ಅಷ್ಟಕ್ಕೂ ಈ ಗಂಡಿಸಿಗ್ಯಾಕೆ ಪರಸ್ತ್ರೀ ವ್ಯಾಮೋಹ?

Published : Jun 22, 2018, 04:21 PM IST
ಅಷ್ಟಕ್ಕೂ ಈ ಗಂಡಿಸಿಗ್ಯಾಕೆ ಪರಸ್ತ್ರೀ ವ್ಯಾಮೋಹ?

ಸಾರಾಂಶ

ಯಾವ ಟಿವಿ ಸೀರಿಯಲ್ ನೋಡಿ, ಕೊಲೆಯಂಥ ಅಪರಾಧ ಪ್ರಕರಣಗಳ ಹಿನ್ನೆಲೆ ನೋಡಿದರೆ ಬರೀ ಅನೈತಿಕ ಸಂಬಂಧದ್ದೇ ಪುರಾಣ. ದಿನದಿಂದ ದಿನಕ್ಕೆ ಈ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಪತ್ನಿ ಸೌಂದರ್ಯದ ಖನಿಯಾಗಿದ್ದರೂ, ಪರಸ್ತ್ರೀ ವ್ಯಾಮೋಹ ಗಂಡಿಗೆ ಕಡಿಮೆಯಾಗೋಲ್ಲ. ಕೇರಿಂಗ್, ಲವಿಂಗ್ ಪತಿರಾಯನಿದ್ದರೂ ಹೆಣ್ಣು ಇನ್ನೇನನ್ನೋ ಬಯಸಿ ದಾರಿ ತಪ್ಪುತ್ತಾಳೆ. 

  • ಗಂಡಸರ ವಿಷಯಕ್ಕೆ ಬರುವುದಾದರೆ, ವಿವಾಹಿತ ಪುರುಷನೊಬ್ಬ ಯಾವೆಲ್ಲಾ ಕಾರಣಗಳಿಂದಾಗಿ ಪರಸ್ತ್ರೀಯರ ಸಂಗ ಬೆಳೆಸುತ್ತಾನೆ ಎಂಬುದರ ಬಗ್ಗೆ ಸಮೀಕ್ಷೆಯೊಂದು ಕುತೂಹಲಕಾರಿ ಮಾಹಿತಿಯತ್ತ ಬೆಳಕು ಚೆಲ್ಲಿದೆ. ಈ ಸಮೀಕ್ಷೆ ಪ್ರಕಾರ ಪರಸ್ತ್ರೀ ಸಹವಾಸಕ್ಕೆ ಬಿದ್ದ ಶೇ.82ರಷ್ಟು ಗಂಡಸರಿಗೆ ಮನೆಯಲ್ಲಿ ಮಕ್ಕಳಾಗುವುದೇ ಕಾರಣವಂತೆ!
  • 'ನಾನು ನೀನು ಹಾಲು ಜೇನು...' ಎಂದ ಸಂಸಾರ ನಡೆಸುತ್ತಿದ್ದ ದಂಪತಿ ಜೀವನದಲ್ಲಿ ಮಗುವಿನ ಆಗಮನದಿಂದ ಗ್ಯಾಪ್ ಸೃಷ್ಟಿಯಾಗುತ್ತದೆ. ಹೆಣ್ಣು ಸದಾ ಮಗುವಿನ ಮೇಲೆ ಧ್ಯಾನ ಕೊಡುವುದು ಗಂಡಿಗೆ ನುಂಗಲಾರದ ತುತ್ತಾಗುತ್ತದೆ. ಜತೆಗೆ ಸೆಕ್ಸ್, ದೈಹಿಕ ಸೌಂದರ್ಯದ ಬಗ್ಗೆಯೂ ಕಾಳಜಿ ಕಳೆದುಕೊಳ್ಳುವುದರಿಂದ ಗಂಡು ಮತ್ತೊಂದು ಹೆಣ್ಣಿಗೆ ಆಕರ್ಷಿತನಾಗುತ್ತಾನಂತೆ.
  • ಅದೇನೋ ಅಪರಾಧ ಪ್ರಜ್ಞೆಯೋ, ಮಗುವಿನ ಉಪಸ್ಥಿತಿಯೋ, ಮತ್ತೊಂದೋ. ಸಂಗಾತಿಯೊಂದಿಗೆ ಪೂರ್ಣ ಮನಸಿನಿಂದ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ಗಂಡಸು ಬೇರೆ ಹೆಣ್ಣಿನ ಸಹವಾಸಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಸಮೀಕ್ಷೆಯಲ್ಲಿ ಶೇ.30ರಷ್ಟು ಗಂಡಸರು ಇದೇ ಕಾರಣ ಕೊಟ್ಟಿದ್ದಾರೆ.
  • ಮಗುವಾದ ಮೇಲೆ ಅದರ ರಂಪಾಟ, ಕಿರುಚಾಟ, ಲಾಲನೆ-ಪೋಷಣೆ ಇವೇ ಕಾರಣಗಳಿಂದಾಗಿ ಗಂಡ-ಹೆಂಡತಿಗೆ ನಿದ್ರೆಯ ಕೊರತೆ ಎದುರಾಗುತ್ತದೆ. ಇದರಿಂದ ಬೆಡ್‌ರೂಂನಲ್ಲಿ ಉತ್ಸಾಹದಿಂದ ಸಮಾಗಮಗೊಳ್ಳುವ ಸಂದರ್ಭವೇ ಇಲ್ಲವಾಗುತ್ತದೆ. 
  • ಮದುವೆ, ಮಗು ಎಂದ ಮೇಲೆ ಪ್ರತಿಯೊಬ್ಬರ ಬಾಳಿನಲ್ಲಿಯೂ ಬದಲಾವಣೆ ಸಹಜ. ಆದರೆ, ಸದಾ ತನ್ನನ್ನೇ ಧ್ಯಾನಿಸುತ್ತಿದ್ದ ಹೆಂಡತಿ ಮಗುವನ್ನೇ ಧೇನಿಸುವುದು ಗಂಡಿಗೆ ಅಹಂಕಾರಕ್ಕೆ ಹೊಡದಂತಾಗುತ್ತದೆ. ಈ ಕಾರಣದಿಂದ ಗಂಡು ತನ್ನ ಹೆಂಡತಿಯೆಡೆಗೆ ಆಕರ್ಷಣೆಯನ್ನೇ ಕಳೆದುಕೊಂಡು ಬಿಡುತ್ತಾನೆ.
  • ಸಂಸಾರಕ್ಕೆ ಮತ್ತೊಂದು ಹೊಸ ಅತಿಥಿಯ ಆಗಮನವಾಗುತ್ತಿದೆ ಎಂದ ಮೇಲೆ ಆರ್ಥಿಕ ಸಂಕಟವೂ ಎದುರಾಗುವುದು ಸಹಜ. ಇದರಿಂದ ವಿನಾಕಾರಣ ಜಗಳವೂ ಹೆಚ್ಚುತ್ತೆ. ಪತ್ನಿ ಮನೆಯಲ್ಲಿ ಸದಾ ಕ್ಲಾಸ್ ತೆಗೆದುಕೊಳ್ಳುತ್ತಿದ್ದರೆ, ಇರಿಟೇಡ್ ಆಗೋ ಗಂಡು ಮತ್ತೊಂದು ಹೆಣ್ಣಿನ ಸೆರಗ ಹಿಡಿಯುತ್ತಾನಂತೆ.
  • ಲ್ಲುವುಕ್ಕಿಂತ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ, ಮಗುವಿನೊಂದಿಗೆ ತನ್ನ ಆತ್ಮೀಯತೆ, ಮಮತೆ ಹೆಚ್ಚಿಸಿಕೊಳ್ಳುವ ಭರದಲ್ಲಿ ತಂದೆಯಿಂದ ದೂರು ಮಾಡುವುದು...ಇಂಥ ಸಣ್ಣ ಪುಟ್ಟ ಕಾರಣಗಳಿಂದ ಗಂಡ-ಹೆಂಡಿರಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಹೆಚ್ಚುತ್ತಾ ಹೋಗುತ್ತವೆ. ಇದು ದಾಂಪತ್ಯದ ವಿರಸಕ್ಕೆ ನಾಂದಿ ಹಾಡುತ್ತದೆ, ಎಂಬುವುದು ಸಮೀಕ್ಷೆಯ ಫಲಿತಾಂಶ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ರಾಶಿಯವರು ಕೆಟ್ಟ ಅತ್ತೆಯಂತೆ, ಸೊಸೆಗೆ ಕಾಟ ಕೊಡೋದು ಜಾಸ್ತಿ
ಮಾಡೆಲ್ ಮಗಳ ಯಶಸ್ಸು: ಮಾಲ್‌ನಲ್ಲಿ ಬಿಲ್‌ಬೋರ್ಡ್ ಮೇಲೆ ಮಗಳ ಫೋಟೋ ನೋಡಿ ಭಾವುಕರಾದ ಪೋಷಕರು