
ನಾವು ವಿಶ್ರಾಂತಿಗಾಗಿ ನಿದ್ದೆಗೆ ಜಾರುತ್ತೇವೆ. ಕೆಲವರ ನಿದ್ರೆ ಮಾತ್ರ ತುಂಬಾ ಚಿತ್ರ, ವಿಚಿತ್ರ. ನಿದ್ದೆಯಲ್ಲಿ ಹಲವು ಮಂದಿ ಕನಸು ಕಾಣ್ತಾರೆ, ಗೊಣಗುತ್ತಾರೆ, ಮಾತನ್ನಾಡುತ್ತಾರೆ, ನಗಾಡುತ್ತಾರೆ, ಇನ್ನೂ ಕೆಲವರು ಎದ್ದು ಓಡಾಡುತ್ತಾರೆ! ಒಬ್ಬಬ್ಬರದ್ದೂ ಒಂದೊಂದು ವಿಚಿತ್ರ.
ನಿಮಗೆ ಗೊತ್ತಾ ನಿದ್ದೆಯಲ್ಲಿದ್ದಾಗಲೂ ನಮ್ಮ ಮೆದುಳು ಸಕ್ರಿಯವಾಗಿರುತ್ತದೆ.. ಇದೇ ಕಾರಣಕ್ಕೆ ನಿದ್ರೆ ಮಾಡ್ತಿರುವಾಗ ಜನ ಕನಸು ಕಾಣ್ತಾರೆ. ಈ ಕನಸು ಕಾಣುವುದು, ಗೊಣಗುವುದು, ಮಾತನಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳನ್ನ ಸಾಮಾನ್ಯ ಎಂದು ಭಾವಿಸುವಂತಿಲ್ಲ. ನಿರ್ಲಕ್ಷಿಸುವಂತೆಯೂ ಇಲ್ಲ. ರಾತ್ರಿ ವೇಳೆ ನೀವು ಗೊಣಗಿದ್ರೆ ಅದು ಅನಾರೋಗ್ಯದ ಸಂಕೇತ. ಈ ವಿಚಾರ ಮೊದಲು ನೆನಪಿಟ್ಟುಕೊಳ್ಳಿ.
ನಿದ್ರೆಯಲ್ಲಿ ಮಾತನಾಡುವುದನ್ನು ಸೊಮ್ನಿಲೋಕ್ವಿ ಎನ್ನುತ್ತಾರೆ. ಇದು ಒಂದು ರೀತಿಯ ನಿದ್ರಾಹೀನತೆ. ಗೊಣಗುವುದು ನಿದ್ರೆಯ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಕನಸಿನಲ್ಲಿ ವಿವಿಧ ಚಟುವಟಿಕೆಗಳನ್ನ ನೋಡಿದ ನಂತರ ಮಾತನ್ನಾಡುತ್ತಾರೆ. ಅಲ್ಲದೇ ಪ್ರತಿಕ್ರಿಯಿಸಲು ಮುಂದಾಗಿ ಒದೆಯುವುದು, ಕೈಗಳನ್ನು ಬೀಸುತ್ತಾರೆ.
ನಿದ್ರೆಯಲ್ಲಿ ಗೊಣಗುವುದಕ್ಕೆ ಅನೇಕ ಕಾರಣಗಳಿವೆ. ಇದು ಸಾಮಾನ್ಯವಾಗಿ ಕನಸು ಕಾಣುವುದು, ಭಾವನೆಗಳನ್ನು ಸಂಸ್ಕರಿಸುವುದು ಮತ್ತು ನಿದ್ರೆಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳಿಂದ ಉಂಟಾಗುತ್ತದೆ. ನಿದ್ರೆಯಲ್ಲಿ ಮಾತನಾಡುವುದಕ್ಕೆ ಸಾಮಾನ್ಯ ಕಾರಣ ಒತ್ತಡ ಮತ್ತು ಆತಂಕ. ನಿದ್ದೆ ಮಾಡುವಾಗ ಒಬ್ಬ ವ್ಯಕ್ತಿಯು ದಿನದ ಒತ್ತಡ ಮತ್ತು ಆತಂಕವನ್ನು ಪ್ರತಿಬಿಂಬಿಸುತ್ತಾನೆ. ನಂತರ ಮೆದುಳು ದಿನದ ಘಟನೆಗಳು ಮತ್ತು ನೆನಪುಗಳನ್ನು ಪ್ರಕ್ರಿಯೆಗೊಳಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಇದು ನಿದ್ರೆಯಲ್ಲಿ ಮಾತನಾಡಲು ಕಾರಣವಾಗುತ್ತದೆ. ಕೆಲವು ಜನರು ಭಯ, ಆತಂಕ ಅಥವಾ ಹಠಾತ್ ಒತ್ತಡದಿಂದ ಉಂಟಾಗಬಹುದಾದ ದುಃಸ್ವಪ್ನಗಳನ್ನು ನೋಡುತ್ತಾ ನಿದ್ರೆಯಲ್ಲಿ ಮಾತನಾಡುತ್ತಾರೆ.
ನಿದ್ರೆಯಲ್ಲಿ ಗೊಣಗುವುದು ಸಾಮಾನ್ಯ. ದೈನಂದಿನ ನಿದ್ರೆಯಲ್ಲಿ ಗೊಣಗುವುದು ಅಥವಾ ದುಃಸ್ವಪ್ನಗಳು ಕಳವಳಕ್ಕೆ ಕಾರಣವಾಗಬಹುದು. ಕೆಲವು ಅಭ್ಯಾಸಗಳನ್ನು ಮಾಡೋದ್ರಿಂದ ಇದನ್ನ ತಡೆಯಬಹುದು.
ನಿದ್ದೆ ಎಂಬುದು ಮಾನವ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ನೈಸರ್ಗಿಕ ಪ್ರಕ್ರಿಯೆ. ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ಪೌಷ್ಟಿಕ ಆಹಾರ ಮತ್ತು ವ್ಯಾಯಾಮ ಎಷ್ಟು ಮುಖ್ಯವೋ, ಸರಿಯಾದ ನಿದ್ದೆಯೂ ಅಷ್ಟೇ ಪ್ರಮುಖ ಆಗಿದೆ. ಸಮಾನವಾಗಿ ಪ್ರತಿಯೊಬ್ಬ ವ್ಯಕ್ತಿಯೂ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಗಾಢ ನಿದ್ದೆ ಮಾಡುವುದು ಆರೋಗ್ಯಕರ ಜೀವನಶೈಲಿಗೆ ಅತ್ಯಗತ್ಯ. ಇನ್ಮುಂದೆ ಯಾವುತ್ತೂ ನಿದ್ದೆಯನ್ನ ತಪ್ಪಿಸಿಕೊಳ್ಳಬೇಡಿ. ಒಂದು ವೇಳೆ ನಿಮ್ಮ ನಿದ್ದೆಯಲ್ಲಿ ಏರುಪೇರು ಆಗಿದೆ ಅಂದ್ರೆ ಆರೋಗ್ಯದಲ್ಲಿ ಏರುಪೇರು ಆಗಲಿದೆ ಎಂದರ್ಥ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.