ಡ್ರೈ ಫ್ರೂಟ್ಸ್ ಮಾಡುತ್ತೆ ಮಕ್ಕಳನ್ನು ಸ್ಟ್ರಾಂಗ್....

By Web Desk  |  First Published Jul 27, 2018, 7:02 PM IST

ಈಗಿನ ಮಕ್ಕಳು ಬೇಡದ್ದನ್ನು ತಿನ್ನುವುದೇ ಹೆಚ್ಚು. ಅದು ಬಿಟ್ಟು ಮಕ್ಕಳನ್ನು ಸ್ಟ್ರಾಂಗ್ ಆಗಿಸಿ, ಅವು ಇಷ್ಟ ಪಡುವ ಆಹಾರವೆಂದರೆ ಡ್ರೈ ಫ್ರೂಟ್ಸ್. ಇದು ಮಕ್ಕಳ ಆರೋಗ್ಯಕ್ಕೆ ಏಕೆ ಬೇಕು ಹಾಗೂ ಏನೀ ಉಪಯೋಗ. ಓದಿ...


ಪೋಷಕರ ಪ್ರಪಂಚವೇ ಮಕ್ಕಳು. ಅವರ ಆರೋಗ್ಯಕ್ಕಾಗಿ ಪ್ರತಿಯೊಬ್ಬ ತಂದೆ ತಾಯಿಯೂ ಪ್ರಾರ್ಥಿಸುತ್ತಾರೆ. ಮಕ್ಕಳ ಬಗ್ಗೆ ಎಷ್ಟು ಕೇರ್ ತೆಗೆದುಕೊಂಡರೂ ಕಡಿಮೆ ಎಂದೇ ಪೋಷಕರು ಭಾವಿಸುತ್ತಾರೆ. ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡಲು ಡ್ರೈ ಫ್ರುಟ್ಸ್ ಬೆಸ್ಟ್ ಫುಡ್. 

ಬಾದಾಮಿ, ಪಿಸ್ತಾ, ಗೋಡಂಬಿ, ವಾಲ್ನಟ್ ಇವುಗಳಿಂದ ಮಕ್ಕಳಿಗೆ ಏನು ಪ್ರಯೋಜನ?

ಬಾದಾಮಿ: ಬಾದಾಮಿ ಪ್ರತಿಯೊಬ್ಬರ ಆರೋಗ್ಯಕ್ಕೆ ಉತ್ತಮವಾದ ಆಹಾರ. ಪ್ರತಿದಿನ ರಾತ್ರಿ ಎರಡು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು,  ಬೆಳಗ್ಗೆ ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳಿಗೆ ಅಗತ್ಯ ಎನರ್ಜಿ ಸಿಗುತ್ತದೆ. ಜೊತೆಗೆ ಅವರ ಮೆದುಳು  ಚುರುಕಾಗುತ್ತದೆ. ಇದಲ್ಲದೆ ಬಾದಾಮಿಯನ್ನು ಪುಡಿ ಮಾಡಿ ಹಾಲಿನಲ್ಲಿ ಬೆರೆಸಿಯೂ ನೀಡಬಹುದು. ಬಾದಾಮಿ ಎಣ್ಣೆಯಿಂದ ಮಕ್ಕಳಿಗೆ ಮಸಾಜ್ ಮಾಡಿದರೆ ಮೂಳೆ ಸ್ಟ್ರಾಂಗ್ ಆಗುತ್ತವೆ. 

Latest Videos

undefined

ಗೋಡಂಬಿ:  ಗೋಡಂಬಿಯಲ್ಲಿ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಗೋಡಂಬಿ ತಿನ್ನಿಸಿದರೆ ಮಕ್ಕಳ ತ್ವಚೆಯ ಹೊಳಪು ಹೆಚ್ಚುತ್ತದೆ. ಜೊತೆಗೆ ಮಗು ಸ್ಟ್ರಾಂಗ್ ಆಗುತ್ತದೆ. 

ಒಣ ದ್ರಾಕ್ಷಿ: ಇದು ಹೆಚ್ಚಿನ ಮಕ್ಕಳಿಗೆ ಇಷ್ಟ. ಖುಷ್ ಖುಷಿಯಾಗಿ ತಿನ್ನುವ ದ್ರಾಕ್ಷಿ ಸೇವನೆಯಿಂದ ಮಕ್ಕಳ ರಕ್ತ ಸಂಚಲನ ಸುಗಮವಾಗುತ್ತದೆ. ಕಣ್ಣು ಮತ್ತು  ಹಲ್ಲಿನ ಆರೋಗ್ಯಕ್ಕೂ  ಬೆಸ್ಟ್. ಮಲಬದ್ಧತೆಗಂತೂ ಇದಕ್ಕಿಂತ ಉತ್ತಮ ಔಷಧಿಯೇ ಇಲ್ಲ.

ವಾಲ್ನಟ್: ಮಗು ಬೆಡ್‌ನಲ್ಲಿ ಮೂತ್ರ ಮಾಡುತ್ತಿದ್ದರೆ ಅವರಿಗೆ ವಾಲ್ನಟ್ ಜೊತೆ. ಒಣದ್ರಾಕ್ಸಿ ನೀಡಿ. ವಾಲ್ನಟ್ ಮಕ್ಕಳ ಜ್ಞಾಪಕ ಶಕ್ತಿಯನ್ನೂ ವೃದ್ಧಿಸುತ್ತದೆ.  ಹೃದಯದ ಆರೋಗ್ಯಕ್ಕೂ ಬೆಸ್ಟ್.

ಪಿಸ್ತಾ: ಪಿಸ್ತಾದಲ್ಲೂ ವಿಟಮಿನ್ ಈ ಹೆಚ್ಚಿನ ಪ್ರಮಾಣದಲ್ಲಿದೆ. ಇದೇ ಕಾರಣಕ್ಕೆ ಪಿಸ್ತಾ ಮಕ್ಕಳ ಆರೋಗ್ಯಕ್ಕೆ ಬೇಕು. ಸ್ಕಿನ್ ಕ್ಯಾನ್ಸರ್ ಬಾರದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲ ಬ್ಲಡ್ ಶುಗರ್ ಕಂಟ್ರೋಲ್ ಮಾಡಲೂ ನೆರವಾಗುತ್ತದೆ.
 

click me!