ನನಗೆ ಇಂಥಾ ಸಂಸ್ಥೆಯಲ್ಲಿ ಕೆಲಸ ಸಿಕ್ತು ಎಂದ ಕೂಡಲೇ ಬಹುತೇಕರು ಕೇಳುವ ಮೊದಲ ಪ್ರಶ್ನೆ ಸಂಬಳವೆಷ್ಟು ಎಂಬುದು. ಇಂತಹ ಪ್ರಶ್ನೆಗೆ ಎಷ್ಟು ಜನ ಸತ್ಯ ಉತ್ತರ ಕೊಡುತ್ತಾರೆ ಇಲ್ಲಿದೆ ಸಮೀಕ್ಷೆ ರಿಸಲ್ಟ್
ನವದೆಹಲಿ: ನನಗೆ ಇಂಥಾ ಸಂಸ್ಥೆಯಲ್ಲಿ ಕೆಲಸ ಸಿಕ್ತು ಎಂದ ಕೂಡಲೇ ಬಹುತೇಕರು ಕೇಳುವ ಮೊದಲ ಪ್ರಶ್ನೆ ಸಂಬಳವೆಷ್ಟು ಎಂಬುದು. ಇತ್ತ ನಮ್ಮನ್ನು ಕೆಲಸಕ್ಕೆ ತೆಗೆದುಕೊಂಡ ಹೆಚ್‌ಆರ್ ಸ್ಯಾಲರಿ ಅತ್ಯಂತ ಗೌಪ್ಯವಾದ ವಿಚಾರ. ಇದನ್ನು ಎಲ್ಲರಿಗೂ ಹೇಳಿಕೊಂಡು ತಿರುಗಾಡುವಂತಿಲ್ಲ. ಯಾರೊಂದಿಗೂ ಈ ಮಾಹಿತಿಯನ್ನು ಹಂಚಿಕೊಳ್ಳುವಂತಿಲ್ಲ. ಹೀಗೆ ಹೇಳಿಕೊಂಡು ಚರ್ಚಿಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೆಲಸ ನೀಡುವಾಗಲೇ ಹೇಳಿರುತ್ತಾರೆ. ಆದರೂ ಸ್ಯಾಲರಿ ವಿಚಾರ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ ಯಾರೂ ಕೂಡ ತಮ್ಮ ಸಹೋದ್ಯೋಗಿಗಳೊಂದಿಗೆ ಈ ವಿಚಾರವಾಗಿ ಸತ್ಯ ಹೇಳುವುದಿಲ್ಲವಂತೆ. ಅದರ ಬದಲಾಗಿ ಅವರು ತಮ್ಮ ಕುಟುಂಬದವರ ಜೊತೆ ತನಗಿಷ್ಟು ಸ್ಯಾಲರಿ ಎಂದು ಆ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುತ್ತಾರಂತೆ.
ಸಾಮಾಜಿಕ ಜಾಲತಾಣ (Social Media) ಲಿಂಕ್ಡಿನ್ ಬಿಡುಗಡೆ ಮಾಡಿದ Workforce Confidence Index ಎಂಬ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ. ಶೇಕಡಾ 61% ರಷ್ಟು ಜನ ತಮ್ಮ ವೇತನದ ವಿವರಗಳನ್ನು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರಂತೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಹಾಗೆಯೇ ಶೇಕಡಾ 25% ರಷ್ಟು ಉದ್ಯೋಗಿಗಳು ತಮ್ಮ ಆಪ್ತ ಸ್ನೇಹಿತರೊಂದಿಗೆ (Friends) ಈ ವಿವರಗಳನ್ನು ಹಂಚಿಕೊಳ್ಳಲು ಸಿದ್ಧರಾಗಿರುತ್ತಾರಂತೆ. ಲಿಂಕ್ಡ್‌ಇನ್ ನಡೆಸಿದ 'ವರ್ಕ್‌ಫೋರ್ಸ್ ಕಾನ್ಫಿಡೆನ್ಸ್ ಇಂಡೆಕ್ಸ್' ಇದಕ್ಕಾಗಿ ದೇಶದಲ್ಲಿ ಜೂನ್ 4 ರಿಂದ ಸೆಪ್ಟೆಂಬರ್ 9ರವರೆಗೆ 4,684 ಉದ್ಯೋಗಿಗಳ ಪ್ರತಿಕ್ರಿಯೆಗಳನ್ನು ಆಧರಿಸಿದೆ.
undefined
ಆರ್ಥಿಕ ಪುನಶ್ಚೇತನಕ್ಕಾಗಿ 4000 ಉದ್ಯೋಗಿಗಳಿಗೆ ಕೊಕ್ ನೀಡಿದ Philips
ಹಾಗೆಯೇ ಭಾರತದಲ್ಲಿ Gen Z ಕೆಟಗರಿಯಲ್ಲಿ ಇರುವ( Gen Z ಕೆಟಗರಿ ಎಂದರೆ 1990 ಹಾಗೂ 2010ರ ನಡುವೆ ಜನಿಸಿದವರು) ಸುಮಾರು 72% ಜನ ಹಾಗೂ ಮಿಲೇನಿಯಲ್ ಕೆಟಗರಿಯಲ್ಲಿ ಇರುವ (ಮಿಲೇನಿಯನ್ 1981 ರಿಂದ 1996ರ ನಡುವೆ ಜನಿಸಿದವರು) 64% ಜನ ತಮ್ಮ ವೇತನದ ಮಾಹಿತಿಯನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಹಾಗೂ ಹಾಗೆಯೇ 43% Gen Z ಕೆಟಗರಿಯ ಜನ ಮತ್ತು ಹಾಗೂ 30% ಮಿಲೇನಿಯಲ್‌ಗಳು ತಮ್ಮ ಆಪ್ತ ಸ್ನೇಹಿತರಲ್ಲಿ ಈ ವಿಚಾರ ಹಂಚಿಕೊಳ್ಳಲು ಇಷ್ಟಪಡುತ್ತಾರೆ.
ಹಾಗೆಯೇ Gen Z ಕೆಟಗರಿಯ ಕೇವಲ 23% ರಷ್ಟು ಜನ ತಮ್ಮ ಸಹೋದ್ಯೋಗಿಗಳ (colleagues) ಜೊತೆ ಈ ಬಗ್ಗೆ ಹೇಳಿಕೊಳ್ಳುತ್ತಾರಂತೆ. ಹಾಗೆಯೇ ಮಿಲೇನಿಯಲ್‌ಗಳು ಶೇಕಡಾ 16 ರಷ್ಟು ಮಂದಿ ಸಹೋದ್ಯೋಗಿಗಳ ಜೊತೆ ಈ ವಿಚಾರವನ್ನು ಹಂಚಿಕೊಳ್ಳುತ್ತಾರಂತೆ. ಹಾಗೆಯೇ Gen X( 1965 ರಿಂದ 1980ರ ನಡುವೆ ಜನಿಸಿದ ತಲೆಮಾರು) ಕೆಟಗರಿಯ ಶೇಕಡಾ 10 ರಷ್ಟು ಜನ ಸಹೋದ್ಯೋಗಿಗಳ ಜೊತೆ ಈ ವಿಚಾರವನ್ನು ಹಂಚಿಕೊಳ್ಳುತ್ತಾರಂತೆ.
ದೀಪಾವಳಿ ಬೋನಸ್ ಸಿಕ್ತಾ? ಆ ಹಣವನ್ನುಇಲ್ಲಿ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ!
ಹಾಗೆಯೇ ಬಹುತೇಕ ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ವೇತನದ (salary) ಕುರಿತು ಸಂಭಾಷಣೆ ನಡೆಸಲು ಇಷ್ಟಪಡುವುದಿಲ್ಲವಂತೆ. ಹಾಗೆಯೇ ತಲೆಮಾರುಗಳ ಬದಲಾವಣೆಯೂ ಇದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕುಟುಂಬ ಹಾಗೂ ಸ್ನೇಹಿತರಲ್ಲಿ ಮಾತ್ರ ಬಹುತೇಕರು ಸ್ಯಾಲರಿ ವಿಚಾರವನ್ನು ಹಂಚಿಕೊಳ್ಳುತ್ತಾರೆ. ಆದರೆ ಪ್ರಸ್ತುತ ತಲೆಮಾರುಗಳ ಜನ ಇತರ ಪೀಳಿಗೆಯ ಜನರಿಗೆ ಹೋಲಿಸಿದರೆ ಉದ್ಯಮ ಕ್ಷೇತ್ರದಲ್ಲಿರುವ ಗೆಳೆಯರ ಜೊತೆ ವೇತನದ ಮಾಹಿತಿ ಹಂಚಿಕೊಳ್ಳಲು ಇಷ್ಟಪಡುತ್ತಾರೆ ಎಂದು ಲಿಂಕ್ಡ್‌ಇನ್ ನ್ಯೂಸ್ ಇಂಡಿಯಾ ವ್ಯವಸ್ಥಾಪಕ ಸಂಪಾದಕ ನಿರಾಜಿತಾ ಬ್ಯಾನರ್ಜಿ (Nirajita Banerjee) ಹೇಳುತ್ತಾರೆ.