ಎಷ್ಟೇ ತಿಂದ್ರೂ ಕೆಲವರು ದಪ್ಪವಾಗೋಲ್ಲವೇಕೆ?

By Web DeskFirst Published Nov 23, 2018, 2:49 PM IST
Highlights

ತೆಳ್ ತೆಳ್ಳಗೆ ಬಳ್ಳಿಯಂತೆ ಇರೋದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ, ತುಂಬಾ ತೆಳ್ಳಗಿದ್ದರೆ? ಕೆಲವರಿಗೆ ಏನೂ ತಿನ್ನಬೇಕು ಎನಿಸುವುದಿಲ್ಲ ಅಥವಾ ಎಷ್ಟು ತಿಂದರೂ ದಪ್ಪಗಾಗೋಲ್ಲ. ಏಕೆ ಹೀಗೆ? 

ನೋಡಕ್ಕೆ ನರಪೇತಲ ನಾರಾಯಣನ ತರ ಇದಾನೆ. ಸಿದ್ದೆ ಅಕ್ಕಿ ಅನ್ನ ತಿಂದ್ರೂ, ದಪ್ಪ ಮಾತ್ರ ಆಗೋಲ್ಲ...ಎನ್ನುವ ಸಮಸ್ಯೆ ಕೆಲವರದ್ದು. ತೀರಾ ದಪ್ಪವಾದರೆ ಒಂದು ಸಮಸ್ಯೆಯಾದರೆ, ತೀರಾ ತೆಳ್ಳಗೆ ಇರುವುದೂ ಮತ್ತೊಂದು ಸಮಸ್ಯೆ. ಇಂಥವರನ್ನು ಖೆಡ್ಡಾಕ್ಕೆ ಬೀಳಿಸುವ ದಪ್ಪ ಅಥವಾ ತೆಳ್ಳಗೆ ಮಾಡೋ ಕೆಲವು ಔಷಧಿ ತಯಾರಿಕಾ ಕಂಪನಿಗಳು ದುಡ್ಡು ಮಾಡಿಕೊಳ್ಳುತ್ತವೆ.

ದಪ್ಪ ಆಗೋರದ್ದು ಒಂದು ಸಮಸ್ಯೆಯಾದರೆ, ಗಾಳಿ ಬಂದರೆ ಹಾರಿ ಹೋಗೋ ತರ ಇರ್ತಾರಲ್ಲ, ಅವರದ್ದು ಮತ್ತೊಂದು ಸಮಸ್ಯೆ? ಓದಿ ಈ ಲೇಖನ...

  • ವೈದ್ಯರು ಹೇಳುವಂತೆ ಜೀರ್ಣಕ್ರಿಯೆ ಸುಲಭ ಮಾಡಲು MGAT2 ಅನ್ನು ದೇಹ ಬಳಸುತ್ತದೆ. ಇದು ದೇಹದಲ್ಲಿ ಕೊಬ್ಬಿನಾಂಶವನ್ನು ನಿಯಂತ್ರಿಸಲು ಸಹಕರಿಸುತ್ತದೆ. ತೆಳ್ಳಗಿರುವವರ ದೇಹದಲ್ಲಿ ಈ ಅಂಶವೇ ಇರುವುದಿಲ್ಲ. 
  • ಆಹಾರ ಪದ್ಧತಿ ಬಗ್ಗೆ ಸೂಚನೆ ನೀಡುವ ಅಂಶ ಮೆದುಳಿನಲ್ಲಿರುತ್ತದೆ.  ಈ ಅಂಶ ಕಡಿಮೆ ಇರುವವರು ತೆಳ್ಳಗಿರುತ್ತಾರೆ. ಅದಕ್ಕೆ ಸುಮ್ ಸುಮ್ಮನೆ ಇವರು ತಿನ್ನುವುದೇ ಇಲ್ಲ. ಬೇಕು ಎನಿಸಿದಾಗ ಮಾತ್ರ ತಿನ್ನುತ್ತಾರೆ.  ಅದು ಅಗತ್ಯದಷ್ಟು ಮಾತ್ರ ತಿನ್ನಬಲ್ಲರು.
  • ಅಗತ್ಯಕ್ಕಿಂತ ಹೆಚ್ಚು ತಿಂದರೆ ಜೀರ್ಣಿಸಿಕೊಳ್ಳುವ ಶಕ್ತಿಯೇ ಇವರಿಗೆ ಇರುವುದಿಲ್ಲ. 
  • ಹೈಪರ್ ಥೈರಾಯ್ಡ್, ಮಧುಮೇಹ ಹಾಗೂ ಪೋಷಕಾಂಶ ಕೊರತೆ ಇದ್ದರೂ ತೂಕ ಹೆಚ್ಚುವುದಿಲ್ಲ. 
  • ವಂಶ ಪಾರಂಪರ್ಯದ ಕಾರಣವೂ ದೇಹದ ತೂಕದ ಮೇಲೆ ಅವಲಂಬಿತವಾಗಿರುತ್ತದೆ. ಕುಟುಂಬದಲ್ಲಿ ತೆಳ್ಳಗೆ ಇರುವವರೇ ಆಗಿದ್ದರೆ, ತೂಕ ಹೆಚ್ಚಿಸಿಕೊಳ್ಳುವುದು ಕಷ್ಟ.
  • ಸರಿಯಾದ ಸಮಯದಲ್ಲಿ ನಿದ್ದೆ ಮಾಡದಿದ್ದರೂ ಹಾರ್ಮೋನ್‌ನಲ್ಲಿ ಬದಲಾವಣೆಯಾಗಿ, ಫಿಟ್‌ನೆಸ್ ಮೆಂಟೈನ್ ಮಾಡೋದು ಕಷ್ಟ. 
click me!