನು ಕಾಣಬಹುದು. ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಲಾಗಿದ್ದು, ಇದರಲ್ಲಿ ತೋರಿಸಿರುವ ಪ್ರಕಾರ, ಮಹಿಳೆ ಮೊದಲು ಸಾಸಿವೆ ಎಣ್ಣೆ ಪ್ಯಾಕೆಟ್ ಅನ್ನು ತೆಗೆದುಕೊಳ್ಳುತ್ತಾಳೆ. ಎಣ್ಣೆಯನ್ನು ಒಂದು ಡಬ್ಬಿಗೆ ಹಾಕಿದ ನಂತರ ಕತ್ತರಿ ಸಹಾಯದಿಂದ ಪ್ಯಾಕೆಟ್ ಅನ್ನು ಕತ್ತರಿಸಿ ಎರಡು ಭಾಗಗಳಾಗಿ ಮಾಡುವುದನ್ನ ಕಾಣಬಹುದು. ಮೊದಲಿಗೆ ಅವಳು ಪ್ಯಾಕೆಟ್‌ನಲ್ಲಿರುವ ಎಣ್ಣೆ ಹೀರಿಕೊಳ್ಳಲು ಹಿಟ್ಟು ಬೆರೆಸುವುದನ್ನು ತೋರಿಸಲಾಗಿದೆ. ನಂತರ ಆಕೆ ಅದೇ ಎಣ್ಣೆ ಪ್ಯಾಕೆಟ್ ಕವರ್ ತೆಗೆದುಕೊಂಡು ಹೋಗಿ ಮಕ್ಕಳ ತಲೆ ಮತ್ತು ಕೈ ಮತ್ತು ಪಾದಗಳ ಮೇಲೆ ಉಜ್ಜಲು ಪ್ರಾರಂಭಿಸುತ್ತಾಳೆ. ಇದನ್ನು ನೋಡಿ ಮಕ್ಕಳು ಶಾಕ್ ಆಗುತ್ತಾರೆ. ಈ ಸಂಪೂರ್ಣ ಘಟನೆಯ ವೈರಲ್ ವಿಡಿಯೋ ನೋಡಿ ಬಳಕೆದಾರರು ಏನ್ ಹೇಳಿದ್ದಾರೆ ನೋಡಿ...
ಇಲ್ಲಿದೆ ನೋಡಿ ವೈರಲ್ ವಿಡಿಯೋ
ಈ ಹಿಂದೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿಡಿಯೋ ಪೋಸ್ಟ್ ಮಾಡಿದಾಗಿನಿಂದ ಸಾವಿರಾರು ಬಳಕೆದಾರರು ವೀಕ್ಷಿಸಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಆ ಮಹಿಳೆಯನ್ನು 'ಶುದ್ಧ ಭಾರತೀಯ ನಾರಿ" ಎಂದು ಟ್ಯಾಗ್ ಮಾಡಿದ್ದಾರೆ. ಮತ್ತೆ ಕೆಲವರು ಟೀಕಿಸಿದ್ದಾರೆ. "ಉಳಿಸಿದ ಪ್ರತಿ ಪೈಸೆಯೂ ಗಳಿಸಿದ ಪ್ರತಿ ಪೈಸೆಯಂತೆ, ನಾನು ಭಾರತೀಯ ಮಹಿಳೆಯರನ್ನು ಪ್ರೀತಿಸುತ್ತೇನೆ. ಭಾರತೀಯ ನಾರಿ ಶಕ್ತಿ", "ಪ್ರತಿ ಪೀಳಿಗೆಯೂ ಹಿಂದಿನ ಪೀಳಿಗೆಗಿಂತ ಹೆಚ್ಚು ಮೂರ್ಖರಾಗಿದ್ದಾರೆ" ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.
ಮತ್ತೊರ್ವ ಭಾರತೀಯ ನಾರಿಯ ವಿಡಿಯೋವಿದು
ಸಾಮಾಜಿಕ ಜಾಲತಾಣಗಳಲ್ಲಿ ನಾವು ಅನೇಕ ಬಾರಿ ಇಂತಹ ವಿಡಿಯೋಗಳನ್ನು ನೋಡುತ್ತೇವೆ. ಅವುಗಳು ತುಂಬಾ ಕ್ಯೂಟ್ ಆಗಿರುತ್ತವೆ. ಆಗ ಜನರು ಹೆಚ್ಚು ಹೆಚ್ಚು ಶೇರ್ ಮಾಡ್ತಾ ಹೋಗ್ತಾರೆ. ಇತ್ತೀಚೆಗೆ ಅಂತಹ ಒಂದು ಡಾನ್ಸ್ ವಿಡಿಯೋ ಹೆಚ್ಚು ಚರ್ಚೆಯಾಗ್ತಿದೆ. ಇಲ್ಲಿ ಒರ್ವ ಮಹಿಳೆ ಅಡುಗೆಮನೆಯಲ್ಲಿ ಅಡುಗೆ ಮಾಡುವಾಗ ನೃತ್ಯ ಮಾಡುವುದನ್ನು ಕಾಣಬಹುದು. ಈ ಸಮಯದಲ್ಲಿ, ಅವಳ ಪತಿ ಬಂದು ಅಡುಗೆಯತ್ತ ಗಮನಹರಿಸಲು ಕೇಳುತ್ತಾನೆ. ಆದರೆ ಆಕೆ ನೃತ್ಯ ಮಾಡುತ್ತಲೇ ಸಿಹಿಯಾಗಿ ಉತ್ತರಿಸುತ್ತಾಳೆ. ಏನಂಥ ಗೊತ್ತಾ..?, ವಿಡಿಯೋ ನೋಡಿ..
ವಿಡಿಯೋದಲ್ಲಿ ನೋಡುವ ಪ್ರಕಾರ, ಮಹಿಳೆ ಅಡುಗೆಮನೆಯೊಳಗೆ ಖುಷ್ ಖುಷಿಯಾಗಿ ನೃತ್ಯ ಮಾಡುತ್ತಿರುವುದು ಕಂಡುಬರುತ್ತದೆ. ಕುತೂಹಲಕಾರಿ ವಿಷಯವೆಂದರೆ ಈ ಸಮಯದಲ್ಲಿ ಅವಳು ಅಡುಗೆಯನ್ನೂ ಏಕಾಗ್ರತೆಯಿಂದ ಮಾಡುತ್ತಿದ್ದಾಳೆ. ಇದೇ ಸಮಯಕ್ಕೆ ಬಂದ ಆಕೆಯ ಪತಿ ಮೊದಲು ಅಡುಗೆಯತ್ತ ಗಮನಹರಿಸು ಎನ್ನುತ್ತಾನೆ. ಆದರೂ ಆಕೆ ನೃತ್ಯ ಮಾಡುತ್ತಲೇ ಇರುತ್ತಾಳೆ. ಕೊನೆಯಲ್ಲಿ ಆಕೆಯ ಪತಿ ಅಲ್ಲಿಂದ ಹೊರಟು ಹೋಗುತ್ತಾನೆ. ಈ ವಿಡಿಯೋದಲ್ಲಿ ಮಹಿಳೆ ನೃತ್ಯ ಮಾಡುವ ರೀತಿ ಜನರಿಗೆ ಇಷ್ಟವಾಗುತ್ತದೆ. ಈ ಸಮಯದಲ್ಲಿ ಆಕೆ ತನ್ನ ಕೆಲಸಕ್ಕೂ ಧಕ್ಕೆ ಬರದಂತೆ ತರಕಾರಿಗಳನ್ನು ಸಹ ಬೆರೆಸುತ್ತಲೇ ಇರುತ್ತಾಳೆ.
ಈ ವಿಡಿಯೋವನ್ನು miss_sheetu_16 ಎಂಬ ಇನ್‌ಸ್ಟಾ ಪೇಜ್‌ನಿಂದ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಇದನ್ನು ಇಷ್ಟಪಟ್ಟಿದ್ದಾರೆ ಮತ್ತು ಲಕ್ಷಾಂತರ ಜನರು ಇದನ್ನು ನೋಡಿದ್ದಾರೆ. ಜೊತೆಗೆ ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಕೊಡುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.