ಚರ್ಮದ ಸಮಸ್ಯೆಗಳಿಗೆ ಆ್ಯಕ್ಟಿವೇಟೆಡ್ ಚಾರ್‌ಕೋಲ್ ಎಂಬ ಹೊಸ ಅಸ್ತ್ರ!

By Web DeskFirst Published May 26, 2019, 2:46 PM IST
Highlights

ಫೇಶಿಯಲ್ ಕ್ರೀಮ್‌ನಿಂದ ಹಿಡಿದು ಅಂಡರ್ ಆರ್ಮ್ ವೈಟನಿಂಗ್ ಕ್ರೀಮ್‌ವರೆಗೆ ಎಲ್ಲದರಲ್ಲೂ ಈಗ ಇರೋ ಮ್ಯಾಜಿಕ್ ಇಂಗ್ರೀಡಿಯಂಟ್ ಆ್ಯಕ್ಟಿವೇಟೆಡ್ ಚಾರ್‌ಕೋಲ್.  ಏನಿದು ಆ್ಯಕ್ಟಿವೇಟೆಡ್ ಚಾರ್‌ಕೋಲ್? 

ಈಗೀಗ ಯಾವುದೇ ಬ್ಯೂಟಿ ಪ್ರಾಡಕ್ಟ್‌ನ ಮಾರುಕಟ್ಟೆ ವ್ಯಾಲ್ಯೂ ಹೆಚ್ಚಿಸುತ್ತಿರೋದು ಆ್ಯಕ್ಟಿವೇಟೆಡ್ ಚಾರ್‌ಕೋಲ್ ಎಂಬ ಮಾಯಾದಂಡ. ಅದೇಕೆ ಅಷ್ಟೊಂದು ಜನಪ್ರಿಯತೆ ಪಡೆಯುತ್ತಿದೆ? ಹೀಗೆಂದರೇನು?
ಆ್ಯಕ್ಟಿವೇಟೆಡ್ ಚಾರ್‌ಕೋಲ್ ಮಿನರಲ್ ಪೌಡರ್ ಆಗಿದ್ದು, ಬೋನ್ ಚಾರ್, ಗರಟ, ಪೀಟ್, ಪೆಟ್ರೋಲಿಯಂ ಕೋಕ್, ಕಲ್ಲಿದ್ದಲು, ಮರದ ಚಕ್ಕೆಯ ಪುಡಿಯಿಂದ ಇದನ್ನು ತಯಾರಿಸಲಾಗುತ್ತದೆ. ಇದನ್ನು ಅತಿಯಾದ ಪ್ರೆಶರ್ ಹಾಗೂ ಉಷ್ಣತೆಯಲ್ಲಿ ಪ್ರೊಸೆಸ್ ಮಾಡಿದಾಗ ಆ್ಯಕ್ಟಿವೇಟೆಡ್ ಚಾರ್‌ಕೋಲ್ ದೊರೆಯುತ್ತದೆ. ಈ ಪ್ರೊಸೆಸ್‌ನಲ್ಲಿ ಚಾರ್‌ಕೋಲ್ ತನ್ನ ನಿಜರೂಪ ಕಳೆದುಕೊಂಡು ಸರಂಧ್ರ ರೂಪ ಪಡೆದುಕೊಳ್ಳುತ್ತದೆ.

ಈ ಆ್ಯಕ್ಟಿವೇಟೆಡ್ ಚಾರ್‌ಕೋಲ್  ಹೇಗೆ ಕೆಲಸ ಮಾಡುತ್ತದೆ?

ಬೆಂಡೆಕಾಯಿ ಮಾಸ್ಕ್ ಹಾಕಿ ಸೌಂದರ್ಯದ ಎಲ್ಲಾ ಸಮಸ್ಯೆ ನಿವಾರಿಸಿ !

ಆ್ಯಕ್ಟಿವೇಟೆಡ್ ಚಾರ್‌ಕೋಲ್‌ ರಂಧ್ರಮಯವಾಗಿರುವುದರಿಂದ ಇದು ನೆಗೆಟಿವ್ ಆಗಿ ಚಾರ್ಜ್ ಆಗಿರುತ್ತದೆ. ಹೀಗಾಗಿ ಇದು ಪಾಸಿಟಿವ್ ಆಗಿ ಚಾರ್ಜ್ ಆದಂಥ ಅನಿಲಗಳು ಹಾಗೂ ಕೆಮಿಕಲ್‌ಗಳನ್ನು ಆಕರ್ಷಿಸುತ್ತದೆ. ಇದನ್ನು ನಮ್ಮ ಚರ್ಮದ ಮೇಲೆ ಹಚ್ಚುವುದರಿಂದ ದೇಹದ ಕೆಟ್ಟ ವಿಷಕಾರಿ ಕೆಮಿಕಲ್‌ಗಳು ಆಕರ್ಷಣೆಯಿಂದಾಗಿ ಹೊರಗೆ ಬರುತ್ತವೆ. ಹೀಗಾಗಿಯೇ ಆ್ಯಕ್ಟಿವೇಟೆಡ್ ಚಾರ್‌ಕೋಲ್ ಬ್ಯೂಟಿ ಲೋಕದಲ್ಲಿ ಹೊಸ ಟ್ರೆಂಡ್ ಆಗಿರುವುದು. 
ಹಾಗಿದ್ದರೆ ತ್ವಚೆಗೆ ಆ್ಯಕ್ಟಿವೇಟೆಡ್ ಚಾರ್‌ಕೋಲ್‌ನ ಲಾಭಗಳೇನು?

1. ರಂಧ್ರಗಳನ್ನು ಕಡಿಮೆ ಮಾಡುತ್ತದೆ
ಪ್ರತಿನಿತ್ಯ ಮಾಲಿನ್ಯ, ಧೂಳು, ಕೊಳೆ, ಬೆವರಿಗೆ ತಾಕುವ ಚರ್ಮವು ಇವುಗಳನ್ನೆಲ್ಲ ತುಂಬಿಕೊಳ್ಳುವುದರಿಂದ ತ್ವಚೆಯ ಮೇಲಿನ ರಂಧ್ರಗಳು ಮತ್ತಷ್ಟು ದೊಡ್ಡದಾಗುತ್ತವೆ. ಇದರಿಂದ ತ್ವಚೆ ಜೋಲು ಬಿದ್ದಂತೆ ಕಾಣಬಹುದು. ಆದರೆ ಆ್ಯಕ್ಟಿವೇಟೆಡ್ ಚಾರ್‌ಕೋಲ್ ಹಚ್ಚುವುದರಿಂದ ಅದು ಈ ಎಲ್ಲ ಕೆಮಿಕಲ್‌ಗಳನ್ನು ಹೊರಗೆಳೆದು ಚರ್ಮಕ್ಕೆ ಬಿಗಿತವನ್ನು ಮರಳಿಸುತ್ತದೆ.

2. ಎಣ್ಣೆ ಚರ್ಮದವರಿಗೆ ವರ
ದೇಹದಲ್ಲಿ ಅತಿಯಾಗಿ ಸೀಬಮ್ ಉತ್ಪತ್ತಿಯಾಗುವುದರಿಂದ ಚರ್ಮವು ಎಣ್ಣೆಣ್ಣೆಯಾಗಿ ಮೊಡವೆಗಳಿಗೆ ಆಹ್ವಾನ ನೀಡುತ್ತದೆ. ಇಂಥ ಎಣ್ಣೆ ಚರ್ಮದವರ ಮೇಲೆ ಆ್ಯಕ್ಟಿವೇಟೆಡ್ ಚಾರ್‌ಕೋಲ್ ಜಾದೂವನ್ನೇ ಮಾಡುತ್ತದೆ. ಎಣ್ಣೆಯನ್ನು ಹೀರಿಕೊಂಡು ಚರ್ಮವನ್ನು ಫ್ರೆಶ್ ಆಗಿಡುತ್ತದೆ.

3. ಅತ್ಯುತ್ತಮ ಎಕ್ಸ್‌ಫೋಲಿಯರ್
ಆ್ಯಕ್ಟಿವೇಟೆಡ್ ಚಾರ್‌ಕೋಲ್ ಉತ್ತಮ ಎಕ್ಸ್‌ಫೋಲಿಯರ್ ಆಗಿದ್ದು, ಸ್ಕ್ರಬ್ ಮಾಡುವುದರಿಂದ ಡೆಡ್ ಸ್ಕಿನ್ ಹಾಗೂ ಕೊಳೆಯನ್ನು ತೆಗೆದು, ತ್ವಚೆಯನ್ನು ನಯವಾಗಿಸುತ್ತದೆ.

4. ಬ್ಲ್ಯಾಕ್‌ಹೆಡ್ಸ್ ತೊಲಗಿಸುತ್ತದೆ
ಆ್ಯಕ್ಟಿವೇಟೆಡ್ ಚಾರ್‌ಕೋಲ್‌ನ್ನು ತ್ವಚೆ ಹೀರಿಕೊಳ್ಳುವುದರಿಂದ ಸಹಜವಾಗಿಯೇ ಇದು ಬ್ಲ್ಯಾಕ್‌ಹೆಡ್ಸ್ ಹಾಗೂ ವೈಟ್‌ಹೆಡ್ಸ್ ತೆಗೆಯುತ್ತದೆ. ಅಲ್ಲದೆ ತ್ವಚೆಯ ರಂಧ್ರಗಳು ಚೆನ್ನಾಗಿ ಉಸಿರಾಡಲು ಅವಕಾಶ ಮಾಡಿಕೊಡುತ್ತದೆ.

ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!

5. ತ್ವಚೆಗೆ ಕಾಂತಿ
ಕೊಳೆ, ಬೆವರು, ಧೂಳಿನಿಂದಾಗಿ ತ್ವಚೆ ಡಲ್ ಆಗುತ್ತದೆ. ಇವೆಲ್ಲವನ್ನು ಸುಲಭವಾಗಿ ತೆಗೆವ ಆ್ಯಕ್ಟಿವೇಟೆಡ್ ಚಾರ್‌ಕೋಲ್, ಚರ್ಮಕ್ಕೆ ಕಾಂತಿ ಮರಳಿಸುತ್ತದೆ.

6. ಗಾಯಗಳನ್ನು ಗುಣಪಡಿಸುತ್ತದೆ
ಆ್ಯಕ್ಟಿವೇಟೆಡ್ ಚಾರ್‌ಕೋಲ್‌ ವೈದ್ಯಕೀಯವಾಗಿಯೂ ಬಹಳಷ್ಟು ಬಳಕೆಯಾಗುತ್ತದೆ. ಆ್ಯಕ್ಟಿವೇಟೆಡ್ ಚಾರ್‌ಕೋಲ್‌ನ ಕೆಮಿಕಲ್ ಹೀರಿಕೊಳ್ಳುವ ಗುಣ ದೇಹಕ್ಕೆ ವಿಷ ಸೇರಿದ ಸಂದರ್ಭದಲ್ಲಿ ಮ್ಯಾಜಿಕ್ ಮಾಡುತ್ತದೆ. ಗಾಯಗಳಿಗೆ ಹಚ್ಚುವುದರಿಂದ ಊತ, ಕೆಂಪಗಾಗಿರುವುದು ಹಾಗೂ ವಿಷವನ್ನು ಹೋಗಿಸಿ ಬೇಗ ಗುಣಪಡಿಸುತ್ತದೆ.

7. ತಲೆತುರಿಕೆ ಹೋಗಿಸುತ್ತದೆ
ಹೊಟ್ಟು ಹಾಗೂ ತಲೆತುರಿಕೆ ಕಿರಿಕಿರಿ ಬೇಡಪ್ಪಾ ಬೇಡ. ಹೇರ್ ಮಾಸ್ಕ್ ಜೊತೆಗೆ ಆ್ಯಕ್ಟಿವೇಟೆಡ್ ಚಾರ್‌ಕೋಲ್ ಬಳಕೆ ಈ ಕಿರಿಕಿರಿ ತಪ್ಪಿಸುತ್ತದೆ.

click me!