
ವ್ಯಾಯಾಮ ಜಿಮ್ ಮಾಡುವವರು ಪೋಸ್ಟ್ ಮತ್ತು ಪ್ರಿ ವರ್ಕ್‌ಔಟ್ ಮಾಡುವಾಗ ಸೇವಿಸಿದರೂ ಒಳ್ಳೆಯದು. ಅಂದ ಮೇಲೆ ನೀವು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಹಣ್ಣು ಅಯ್ಕೆ ಮಾಡಿಕೊಳ್ಳಬೇಕು. ಎಂಥ ಹಣ್ಣು ಸೂಕ್ತ?
ಪೂರ್ತಿ ಹಣ್ಣಾಗದ ಬಾಳೆಹಣ್ಣು
ಪಕ್ವವಾಗಿರದ ಬಾಳೆಹಣ್ಣು ಒಗರು ಒಗರಿರುತ್ತದೆ. ರುಚಿ ಇರುವುದಿಲ್ಲ. ಆದರೆ, ಟೈಪ್ ಮಧುಮೇಹ ಇರುವವರಿಗೆ ಇದು ರಾಮಬಾಣ. ಕ್ಯಾಲ್ಸಿಯಂ ಅಧಿಕವಾಗಿರುವ ಇಂಥ ಹಣ್ಣು ಮೂಳೆಯನ್ನು ಗಟ್ಟಿಗೊಳಿಸುತ್ತದೆ. ಆರೋಗ್ಯವನ್ನು ವೃದ್ಧಿಸುವ ಪ್ರೊಬಯಾಟಿಕ್ ಬ್ಯಾಕ್ಟಿರೀಯಾ ಇದರಲ್ಲಿ ಅಧಿಕವಾಗಿರುತ್ತದೆ. ಆದರೆ, ಇದನ್ನು ಮಿತಿಯಲ್ಲಿ ತಿನ್ನುವುದೊಳಿತು. ಜೀರ್ಣಕ್ರಿಯೆಗೆ ತೊಂದರೆ ಮಾಡುವುದಲ್ಲದೇ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ಇದು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಹುಷಾರ್!
ಗಳಿತ ಹಣ್ಣು
ಬಾಳೆಹಣ್ಣಿನ ಸಿಪ್ಪೆ ತೆಗೆದಾಗ ಸ್ಟಾರ್ಚ್ ಸಕ್ಕರೆ ರೀತಿಯಲ್ಲಿ ಬದಲಾಗುತ್ತದೆ. ಆದ್ದರಿಂದ ನಮ್ಮ ಪಚನಕ್ರಿಯೆ ಉತ್ತಮಗೊಳ್ಳುತ್ತದೆ. ಕಾಯಿ ಬಾಳೆಹಣ್ಣಿಗಿಂತ ಶೇ.8ರಷ್ಟು ಹೆಚ್ಚು ಶಕ್ತಿ ನೀಡುತ್ತದೆ. ಆ್ಯಂಟಿ ಆ್ಯಕ್ಸಿಡೆಂಟ್ ಪ್ರಮಾಣ ಇದರಲ್ಲಿ ಹೆಚ್ಚಿದ್ದು, ಹೆಚ್ಚೆಚ್ಚು ಹಣ್ಣಾದಷ್ಟೂ ಸಕ್ಕರೆ ಮತ್ತು ಮೈಕ್ರೋ ಪೋಷಕಾಂಶಗಳ ಪ್ರಮಾಣವೂ ಹೆಚ್ಚುತ್ತದೆ.
ಕಂದು ಬಣ್ಣದ ಬಾಳೆಹಣ್ಣು
ಬಾಳೆಹಣ್ಣು ಬಣ್ಣ ಬದಲಾದಂತೆ ಅದನ್ನು ಎಸೆಯುವವರೇ ಹೆಚ್ಚು. ಆದರೆ, ಇದರಷ್ಟು ರುಚಿ ಮತ್ಯಾವುದೂ ಇರೋಲ್ಲ. ಬಾಳೆ ಹಣ್ಣಿನ ಸಿಪ್ಪೆ ಕಂದು ಬಣ್ಣಕ್ಕೆ ತಿರುಗಿದಷ್ಟು ಆರೋಗ್ಯಕಾರಿ. ಇದು ಕ್ಯಾನ್ಸರ್‌ನಂಥ ರೋಗಗಳನ್ನು ತರುವ ಅನಗತ್ಯ ಜೀವಕೋಶಗಳನ್ನು ಸಾಯುಸುತ್ತದೆ. ಆದರೆ, ಮಧುಮೇಹ ಇರುವವರು ಇಂಥ ಹಣ್ಣನ್ನು ಸೇವಿಸಬಾರದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.