Gen z: ಜೆನ್ ಜೀಗಳ ವಯಸ್ಸು ಪತ್ತೆ ಮಾಡೋದು ಸುಲಭ ಅಲ್ಲ. ವಯಸ್ಸು ಕಡಿಮೆ ಇದ್ರೂ ಅವ್ರ ಮುಖದಲ್ಲಿ ಹೊಳಪು ಕಾಣ್ತಿಲ್ಲ. ಅದಕ್ಕೆ ಕಾರಣ ಇಲ್ಲಿದೆ.
ವಯಸ್ಸು ನನಗಿನ್ನೂ ಇಪ್ಪತ್ತೈದು ಅಂತಾರೆ. ನೋಡೋಕೆ ಮೂವತ್ತು ದಾಟಿದಂತೆ ಕಾಣ್ಸುತ್ತೆ. ಮುಖ ನೋಡಿ ವಯಸ್ಸು ಗೆಸ್ ಮಾಡೋದು ಈಗ ಕಷ್ಟದ ಕೆಲ್ಸ. ಅದ್ರಲ್ಲೂ ಜೆನ್ ಜೀ (gen z )ಜನರು ಬೇಗ ವಯಸ್ಸಾದಂತೆ ಕಾಣ್ತಿದ್ದಾರೆ. ಅವರು ಸಮಯಕ್ಕಿಂತ ಬೇಗ ಮುದುಕರಾಗ್ತಿದ್ದಾರೆ. ಮುಖದಲ್ಲಿ ಛಾರ್ಮ್ ಇಲ್ಲ. ನಿಮಗೆ ಗೊತ್ತಿರೋ ಹಂಗೆ 1995 ರಿಂದ 2010ರ ಒಳಗೆ ಜನಿಸಿದ ಮಕ್ಕಳನ್ನು ಜೆನ್ ಜೀ ಅಂತ ಕರೀತಾರೆ.
ಬೇಗ ವಯಸ್ಸಾದಂತೆ ಕಾಣ್ತಿದ್ದಾರೆ ಜೆನ್ ಜೀ ಮಕ್ಕಳು : ಜೆನ್ ಜೀಗಳ ಮುಖದಲ್ಲಿ ಸುಕ್ಕು, ಡಾರ್ಕ್ ಸರ್ಕಲ್ ಎದ್ದು ಕಾಣ್ತಿದೆ. ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲ್ತಿರೋರೇ ಹೆಚ್ಚು. ಮೊದಲು ಹೆಚ್ಚಿನ ಮಾರ್ಕ್ಸ್ ಪಡೆಯುವ ಟೆನ್ಷನ್. ನಂತ್ರ ಕೆಲ ಗಿಟ್ಟಿಸಿಕೊಳ್ಳೊ ಟೆಕ್ಷನ್. ಆ ನಂತ್ರ ಕೆಲ್ಸದ ಟೆನ್ಷನ್. ಒಟ್ಟಿನಲ್ಲಿ ಇಡೀ ಜೀವನವನ್ನು ಟೆನ್ಷನ್ ನಲ್ಲಿ ಕಳೆಯುತ್ತಿದ್ದಾರೆ. ಅವರ ಲೈಫ್ ಸ್ಟೈಲ್ ಕೂಡ ಅವರು ಬೇಗ ವಯಸ್ಸಾದಂತೆ ಕಾಣಲು ಮುಖ್ಯ ಕಾರಣ ಆಗಿದೆ. ರಿಪೋರ್ಟ್ ಒಂದು, ಜೆನ್ ಜೀ ಜೀವನವನ್ನು ಕೊರೊನಾ ಸಂಪೂರ್ಣ ಬದಲಿಸಿದೆ ಅಂತ ವರದಿ ಮಾಡಿದೆ. ಕೊರೊನಾ (corona) ನಂತ್ರ ಜೀವನ ಸಹಜ ಸ್ಥಿತಿಗೆ ಬರೋದಕ್ಕೆ ಟೈಂ ತೆಗೆದುಕೊಂಡ್ತು. ಆ ಟೈಂನಲ್ಲಿ ಜೆನ್ ಜೀ ತಮ್ಮ ಯೌವನದಲ್ಲಿದ್ರು.
ವಯಸ್ಸಾದಂತೆ ಕಾಣಲು ಕಾರಣ ಏನು? : ತಜ್ಞರ ಪ್ರಕಾರ, ಜೆನ್ ಜೀ ಮಕ್ಕಳು ಬೇಗ ವಯಸ್ಸಾದಂತೆ ಕಾಣಲು ಕಾರ್ಟಿಸೋಲ್ ಹಾರ್ಮೋನ್ (cortisol hormone) ಕಾರಣ. ಇದನ್ನು ಸ್ಟ್ರೆಸ್ ಹಾರ್ಮೋನ್ (stress hormone) ಅಂತಾನೂ ಕರೀತಾರೆ. ಟೆನ್ಷನ್ ಹೆಚ್ಚಾಗ್ತಿದ್ದಂತೆ ಆ ಹಾರ್ಮೋನ್ ರಿಲೀಸ್ ಆಗುತ್ತೆ. ಜೆನ್ ಜೀಗಳು ಅನೇಕ ರೀತಿಯ ಸವಾಲು ಎದುರಿಸ್ತಿದ್ದಾರೆ. ಇದ್ರಿಂದಾಗಿ ಅವರ ಟೆನ್ಷನ್ ಜಾಸ್ತಿ ಆಗ್ತಿದೆ. ಇದಕ್ಕೆ ಮತ್ತೊಂದು ಕಾರಣ ಅವ್ರ ಓದು, ಕೆಲ್ಸ ಹಾಗೂ ಸೋಶಿಯಲ್ ಮೀಡಿಯಾ ಅಂತಾರೆ ತಜ್ಞರು. ಉಳಿದವರ ಪ್ರಸಿದ್ಧಿ, ಇವರ ನಿರುದ್ಯೋಗ ಎರಡೂ ಜೆನ್ ಜೀಗಳ ನಿದ್ರೆ ಹಾಳು ಮಾಡ್ತಿದೆ. ಜೆನ್ ಜೀಗಳು ಸೋಶಿಯಲ್ ಮೀಡಿಯಾ ಜೊತೆ ದೊಡ್ಡವರಾಗ್ತಿದ್ದಾರೆ. ಅವರ ಲೈಫ್ ಸ್ಟೈಲ್ ಹಾಗೂ ಮೆಂಟಲ್ ಹೆಲ್ತ್ ಮೇಲೆ ಈ ಸೋಶಿಯಲ್ ಮೀಡಿಯಾ ಪ್ರಭಾವ ಬೀರಿದೆ. ಸರಿಯಾಗಿ ಊಟ, ತಿಂಡಿ ಸಾಧ್ಯವಾಗ್ತಿಲ್ಲ. ಎಲ್ಲಿಯೂ ತೃಪ್ತಿ ಇಲ್ಲದ ಅತೃಪ್ತ ಜೀವನವನ್ನು ಅವರು ನಡೆಸ್ತಿದ್ದಾರೆ.
ಸದಾ ಯಂಗ್ ಆಗಿರಲು ಜೆನ್ ಜೀಗಳು ಏನು ಮಾಡ್ಬೇಕು? : ಜೆನ್ ಜೀಗಳು ಮೊದಲು ಮಾಡ್ಬೇಕಾದ ಕೆಲ್ಸ ಟೆನ್ಷನ್ ನಿಂದ ದೂರ ಇರೋದು. ಟೆನ್ಷನ್ ಮಾಡಿಕೊಂಡಷ್ಟು ಮುಖದ ಮೇಲೆ ಸುಕ್ಕು ಹೆಚ್ಚಾಗುತ್ತೆ. ಒತ್ತಡ ಕಡಿಮೆ ಮಾಡಿಕೊಳ್ಳಲು ಮೊಬೈಲ್ ಬದಿಗಿಟ್ಟು ವರ್ಕ್ ಔಟ್, ಯೋಗ, ವಾಕಿಂಗ್ ಗೆ ಸಮಯ ಮೀಸಲಿಡ್ಬೇಕು. ಅನೇಕರು, ಇಡೀ ದಿನ ಸೋಶಿಯಲ್ ಮೀಡಿಯಾ ಬಳಕೆ ಮಾಡ್ತಾರೆ. ಇದು ಅವರನ್ನು ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿ ಅನಾರೋಗ್ಯಕ್ಕೆ ತಳ್ಳುತ್ತೆ. ಸೋಶಿಯಲ್ ಮೀಡಿಯಾ ಬಳಕೆ ಕಡಿಮೆ ಮಾಡ್ದಷ್ಟು ಒಳ್ಳೆಯದು. ಅಷ್ಟೇ ಅಲ್ಲ ನಿದ್ರೆ ಹಾಗೂ ಆಹಾರಕ್ಕೆ ಮಹತ್ವ ನೀಡ್ಬೇಕು. ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವನೆ ಮಾಡ್ತಾ ಬಂದ್ರೆ ಯಂಗ್ ಕಾಣೋದ್ರಲ್ಲಿ ಡೌಟ್ ಇಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.