ನುಗ್ಗೇಕಾಯಿ ಸೂಪರ್‌ಫುಡ್ ಎನ್ನುತ್ತಾರೆ ವಿಜ್ಞಾನಿಗಳು, ಯಾಕೆ ಗೊತ್ತಾ?

By Web Desk  |  First Published May 26, 2019, 1:00 PM IST

ನುಗ್ಗೇಮರದ ಆರ್‌ಎನ್‌ಎ ಅಧ್ಯಯನ ಮಾಡಿರುವ ಬೆಂಗಳೂರಿನ ಎನ್‌ಸಿಬಿ‌ಎಸ್‌ನ ವಿಜ್ಞಾನಿಗಳು, ಇದೊಂದು ಸೂಪರ್ ಫುಡ್ ಎನ್ನುತ್ತಿದ್ದಾರೆ. ಈ ಮೂಲಕ ಜಾಗತಿಕವಾಗಿ ನುಗ್ಗೇಕಾಯಿಗೆ ಅಟೆನ್ಷನ್ ಸಿಕ್ಕುತ್ತಿದೆ. 
 


ಭಾರತೀಯರ ಮನೆ ಅಡುಗೆಯಲ್ಲಿ ನುಗ್ಗೇಕಾಯಿ ಸಾಂಬಾರ್ ಬಹಳ ಸಾಮಾನ್ಯ. ನುಗ್ಗೇಕಾಯಿ ಸೇವಿಸಿದರೆ ಮಲಬದ್ಧತೆ ಮಂಗಮಾಯವಾಗುತ್ತದೆ ಎಂದು ಹಿರಿಯರು ಮಕ್ಕಳಿಗೆ ತಿಳಿ ಹೇಳುತ್ತಾ ತಿನಿಸುವುದನ್ನು ನೋಡಿರಬಹುದು. ಇನ್ನು ಬಾಣಂತಿಯರಿಗೆ ಚೆನ್ನಾಗಿ ಹಾಲಾಗಲೆಂದು ನುಗ್ಗೆ ಸೊಪ್ಪಿನ ಸಾರು ಮಾಡಿಕೊಡಲಾಗುತ್ತದೆ. ನುಗ್ಗೇಕಾಯಿಯಲ್ಲಿ ಇಷ್ಟೇ ಅಲ್ಲ, ಬಹಳಷ್ಟು ಆರೋಗ್ಯಕಾರಿ ಅಂಶಗಳಿವೆ, ಹಾಗಾಗಿಯೇ ಇದು ಸೂಪರ್ ಫುಡ್ ಎನ್ನುತ್ತಿದ್ದಾರೆ ಬೆಂಗಳೂರಿನ ವಿಜ್ಞಾನಿಗಳು. ಹಾಗಾದರೆ ಜೈವಿಕ ವಿಜ್ಞಾನ ರಾಷ್ಟ್ರೀಯ ಕೇಂದ್ರ (ನ್ಯಾಷನಲ್ ಸೆಂಟರ್ ಫಾರ್ ಬಯಾಲಜಿಕಲ್ ಸೈನ್ಸಸ್)ವು ಸಂಶೋಧನೆ ನಡೆಸಿ ನುಗ್ಗೆ ಬಗ್ಗೆ ಕಂಡುಕೊಂಡಿರುವುದೇನೇನು?



ನುಗ್ಗೇ ಗಿಡದಲ್ಲಿ ಐದು ಔಷಧ ರೀತಿಯ ಮಾಲೆಕ್ಯೂಲ್ಸ್ ಹಾಗೂ ಮೂರು ವಿಟಮಿನ್‌(ಎ,ಇ,ಸಿ )ಗಳಿದ್ದು, ಇದು ದೊಡ್ಡದೊಂದು ಬಯೋಕೆಮಿಕಲ್ ಫ್ಯಾಕ್ಟರಿಯೇ ಆಗಿದೆ ಎಂದು ಎನ್‌ಸಿಬಿಎಸ್‌ನ ಸಂಶೋಧಕರು ಹೇಳುತ್ತಿದ್ದಾರೆ. 

'ನುಗ್ಗೇ ಸೊಪ್ಪು, ಹೂವು ಹಾಗೂ ಕಾಯಿಗಳು ಲಿಪಿಡ್ ಮೆಟಾಬಾಲಿಸಂ(ತೂಕ ಇಳಿಸಲು ಬೇಕಾದದ್ದು)ಗೆ ಸಹಾಯಕವಾಗುವಂಥ ಅಂಶಗಳಿಂದ ಶ್ರೀಮಂತವಾಗಿದ್ದು, ಇದರಿಂದ ಡಯಾಬಿಟೀಸ್, ನರ ಹಾಗೂ ಹೃದಯ ಸಮಸ್ಯೆಗಳು, ಕ್ಯಾನ್ಸರ್‌ ಅನ್ನು ದೂರ ಇಡಬಹುದು. ಈ ಗಿಡವು ಮಿನರಲ್‌ಗಳ ಖನಿಜವಾಗಿದೆ,' ಎನ್ನುತ್ತಾರೆ ಸಂಶೋಧಕಿ ಆರ್. ಸೌಧಾಮಿನಿ.

Tap to resize

Latest Videos

undefined

ಬೆಂಡೆಕಾಯಿ ಮಾಸ್ಕ್ ಹಾಕಿ ಸೌಂದರ್ಯದ ಎಲ್ಲಾ ಸಮಸ್ಯೆ ನಿವಾರಿಸಿ !

ಈ ಸಂಶೋಧನೆಯಿಂದಾಗಿ ಸುಮ್ಮನೆ ಸಾಂಬಾರ್‌ನಲ್ಲಿ ತೇಲುತ್ತಿದ್ದ ನುಗ್ಗೇಕಾಯಿಗೆ ಜಾಗತಿಕ ಅಟೆನ್ಶನ್ ಸಿಕ್ಕಿದಂತಾಗಿದೆ. ಇನ್ನು 'ಕಾಯಿ ಕಾಯಿ ನುಗ್ಗೇ ಕಾಯಿ ಮಹಿಮೆಗೆ' ಹಾಡು ಕೇಳಿದವರಿಗೆಲ್ಲ ಇರುವ ಡೌಟ್ ಕೂಡಾ ಇಲ್ಲಿ ಬಗೆಹರಿದಿದೆ. ನುಗ್ಗೇಕಾಯಿಯಲ್ಲಿರುವ ಅರ್ಸೋಲಿಕ್ ಆ್ಯಸಿಡ್ ಹಾಗೂ ಓಲಿನೋಲಿಕ್ ಆ್ಯಸಿಡ್ ಬಂಜೆತನದ ವಿರುದ್ಧ ಹೋರಾಡುತ್ತವೆ. 

- ನುಗ್ಗೆ ಸೊಪ್ಪಿನಲ್ಲಿ ಪಾಲಕ್‌ನಲ್ಲಿ ಇರುವ ಐರನ್‌ಗಿಂತ 30 ಪಟ್ಟು ಹೆಚ್ಚು ಐರನ್ ಹಾಗೂ 100 ಪಟ್ಟು ಹೆಚ್ಚಿನ ಕ್ಯಾಲ್ಶಿಯಂ ಇದೆ ಎಂಬುದನ್ನೂ ಸಂಶೋಧನೆ ದೃಢಪಡಿಸಿದೆ. 

- 'ನುಗ್ಗೆ ಮರದ ಕಾಂಡ ಹಾಗೂ ಬೇರುಗಳಲ್ಲಿ ಐರನ್, ಝಿಂಕ್ ಹಾಗೂ ಮೆಗ್ನೀಶಿಯಂ ಟ್ರಾನ್ಸ್‌ಪೋರ್ಟರ್‌ಗಳು ಹೇರಳವಾಗಿವೆ' ಎನ್ನುತ್ತಾರೆ ಈ ಅಧ್ಯಯನದ ಮೊದಲ ಲೇಖಕ ನಸೀರ್ ಪಾಶಾ. ಅಧ್ಯಯನ ವರದಿಯು 'ಜಿನಾಮಿಕ್ಸ್' ಜರ್ನಲ್‌ನಲ್ಲಿ ಪ್ರಕಟವಾಗಿದೆ.

- ನುಗ್ಗೇ ಮರ ಬೆಳೆಸಲು ಹೆಚ್ಚಿನ ಗಮನ ನೀಡುವ ಅಗತ್ಯವಿಲ್ಲ. ಆದರೆ, ಅದು ಮಾತ್ರ ತನ್ನನ್ನು ಸೇವಿಸುವವರ ಆರೋಗ್ಯದ ಕಾಳಜಿಯನ್ನು ಚೆನ್ನಾಗಿಯೇ ಮಾಡುತ್ತದೆ. 

- ನುಗ್ಗೇಮರದ ಪ್ರತಿ ಭಾಗವೂ ಔಷಧೀಯ ಗುಣಗಳನ್ನು ಹೊಂದಿರುವುದನ್ನು ಈಗಾಗಲೇ ಆಯುರ್ವೇದ ದೃಢಪಡಿಸಿದೆ. ಆದರೆ ಎಲ್ಲೆಲ್ಲಿ ಎಷ್ಟೆಷ್ಟು ಔಷಧೀಯ ಮಾಲೆಕ್ಯೂಲ್‌ಗಳಿವೆ ಎಂಬುದನ್ನು ಕಂಡು ಕೊಳ್ಳಬೇಕಾಗಿತ್ತಷ್ಟೇ, ಅದನ್ನು ನಾವು ಮಾಡಿದ್ದೇವೆ' ಎನ್ನುತ್ತಾರೆ ಟೀಂ ಲೀಡ್ ಸೌಧಾಮಿನಿ.

- ಈ ಬೆಂಗಳೂರಿನ ವಿಜ್ಞಾನಿಗಳು ನುಗ್ಗೇಮರದ ಆರ್‌ಎನ್ಎಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಮರದ ಬೇರು, ಕಾಂಡ, ಹೂವು, ಬೀಜ ಹಾಗೂ ಎಲೆಗಳ ಆರ್‌ಎನ್‌ಎ ಅಧ್ಯಯನ ನಡೆಸಲಾಗಿದೆ. ಇದಕ್ಕಾಗಿ ಸ್ಯಾಂಪಲನ್ನು ಬೆಂಗಳೂರಿನ ಕೃಷಿ ವಿವಿಯ ಕ್ಯಾಂಪಸ್‌ನಿಂದ ಪಡೆಯಲಾಗಿತ್ತು. 

click me!