ಝೆನ್ ಕಥೆ ಹೇಳುವಂತೆ ಬದುಕಿನ ಅರ್ಥವೇನು?

By Suvarna Web DeskFirst Published Jan 15, 2018, 5:04 PM IST
Highlights

ಒಂದೂರಿನಲ್ಲಿ ಒಬ್ಬ ಒಬ್ಬ ತತ್ವಜ್ಞಾನಿ ಇದ್ದ. ಬಹಳಷ್ಟು ಪುಸ್ತಕಗಳನ್ನು ಶ್ರದ್ಧೆಯಿಂದ ಓದುತ್ತಿದ್ದ. ಅವನಿಗೆ ಬದುಕಿನ ನಿಜವಾದ ಅರ್ಥವೇನು ಎಂದು ತಿಳಿಯಬೇಕೆನಿಸಿತು. ಅದಕ್ಕಾಗಿ ಇನ್ನಷ್ಟು ಪುಸ್ತಕಗಳನ್ನು ತಂದು ಓದಿದ. ಆದರೆ ಅವನಿಗೆ ಸಮಾಧಾನ ತರುವ ಯಾವುದೇ ಉತ್ತರ ಸಿಗಲಿಲ್ಲ. 

ಒಮ್ಮೆ ಈ ತತ್ವಜ್ಞಾನಿ ಝೆನ್ ಗುರುಗಳನ್ನು ಭೇಟಿಮಾಡಿದ. ಅವರ ಬಳಿ ತನ್ನ ಮನದಿಂಗಿತ ಹೇಳಿಕೊಂಡು, ‘ನನಗೆ ಬದುಕಿನ ಅರ್ಥ ತಿಳಿಯಬೇಕು, ಜ್ಞಾನೋದಯ ಆಗಬೇಕು ಏನು ಮಾಡಲಿ?’ ಎಂದು ಕೇಳಿದ. ‘ಝೆನ್ ಬಗ್ಗೆ ತಿಳಿ, ಬದುಕಿನ ಅರ್ಥ ತಿಳಿಯುತ್ತದೆ’ ಎಂದರು ಆ ಜೆನ್ ಗುರುಗಳು. ಅದರಂತೆ ಅವನು ಅನೇಕ ಝೆನ್ ಪುಸ್ತಕಗಳನ್ನು ಓದಿದನು. ಝೆನ್ ಧರ್ಮದ ಅನುಯಾಯಿಯಾದ. ಹೀಗೆ ವರ್ಷಗಳು ಕಳೆಯಿತು. ಒಂದು ದಿನ ಅವನಿಗೆ ತಾನು ಹುಡುಕುತ್ತಿದ್ದ ಪ್ರಶ್ನೆಗೆ ಉತ್ತರ ದೊರೆಯಿತು. ಬದುಕಿನ ಬಗ್ಗೆ ಸ್ಪಷ್ಟ ತಿಳುವಳಿಕೆ ಬಂತು.

ಅವನು ಮನೆಗೆ ಹಿಂತಿರುಗಿ ಬಂದು ಮೊದಲು ಮಾಡಿದ ಕೆಲಸವೆಂದರೆ ತಾನು ಈವರೆಗೆ ಓದಿದ ಎಲ್ಲಾ ಪುಸ್ತಕಗಳನ್ನು ತಂದು ಅಂಗಳದಲ್ಲಿ ಗುಡ್ಡೆ ಹಾಕಿ, ಆ ಪುಸ್ತಕಗಳಿಗೆ ಬೆಂಕಿ ಕೊಟ್ಟಿದ್ದು!

click me!