ಪಿತ್ತ ಆಯ್ತು ಅಂದರೆ ಅಮ್ಮಂದಿರಿ ಬೆಲ್ಲ ಹುಣಸೆ ಹಣ್ಣಿನ ಪಾನಕ ಮಾಡಿ ಕೊಡುವುದು ಸಾಮಾನ್ಯ. ಅಡುಗೆ ರುಚಿ ಹೆಚ್ಚಿಸಲು ಬಳಸುವ ಹುಣಸೆ ಹಣ್ಣಿನಲ್ಲಿ ಇನ್ಯಾವ ಔಷಧೀಯ ಗುಣಗಳಿಗಿವೆ?
ಅಡುಗೆ ರುಚಿ ಹೆಚ್ಚಿಸುವ ಹುಣಸೆ ಹಣ್ಣಿನಲ್ಲಿ ಅನೇಕ ಔಷಧೀಯ ಗುಣಗಳಿನೆ. ಕ್ಯಾನ್ಸರ್, ಮೂಲವ್ಯಾಧಿಗೂ ಮದ್ದಾಗುವ ಇದರಲ್ಲಿ ಇನ್ಯಾವ ಔಷಧೀಯ ಗುಣಗಳಿವೆ?
- ನೀರಿನಲ್ಲಿ ಹುಣಸೆಹುಳಿ ಬೆರೆಸಿದ ನಿಂಬೆ ಚರಟವನ್ನು ನೆನೆಸಿ, ಕೂದಲ ಬುಡಕ್ಕೆ ಹಚ್ಚಿ. ಇದು ಕೂದಲನ್ನು ಬೇರಿನಿಂದಲೇ ಗಟ್ಟಿಗೊಳಿಸಿ, ಕೂದಲುದುರುವಿಕೆಯನ್ನು ತಡೆಯುತ್ತದೆ.
- ಹುಣಸೆ ತಿಂದರೆ ಆ್ಯಂಟಿಸೆಪ್ಟಿಕ್‌ನಂತೆ ಕೆಲಸಮಾಡಿ, ಗಾಯಗಳು ಬೇಗ ಮಾಯುವಂತೆ ಮಾಡುತ್ತದೆ.
- ದೇಹದೊಳಗೆ ಇನ್ಫೆಕ್ಷನ್ ಆಗದಂತೆ ನೋಡಿಕೊಳ್ಳುತ್ತದೆ.
- ಕೊಲೆಸ್ಟೆರಾಲ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
- ಹುಣಸೆಹುಳಿಯನ್ನು ಟೀಯೊಂದಿಗೆ ಬೆರೆಸಿ ಕೊಡುವುದು ಮಲೇರಿಯಾ ನಿಯಂತ್ರಣಕ್ಕೆ ಸಹಕಾರಿ.
- ಜಾಂಡೀಸ್ ಹಾಗೂ ಅಲ್ಸರ್ ಔಷಧಿ ತಯಾರಿಕೆಯಲ್ಲಿ ಹುಣಸೆ ರಸವನ್ನು ಬಳಸಲಾಗುತ್ತದೆ.
- ಆ್ಯಂಟಿಆಕ್ಸಿಡೆಂಟ್ಸ್ ಹೆಚ್ಚಿದ್ದು, ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಕುಂಠಿಸುತ್ತದೆ.
- ಹುಣಸೆ ಹೂವಿನಿಂದ ತೆಗೆದ ರಸವು ಮೂಲವ್ಯಾಧಿಯನ್ನು ನಿವಾರಿಸುತ್ತದೆ.
-ರಕ್ತ ಶುದ್ಧಿಗೂ ಹುಣಸೆ ಹಣ್ಣು ಬೆಸ್ಟ್ ಮದ್ದು.
ಮನೆ ಮದ್ದಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ