Knowledge: ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿರೋದೇಕೆ?

Published : Sep 15, 2022, 05:33 PM IST
Knowledge: ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿರೋದೇಕೆ?

ಸಾರಾಂಶ

ವಿಮಾನ ಹತ್ತಿದ್ರೆ ಸುಂದರ ಹುಡುಗಿಯರು ನಿಮ್ಮನ್ನು ಸ್ವಾಗತಿಸ್ತಾರೆ. ಗಗನಸಖಿ ನೋಡಲೆಂದೇ ಕೆಲವರು ವಿಮಾನ ಪ್ರಯಾಣ ಬೆಳೆಸ್ತಾರೆ ಅಂದ್ರೆ ಅತಿಶಯೋಕ್ತಿ ಏನಲ್ಲ. ಕ್ಯಾಬಿನ್ ಸಿಬ್ಬಂದಿಯಾಗಿ ಮಹಿಳೆಯರನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲು ಕಾರಣವೇನು ಎಂಬುದನ್ನು ನಾವಿಂದು ಹೇಳ್ತೇವೆ.   

ವಿಮಾನದಲ್ಲಿ ನೀವು ಈಗಾಗಲೇ ಪ್ರಯಾಣ ಬೆಳೆಸಿರಬಹುದು. ಇಲ್ಲವೆ ಸಿನಿಮಾ ಹಾಗೂ ಟಿವಿಯಲ್ಲಿ ವಿಮಾನ ಹಾಗೂ ಅದ್ರ ಒಳಗಿನ ಚಿತ್ರಣ ನೋಡಿರ್ತೀರಿ. ವಿಮಾನದಲ್ಲಿ ಸಾಮಾನ್ಯವಾಗಿ ಸಿಬ್ಬಂದಿಯಾಗಿ ಕೆಲಸ ಮಾಡೋದು ಹೆಣ್ಮಕ್ಕಳು. ವಿಮಾನದಲ್ಲಿ ಪ್ರಯಾಣಿಕರ ಆಗುಹೋಗುಗಳಿಗೆ ಸ್ಪಂದಿಸಲು ಮಹಿಳೆಯರನ್ನೇ ಆಯ್ಕೆ ಮಾಡಲಾಗುತ್ತದೆ. ಪ್ರಪಂಚದ ಬಹುತೇಕ ವಿಮಾನ ಕಂಪನಿಗಳು ಪುರುಷರಿಗಿಂತ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಆಯ್ಕೆ ಮಾಡುತ್ತವೆ. ಆದ್ರೆ ವಿಮಾನದಲ್ಲಿ ಯಾಕೆ ಹೆಣ್ಮಕ್ಕಳನ್ನೇ ಹೆಚ್ಚಾಗಿ ಕೆಲಸಕ್ಕೆ ನೇಮಕ ಮಾಡಿಕೊಳ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ನಾವಿಂದು, ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಇರೋದು ಏಕೆ ಎಂಬುದನ್ನು ನಿಮಗೆ ಹೇಳ್ತೇವೆ.

ಒಂದು ಅಂಕಿ ಅಂಶದ ಪ್ರಕಾರ, ಪುರುಷ ಮತ್ತು ಮಹಿಳಾ ಕ್ಯಾಬಿನ್ ಸಿಬ್ಬಂದಿ (Cabin crew) ಅನುಪಾತ 2/20ರಷ್ಟಿರುತ್ತದೆ. ವಿದೇಶ (Abroad) ದ ಕೆಲ ವಿಮಾನ (plane) ಕಂಪನಿಗಳಲ್ಲಿ ಪುರುಷ ಮತ್ತು ಮಹಿಳಾ ಕ್ಯಾಬಿನ್ ಸಿಬ್ಬಂದಿ ಅನುಪಾತ 4/10 ಇರುತ್ತದೆ. ಈ ಅಂಕಿ ಅಂಶದ ಪ್ರಕಾರ, ಕ್ಯಾಬಿನ್ ಸಿಬ್ಬಂದಿಯಾಗಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿರ್ತಾರೆ ಎಂಬುದನ್ನು ನಾವು  ಸುಲಭವಾಗಿ ಹೇಳಬಹುದು. 

ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿರಲು ಕಾರಣ :

ಮಹಿಳೆಯರ ಸೌಂದರ್ಯ : ಯಸ್, ಮಹಿಳೆಯರ ಸೌಂದರ್ಯ ಎಲ್ಲರನ್ನು ಸೆಳೆಯುತ್ತದೆ. ವಿಮಾನ ಕಂಪನಿಗಳು ಸುಂದರ ಮಹಿಳೆಯರ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಇದೇ ಕಾರಣಕ್ಕೆ ಫಿಟ್ ಆಂಡ್ ಬ್ಯೂಟಿಫುಲ್ ಹುಡುಗಿಯರನ್ನು ಸಿಬ್ಬಂದಿಯಾಗಿ ನೇಮಕ ಮಾಡಿಕೊಳ್ಳಲು ಮುಂದಾಗ್ತಾರೆ.ಆದ್ರೆ ವಿಮಾನ ಕಂಪನಿಗಳು ಕ್ಯಾಬಿನ್ ಸಿಬ್ಬಂದಿಯಾಗಿ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಬರಿ ಇದೊಂದೇ ಕಾರಣವಲ್ಲ. 

ಮಹಿಳೆಯರ ಮಾತಿಗಿದೆ ಹೆಚ್ಚಿನ ಮಾನ್ಯತೆ : ವಿಮಾನದಲ್ಲಿ ಅನೇಕ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಸಿಬ್ಬಂದಿ ಹೇಳಿದಂತೆ ಪ್ರಯಾಣಿಕರು ಕೇಳಬೇಕಾಗುತ್ತದೆ. ಸಾಮಾನ್ಯವಾಗಿ ಪುರುಷರು ಹೇಳಿದ್ರೆ ಅದನ್ನು ಪಾಲಿಸುವವರ ಸಂಖ್ಯೆ ಕಡಿಮೆ. ಅದೇ ಮಹಿಳೆಯರು ಮಧುರ ಧ್ವನಿಯಲ್ಲಿ ಸಂದೇಶ ನೀಡಿದ್ರೆ ಅದನ್ನು ಬಹುತೇಕರು ಕಣ್ಮುಚ್ಚಿಕೊಂಡು ಪಾಲನೆ ಮಾಡ್ತಾರೆ. ಇದು ಮನುಷ್ಯನ ಸೈಕಾಲಜಿಗೆ ಸಂಬಂಧಿಸಿದೆ. ಮಹಿಳೆಯರ ಸೂಚನೆಯನ್ನು ಪ್ರಯಾಣಿಕರು ನಿರಾಕರಿಸುವುದಿಲ್ಲ, ಹೆಣ್ಮಕ್ಕಳಿಗೆ ತಿರುಗಿ ಹೇಳುವ ಅಥವಾ ಗಲಾಟೆ ಮಾಡುವ ಕೆಲಸಕ್ಕೆ ಕೈ ಹಾಕುವುದಿಲ್ಲ. ಮನುಷ್ಯನ ಮಾನಸಿಕ ಸ್ಥಿತಿಯನ್ನು ಅರಿತಿರುವ ವಿಮಾನ ಕಂಪನಿಗಳು, ಕ್ಯಾಬಿನ್ ಸಿಬ್ಬಂದಿಯಾಗಿ ಹುಡುಗಿಯರನ್ನು ನೇಮಕ ಮಾಡಿಕೊಳ್ಳಲು ಮುಂದಾಗ್ತಾರೆ. ವಿಮಾನದಲ್ಲಿ ಪ್ರಯಾಣಿಕರು ಎಲ್ಲ ನಿಯಮವನ್ನು ಪಾಲಿಸುವುದು ಬಹಳ ಮುಖ್ಯವಾದ ಕಾರಣ ಕಂಪನಿಗಳು ಈ ನಿರ್ಧಾರ ಕೈಗೊಳ್ಳುತ್ತವೆ.

ಬೆಲ್ಲ, ಸಕ್ಕರೆಯನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ಸ್ ಟ್ರೈ ಮಾಡಿ

ಕ್ಯಾಬಿನ್ ಸಿಬ್ಬಂದಿಯಾಗಿ ಮಹಿಳೆಯರಿರಲು ತೂಕವೂ ಒಂದು ಕಾರಣ : ಹೌದು, ವಿಮಾನ ಕ್ಯಾಬಿನ್ ಸಿಬ್ಬಂದಿಯಾಗಿ ಮಹಿಳೆಯರನ್ನು ನೇಮಕ ಮಾಡಲು ತೂಕ ಕೂಡ ಒಂದು ಕಾರಣವಾಗಿದೆ. ವಿಮಾನ ಕಡಿಮೆ ತೂಕವನ್ನು ಹೊಂದಲು ಆದ್ಯತೆ ನೀಡುತ್ತದೆ. ಹಣ ಹಾಗೂ ಇಂಧನ ಉಳಿಸಲು ವಿಮಾನ ಕಂಪನಿಗಳು ಮಹತ್ವ ನೀಡುತ್ತವೆ. ವಿಮಾನಯಾನ ಕಂಪನಿಗಳು ತಮ್ಮ ಹಣವನ್ನು ಉಳಿಸಲು ಏನು ಬೇಕಾದರೂ ಮಾಡುತ್ತವೆ. ಮಹಿಳೆಯರ ತೂಕ ಕೂಡ ಇಲ್ಲಿ ಮಹತ್ವ ಪಡೆಯುತ್ತದೆ. ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರ ತೂಕ ಕಡಿಮೆ ಇರುತ್ತದೆ.  ಕಡಿಮೆ ಇಂಧನ, ಕಡಿಮೆ ಖರ್ಚು ವಿಮಾನದ ಗೆಲುವು ಎಂದ್ರೆ ತಪ್ಪಾಗಲಾರದು.

Health Tips: ಇಮ್ಯುನಿಟಿ ಬೂಸ್ಟರ್ ಆಗಿ ಕೆಲಸ ಮಾಡುತ್ತೆ ಈ ಸೊಪ್ಪು

ಮಹಿಳೆಯರ ಕೆಲಸ : ವಿಮಾನ ಹಾರಾಟದ ಸಮಯದಲ್ಲಿ ಸೇವೆ ಮತ್ತು ಇತರ ನಿರ್ವಹಣೆಗೆ ವಿಶೇಷ ಗಮನ ನೀಡಬೇಕು. ಸೂಕ್ಷ್ಮ ವಿಷ್ಯಗಳನ್ನೂ ಗಮನಿಸಬೇಕು. ಪುರುಷರಿಗಿಂತ ಮಹಿಳೆಯರು ಉತ್ತಮ ನಿರ್ವಹಣಾ ಕೌಶಲ್ಯವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಮಹಿಳೆಯರು ಎಲ್ಲವನ್ನೂ ಎಚ್ಚರಿಕೆಯಿಂದ ಆಲಿಸ್ತಾರೆ, ಇದು ಅವರು ಉತ್ತಮ ತರಬೇತಿ ಪಡೆಯಲು ನೆರವಾಗುತ್ತದೆ ಎಂದು ವಿಮಾನ ಕಂಪನಿಗಳ ನಂಬಿಕೆಯಾಗಿದೆ.
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್, ಸೋಶಿಯಲ್ ಮೀಡಿಯಾ ವಿಲನ್
ನೀವು ಸಾಯುವ ಮೊದಲು ಈ 4 ವಸ್ತುಗಳನ್ನು ಹೊಂದಿದ್ದರೆ, ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರಂತೆ