ಹೆಂಗೆಂಗೋ ಹಣ್ಣು ತಿಂದರೆ ಕೆಡುತ್ತೆ ಆರೋಗ್ಯ...

By Web Desk  |  First Published Feb 24, 2019, 10:07 AM IST

ನಾವು ತಿನ್ನುವ ಆಹಾರ, ಹಣ್ಣು, ಕುಡಿಯುವ ನೀರಿಗೆ ಅದಕ್ಕೆ ಆದ ರೀತಿ ನೀತಿಗಳಿವೆ. ನಿಮಗೆ ಬೇಕೆ ಬೇಕೆಂದಾಗ ಹಣ್ಣಾದರೂ ಸರಿ, ತಿನ್ನಲೇ ಬಾರದು. ಅಷ್ಟಕ್ಕೂ ಯಾವಾಗ ಹಣ್ಣು ತಿನ್ನಬೇಕು, ತಿನ್ನಬಾರದು?


ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭ ಹೌದು. ಆದರೆ, ತಪ್ಪಾದ ಸಮಯದಲ್ಲಿ ತಿಂದರೆ ಅದರಿಂದ ಹಲವಾರು ಸಮಸ್ಯೆಗಳೂ ಕಾಡುತ್ತವೆ. ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಯಾವುದು ನೋಡೋಣ... 

  • ತಿಂಡಿ ತಿಂದ ಕೂಡಲೇ ಅಥವಾ ಮುನ್ನ ಹಣ್ಣು ತಿನ್ನಬಾರದು. ಕಡಿಮೆ ಎಂದರೆ ಅರ್ಧ ಗಂಟೆ ಅಂತರ ಇರಬೇಕು. ಹಣ್ಣು ತಿಂದ ಗಂಟೆ ನಂತರ ಆಹಾರ ಸೇವಿಸಿದರೆ, ಆ್ಯಸಿಡಿಟೆ ಕಾಡುವುದಿಲ್ಲ. 
  • ಬೆಳಗ್ಗೆ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಮತ್ತು ಶರೀರಕ್ಕೆ ಉತ್ತಮ. ಆದರೆ ಕೆಲವೊಂದು ಹಣ್ಣುಗಳನ್ನು ಖಾಲಿ ಹೊಟ್ಟೆಗೆ ಸೇವಿಸಬಾರದು. ಸಿಟ್ರಿಕ್ ಅಥವಾ ಹುಳಿಯಾದ ಹಣ್ಣುಗಳನ್ನು ಖಾಲಿ ಹೊಟ್ಟೆಗೆ ತಿಂದರೆ ಆ್ಯಸಿಡಿಟಿ ಹೆಚ್ಚುತ್ತದೆ. 
  • ಹಣ್ಣನ್ನು ಮೊಸರು ಅಥವಾ ಹಾಲಿನೊಂದಿಗೆ ಮಿಕ್ಸ್ ಮಾಡಿ ಸೇವಿಸಲೇ ಬಾರದು. ಮಿಲ್ಕ್ ಶೇಕ್ ಸಹ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ವಿಶೇಷವಾಗಿ ಸಿಟ್ರಿಕ್ ಅಂಶವಿರುವ ಹಣ್ಣುಗಳು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
  • ಕೆಲವು ಹಣ್ಣುಗಳು ಕಿಡ್ನಿ ಸ್ಟೋನ್‌ಗೂ ಮಾರಕ. ಆದುದರಿಂದ ಮೊದಲೇ ಅದರ ಬಗ್ಗೆ ಮಾಹಿತಿ ಇರಲಿ. ಕಲ್ಲಂಗಡಿ ಹಣ್ಣನ್ನು ತಿನ್ನುತ್ತಿದ್ದರೆ ಅದರ ಜೊತೆ ಬೇರೆ ಯಾವುದೇ ಹಣ್ಣುಗಳನ್ನು ಸೇವಿಸಬೇಡಿ. 
  • ನಿಮ್ಮ ದೇಹದ ಉಷ್ಣಾಂಶಕ್ಕೆ ಅನುಗುಣವಾಗಿ ಹಣ್ಣುಗಳನ್ನು ಸೇವಿಸಿ. ದೇಹ ತಂಪಾಗಿದ್ದರೆ ಬಾಳೆಹಣ್ಣು, ಕಿತ್ತಳೆ, ಅನನಾಸು ಹೆಚ್ಚು ತಿನ್ನಬೇಡಿ. ಬಿಸಿಯಾಗಿದ್ದರೆ ಮಾವಿನಹಣ್ಣು, ಪಪ್ಪಾಯಿಯಂಥ ಹಣ್ಣುಗಳನ್ನು ಸೇವಿಸೋದು ಬೇಡ.

Tap to resize

Latest Videos

ಹೊಟ್ಟೆ, ಸೊಂಟದ ಸುತ್ತಲಿನ ಕೊಬ್ಬು ಕರಗಿಸುತ್ತವೆ ಈ 5 ಹಣ್ಣುಗಳು!

click me!