ಎಂಗೇಜ್‌ಮೆಂಟ್ ಆದಾಗ ಬಲಗೈ ರಿಂಗ್ ಫಿಂಗರ್‌ಗೆ ಉಂಗುರ ತೊಡೋದು ಗೊತ್ತು. ಅದೂ ಸಾಮಾನ್ಯವಾಗಿ ಬಂಗಾರದ್ದು. ಆದರೆ, ಫ್ಯಾಷನ್ ಹೆಸರಿಲ್ಲಿ ತೊಡುವ ಉಂಗುರಗಳಿಗೆ ಹೇಳುವಂಥ ವೈಶಿಷ್ಟ್ಯವಿಲ್ಲದಿದ್ದರೂ, ಒಂದೊಂದು ಬೆರಳಿಗೆ ತೊಡುವ, ಒಂದೊಂದು ರೀತಿಯ ಉಂಗುರಗಳಿಗೆ ಒಂದೊಂದು ಅರ್ಥವಿರುತ್ತದೆ.
ಉಂಗುರ ತೊಡುವುದು ಪುರಾತನ ಸಂಪ್ರದಾಯವಾದರೂ, ಇದು ವಿವಿಧ ಮಜಲುಗಳನ್ನು ಪಡೆದು, ಆಧುನೀಕತೆ ಹೆಸರಿಲ್ಲಿ ತನ್ನದೇ ಛಾಪು ಮೂಡಿಸುತ್ತಿದೆ. ಸಂಪ್ರದಾವಯೇ ಆಧುನಿಕ ಬಣ್ಣ ಪಡೆದುಕೊಂಡಿದ್ದು, ಪ್ರತಿಯೊಂದೂ ಬೆರಳಿಗೂ ತೊಡುವ ಉಂಗುರಗಳು ಇದೀಗ ಫ್ಯಾಷನ್ ಜಗತ್ತಿನಲ್ಲಿ ಲಭ್ಯ. ಅಷ್ಟಕ್ಕೂ ಯಾವ ಬೆರಳಿಗೆ, ಎಂಥ ಉಂಗುರ ತೊಟ್ಟರೆ ಏನರ್ಥ?
ಕಿರು ಬೆರಳು
ಸ್ಟೈಲಿಷ್ ಉಂಗುರವನ್ನು ಕಿರು ಬೆರಳಿಗೆ ಧರಿಸುತ್ತಾರೆ. ಜ್ಯೋತಿಷ್ಯಶಾಸ್ತ್ರ ಮತ್ತು ಹಸ್ತಸಮುದ್ರಿಕದ ಪ್ರಕಾರ ಕಿರು ಬೆರಳಿಗೆ ಉಂಗುರ ಧರಿಸುವುದರಿಂದ ಬುದ್ಧಿಶಕ್ತಿ ಹೆಚ್ಚಿದ್ದು, ಜೀವನದಲ್ಲಿ ಛಲ ಹೊಂದಿರುತ್ತಾರೆ.
ರಿಂಗ್ ಬೆರಳು
ಈ ಬೆರಳಿನಲ್ಲಿ ಉಂಗುರ ತೊಟ್ಟರೆ ಮದುವೆಯಾಗಿದೆ ಎಂದರ್ಥ. ಚಂದಿರ, ಸೃಜನಶೀಲತೆ, ಸೌಂದರ್ಯ, ಪ್ರೀತಿ ಹಾಗೂ ಪ್ರೇಮವನ್ನು ಪ್ರತಿನಿಧಿಸುವ ಬೆರಳಿದು.
ಮಧ್ಯ ಬೆರಳು
ಜೀವನದ ಸಮತೋಲನ ಮತ್ತು ಜವಾಬ್ದಾರಿಯನ್ನು ಪ್ರತಿನಿಧಿಸುವ ಬೆರಳಿದು. ಈ ಬೆರಳು ಶನಿ ಗ್ರಹಕೂಟದೊಂದಿಗೆ ಸಂಬಂಧ ಹೊಂದಿದ್ದು, ಕಬ್ಬಿಣ ಹಾಗೂ ತಗಡಿನ ಉಂಗುರ ಧರಿಸಿದರೆ ಶ್ರೇಷ್ಠ.
ತೋರು ಬೆರಳು
ನಾಯಕತ್ವ, ಶಕ್ತ ಅಧಿಕಾರವನ್ನು ಪ್ರತಿನಿಧಿಸುವ ಬೆರಳಿದು.
ಹೆಬ್ಬೆರಳು
ಪ್ರಭಾವಶಾಲಿ ವ್ಯಕ್ತಿತ್ವ ಹೊಂದಿರುವವರು ಈ ಬೆರಳಿಗೆ ಉಂಗುರ ತೊಡುತ್ತಾರೆ.