White Cloth on Dead Body: ಎಲ್ಲ ಧರ್ಮದಲ್ಲಿಯೂ ಹೆಣದ ಮೇಲೆ ಬಿಳಿ ಬಟ್ಟೆಯನ್ನೇ ಹೊದಿಸೋದು ಯಾಕೆ?

Published : Jun 27, 2026, 03:39 PM IST
Wearing white to a funeral meaning

ಸಾರಾಂಶ

Wearing white to a funeral meaning: ಬಹುತೇಕ ಎಲ್ಲ ಧರ್ಮದಲ್ಲಿಯೂ ಕೂಡ ಸಾವಿನ ನಂತರದಲ್ಲಿ ಹೆಣದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ. ಇದಕ್ಕೆ ಕಾರಣ ಏನು? ವೈಜ್ಞಾನಿಕ ವಿಷಯ ಏನು? 

Wearing white to a funeral:ಎಲ್ಲ ಧರ್ಮದಲ್ಲಿಯೂ ಕೂಡ ಹೆಣದ ಮೇಲೆ ಬಿಳಿ ಬಟ್ಟೆಯನ್ನು ಹೊದಿಸುತ್ತಾರೆ. ಇದರ ಹಿಂದಿರುವ ಕಾರಣ ಏನು? ಯಾಕೆ ಹೀಗೆ ಮಾಡುತ್ತಾರೆ?

ವೈಜ್ಞಾನಿಕ ಮತ್ತು ನೈರ್ಮಲ್ಯದ ಕಾರಣಗಳು

ಬಿಳಿ ಬಟ್ಟೆಯ ಮೇಲೆ ಸ್ವಲ್ಪ ಧೂಳು, ಕೊಳಕು ಇದ್ದರೂ ಕೂಡ ಕಾಣುತ್ತದೆ. ಅಷ್ಟೇ ಅಲ್ಲದೆ ಶವದಿಂದ ದ್ರವ ಸೋರಿಕೆಯಾದರೂ ಕೂಡ ಕಾಣುತ್ತದೆ. ಹೀಗಾಗಿ ನೈರ್ಮಲ್ಯ ಕಾಪಾಡಿಕೊಳ್ಳಲು ಬಿಳಿ ಬಟ್ಟೆ ಹೊದಿಸುತ್ತಾರೆ.

ಬಿಳಿ ಬಟ್ಟೆಯು ಸೂರ್ಯನ ಬೆಳಕು, ಶಾಖವನ್ನು ಪ್ರತಿಫಲಿಸುತ್ತದೆ. ಇದರಿಂದ ಶವವು ಬೇಗನೆ ಕೊಳೆಯೋದಿಲ್ಲ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳು

ಬಿಳಿ ಬಣ್ಣವು ಶಾಂತಿ, ಪವಿತ್ರತೆ, ನಿರ್ಮಲತೆಯ ಸಂಕೇತವಾಗಿದೆ. ಮರಣ ಹೊಂದಿದ ವ್ಯಕ್ತಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಆಶಯ ಇರುವುದು.

ಬಣ್ಣ ಬಣ್ಣದ ಬಟ್ಟೆಗಳು ಪ್ರಾಪಂಚಿಕ ಆಸೆಗಳು, ಮೋಹ, ಭೋಗ ಎನ್ನಲಾಗುತ್ತದೆ. ಆದರೆ ಬಿಳಿ ಬಣ್ಣವು ವೈರಾಗ್ಯವನ್ನು ಸೂಚಿಸುತ್ತದೆ. ಮನುಷ್ಯ ಸತ್ತಾಗ ಎಲ್ಲ ಲೌಕಿಕ ಆಸೆಗಳನ್ನು ತೊರೆದು ಹಾಗೆಯೇ ಹೋಗುತ್ತಿದ್ದಾನೆ ಎನ್ನುವುದರ ಅರ್ಥ ಇದಾಗಿದೆ.

ಸಾಮಾಜಿಕ ಸಮಾನತೆ

ಜೀವಂತವಾಗಿದ್ದಾಗ ವ್ಯಕ್ತಿ ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ, ಸಾವಿನ ನಂತರ ಎಲ್ಲರೂ ಮಣ್ಣಾಗಿ ಮಣ್ಣಾಗುತ್ತಾರೆ, ಹೋಗುವಾಗ ಏನೂ ತಗೊಂಡು ಹೋಗೋದಿಲ್ಲ. ಹೀಗಾಗಿ ಒಂದೇ ರೀತಿಯ ಸರಳ ಬಿಳಿ ಬಟ್ಟೆಯನ್ನು ಹೊದಿಸಲಾಗುತ್ತದೆ.

ಮುತ್ತೈದೆಯವರು ಹೋದಾಗ ಕೆಂಪು ಅಥವಾ ಹಸಿರು ಬಣ್ಣದ ಸೀರೆ ಹೊದಿಸುವುದುಂಟು.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಮಗಿಂತ ಈ ಅಜ್ಜನೇ ಗ್ರೇಟ್! 18,000 ಅಡಿ ಎತ್ತರದಿಂದ ಸ್ಕೈಡೈವಿಂಗ್ ಮಾಡಿದ ದಾದಾಜಿ! ವಿಡಿಯೋ ವೈರಲ್
White Bed Sheets Train: ರೈಲು ಪ್ರಯಾಣಿಕರಿಗೆ ಬಿಳಿ ಬೆಡ್‌ ಶೀಟ್‌ ಕೊಡೋದು ಯಾಕೆ? ಇದೆ ಬಲವಾದ ಕಾರಣ!