ಏನೇ ಮಾಡಿದ್ರೂ ಮಹಿಳೆ ಮಾತನಾಡಲಿಲ್ಲ. ಉಸಿರಾಟ ಸಂಪೂರ್ಣ ನಿಂತಿತ್ತು. ಆಕೆ ಸತ್ತಿದ್ದಾಳೆ ಎಂದುಕೊಂಡಿದ್ದವರು ಶವ ಸಂಸ್ಕಾರಕ್ಕೆ ಸಿದ್ಧವಾದ್ರು. ಶವ ಪೆಟ್ಟಿಗೆ ಕೂಡ ಸಿದ್ಧಪಡಿಸಿದ್ರು. ಆದ್ರೆ ನಂತ್ರ ನಡೆದಿದ್ದೇನು?
ಹುಟ್ಟಿದ ಮೇಲೆ ಸಾವು ಖಚಿತ. ಸಾವು ಜೀವನದಲ್ಲಿ ಯಾವಾಗ ನಡೆಯುತ್ತೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ. ಜೀವನದಲ್ಲಿ ಎಲ್ಲವನ್ನೂ ಬದಲಿಸಬಹುದು ಅಥವಾ ಮರಳಿ ತರಬಹುದು ಆದ್ರೆ ಒಮ್ಮೆ ಸತ್ತವರು ಮತ್ತೆ ಬದುಕಿ ಬರಲು ಸಾಧ್ಯವಿಲ್ಲ. ಸಾವು ಸತ್ಯ. ಸತ್ತ ವ್ಯಕ್ತಿಯನ್ನು ನೆನೆದು ಇಡೀ ದಿನ ಕಣ್ಣೀರಿಡಬಹುದೇ ವಿನಃ ಅವರ ಜೊತೆ ಮತ್ತೆ ಜೀವನ ನಡೆಸಲು ಸಾಧ್ಯವಿಲ್ಲ. ಇಷ್ಟರ ಮಧ್ಯೆಯೂ ಕೆಲವೊಮ್ಮೆ ಅದ್ಭುತ ಎನ್ನುವ ಹಾಗೂ ಅಚ್ಚರಿಯ ಘಟನೆಗಳು ನಡೆಯುತ್ತವೆ. ಸತ್ತಿದ್ದಾರೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಎದ್ದು ಬರ್ತಾನೆ. ಕೆಲವರ ಜೀವನದಲ್ಲಿ ಇಂಥ ಘಟನೆಗಳು ನಡೆದಿವೆ. ಈಗ ಮತ್ತೊಂದು ಇಂಥ ಘಟನೆ ಚರ್ಚೆಗೆ ಬಂದಿದೆ.
ಈ ಘಟನೆ ನಡೆದಿರೋದು ಚೀನಾ (China) ದ ಗುವಾಂಗ್ಸಿಯಲ್ಲಿ. 95 ವರ್ಷದ ಮಹಿಳೆಯೊಬ್ಬಳು ಸತ್ತು ಮತ್ತೆ ಬದುಕಿ ಬಂದಿದ್ದಾಳೆ. ಆಕೆ ಸಾವನ್ನಪ್ಪಿದ್ದಾಳೆ ಎಂದು ನೆರೆಯವರು ಭಾವಿಸಿದ್ದರು. ಆದ್ರೆ ಆರು ದಿನಗಳ ನಂತ್ರ ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡೋದನ್ನು ನೆರೆಯವರು ನೋಡಿದ್ದಾರೆ. ಮಹಿಳೆ ಜೀವಂತವಾಗಿರೋದನ್ನು ನೋಡಿ ದಂಗಾಗಿದ್ದಾರೆ.
ಫ್ರೀ ಬಸ್ ಹತ್ತಿ 33 ತಾಸು ಬಾಲಕಿ ಓಡಾಟ; ಹಾಸ್ಟೆಲ್‌ಗೆ ತೆರಳಲು ಬೇಸತ್ತು ಸಂಚಾರ
ನಡೆದ ಘಟನೆ ಏನು?: ಮಹಿಳೆ ಹೆಸರು ಲಿ ಕ್ಸಿಯುಫೆಂಗ್. ಆಕೆ ವಯಸ್ಸು 95 ವರ್ಷ. ಆಕೆಯ ತಲೆಗೆ ಪೆಟ್ಟು ಬಿದ್ದಿತ್ತು. ಆಕೆ ಮನೆಯಲ್ಲಿ ಮಲಗಿದ್ದಳು. ನೆರೆಯವರು ಬಂದು ಆಕೆಯನ್ನು ಏಳಿಸುವ ಪ್ರಯತ್ನ ನಡೆಸಿದ್ದಾರೆ. ಆದ್ರೆ ಲಿ ಕ್ಸಿಯುಫೆಂಗ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಆಕೆ ದೇಹ (Body) ತಣ್ಣಗಾಗಿರಲಿಲ್ಲ. ಆದ್ರೆ ಉಸಿರಾಟ ನಿಂತಿತ್ತು. ಇದನ್ನು ನೋಡಿದ ಅಕ್ಕಪಕ್ಕದ ಮನೆಯವರು ಲಿ ಕ್ಸಿಯುಫೆಂಗ್ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿದ್ದರು. ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು.
ಹೊಸ ವರ್ಷಾಚರಣೆಗೆ ವಾರ್ನಿಂಗ್,4 ಸಾವಿರ ಗಡಿ ತಲುಪಿದ ಸಕ್ರೀಯ ಕೋವಿಡ್ ಪ್ರಕರಣ!
ಲಿ ಕ್ಸಿಯುಫೆಂಗ್ ಮನೆಯಲ್ಲಿ ಒಂಟಿಯಾಗಿದ್ದಳು. ಆಕೆಯ ಕುಟುಂಬಸ್ಥರು ಅವಳ ಜೊತೆ ಇರಲಿಲ್ಲ. ಅಕ್ಕಪಕ್ಕದ ಮನೆಯವರ ವಯಸ್ಸು ಕೂಡ ಅರವತ್ತು ವರ್ಷ ಮೀರಿತ್ತು. ಹಾಗಾಗಿ ಅವರಿಗೆ ಲಿ ಕ್ಸಿಯುಫೆಂಗ್ ಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಲಿ ಕ್ಸಿಯುಫೆಂಗ್ ಏಳಿಸಲು ಸಾಕಷ್ಟು ಪ್ರಯತ್ನ ನಡೆದಿತ್ತು. ಯಾವುದಕ್ಕೂ ಲಿ ಕ್ಸಿಯುಫೆಂಗ್ ಸ್ಪಂದಿಸಲಿಲ್ಲ. ಹಾಗಾಗಿ ಆಕೆ ಸಾವನ್ನಪ್ಪಿದ್ದಾಳೆಂದು ಘೋಷಿಸಿದ ನೆರೆಯವರು, ಸಂಬಂಧಿಕರು ಆಕೆಯ ಪಾರ್ಥೀವ ಶರೀರ ನೋಡಲು ಬರುತ್ತೇನೆ ಎಂದ ಕಾರಣಕ್ಕೆ ಲಿ ಕ್ಸಿಯುಫೆಂಗ್ ಶವವನ್ನು ಶವಪೆಟ್ಟಿಗೆಯಲ್ಲಿ ಇಟ್ಟಿದ್ದರು. ಆದ್ರೆ ಅದಕ್ಕೆ ಮೊಳೆ ಹೊಡೆದಿರಲಿಲ್ಲ.
ಶವಪೆಟ್ಟಿಗೆಯಲ್ಲಿ ಆರು ದಿನಗಳಿಂದ ಲಿ ಕ್ಸಿಯುಫೆಂಗ್ ಶವ ಇತ್ತು. ಆದ್ರೆ ಆರನೇ ದಿನ ಅಚ್ಚರಿ ನಡೆದಿದೆ. ಲಿ ಕ್ಸಿಯುಫೆಂಗ್ ಸಂಬಂಧಿಕರು ಮನೆಗೆ ಬಂದ ಕಾರಣ ಶವಪೆಟ್ಟಿಗೆ ತೆರೆಯಲಾಗಿದೆ. ಆದ್ರೆ ಅಲ್ಲಿ ಲಿ ಕ್ಸಿಯುಫೆಂಗ್ ಶವ ಇರಲಿಲ್ಲ. ಇದನ್ನು ನೋಡಿ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.
ಅಡುಗೆ ಮನೆಯಲ್ಲಿ ಕಾಣಿಸಿಕೊಂಡ ಲಿ ಕ್ಸಿಯುಫೆಂಗ್ : ಶವ ಪೆಟ್ಟಿಗೆಯಲ್ಲಿದ್ದ ಲಿ ಕ್ಸಿಯುಫೆಂಗ್ ಅಡುಗೆ ಮನೆ ಸ್ಟೂಲ್ ನಲ್ಲಿ ಕುಳಿತಿದ್ದಳು. ಆಕೆ ಅಡುಗೆ ಮಾಡೋದನ್ನು ನೋಡಿ ಜನರು ದಂಗಾದರು. ಅವರ ಕಣ್ಣುಗಳಿಂದ ಇದನ್ನು ನಂಬಲಾಗಲಿಲ್ಲ. ಲಿ ಕ್ಸಿಯುಫೆಂಗ್ ನೋಡಿ ಎಲ್ಲರೂ ಗಾಬರಿಗೊಂಡರು. ಲಿ ಕ್ಸಿಯುಫೆಂಗ್, ತುಂಬಾ ಹೊತ್ತಿನಿಂದ ನಾನು ಮಲಗಿದ್ದ ಕಾರಣ ನನಗೆ ಹಸಿವಾಗಿತ್ತು. ಹಾಗಾಗಿ ಅಡುಗೆ ಮಾಡಿಕೊಳ್ಳಲು ಬಂದೆ ಎಂದು ಹೇಳಿದ್ದಾಳೆ. ಲಿ ಕ್ಸಿಯುಫೆಂಗ್ ನಿಜವಾಗಿ ಸಾವನ್ನಪ್ಪಿರಲಿಲ್ಲ. ಆಕೆಯದ್ದು ಕೃತಕ ಸಾವು. ಇಲ್ಲಿ ದೇಹ ತಣ್ಣಗಾಗೋದಿಲ್ಲ. ಉಸಿರಾಟ ನಿಲ್ಲುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಲಿ ಕ್ಸಿಯುಫೆಂಗ್ ಮಾತ್ರವಲ್ಲ ಕೆಲವರ ಜೀವನದಲ್ಲಿ ಇಂಥದ್ದೇ ಘಟನೆ ನಡೆಯುತ್ತದೆ. ಉಸಿರಾಟ ನಿಂತ ಹತ್ತು ನಿಮಿಷದ ನಂತ್ರ ಮಾತನಾಡಿದವರಿದ್ದಾರೆ.