ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುವ ಕೆಲ ವಿಡಿಯೋಗಳು ಹೊಟ್ಟೆ ಹುಣ್ಣಾಗಿಸುವಂತೆ ನಗು ತರಿಸುತ್ತವೆ. ದಿನಕ್ಕೆ ನೂರಾರು ಇಂಥ ವಿಡಿಯೋ ವೈರಲ್ ಆಗ್ತಿರುತ್ತದೆ. ಈಗ ಮತ್ತೊಂದು ಇಂಥ ವಿಡಿಯೋ ವೈರಲ್ ಆಗಿದೆ. ಆ ವ್ಯಕ್ತಿಯ ತಮಾಷೆ ಮಾತಿಗೆ ನೆಟ್ಟಿಗರು ಸುಸ್ತಾಗಿದ್ದಾರೆ.
ಪರಿಪೂರ್ಣ ಸಂಬಂಧವನ್ನು ಹೊಂದಲು ಯಾರಿಂದಲೂ ಸಾಧ್ಯವಿಲ್ಲ. ಸ್ನೇಹಿತರು, ಸಂಬಂಧಿಕರ ವಿಷ್ಯದಲ್ಲಾದ್ರೆ ಇದು ದೊಡ್ಡ ಸಮಸ್ಯೆಯಾಗೋದಿಲ್ಲ. ಯಾಕೆಂದ್ರೆ ಅವರು ನಮ್ಮ ಜೊತೆ ಜೀವನ ಪರ್ಯಂತ ಒಟ್ಟಿಗೆ ಬಾಳೋದಿಲ್ಲ. ಆದ್ರೆ ದಾಂಪತ್ಯದಲ್ಲಿ ಹಾಗಲ್ಲ. ಪತಿ – ಪತ್ನಿ ನಡುವಿನ ಸಂಬಂಧದಲ್ಲಿ ಹೊಂದಾಣಿಕೆ ಕಷ್ಟವಾದಾಗ ಸಮಸ್ಯೆ ಶುರುವಾಗುತ್ತದೆ. ಎತ್ತು ಏರಿಗೆಳೆದ್ರೆ ಕೋಣ ನೀರಿಗೆ ಎಳೀತು ಎನ್ನುವ ಮಾತನ್ನು ನೀವು ಕೇಳಿರಬಹುದು. ದಾಂಪತ್ಯದಲ್ಲೂ ಇದು ನಡೆಯುತ್ತಿರುತ್ತದೆ.
ಪತಿ (Husband) – ಪತ್ನಿ ಸಂಬಂಧದಲ್ಲಿ ಏರಿಳಿತಗಳು ಸಾಮಾನ್ಯ. ಸಣ್ಣಪುಟ್ಟ ವಿಷ್ಯಕ್ಕೆ ಇಲ್ಲವೆ ದೊಡ್ಡ ವಿಷ್ಯಕ್ಕೆ ಗಲಾಟೆಗಳಾಗ್ತಿರುತ್ತವೆ. ಇದೇ ಕಾರಣಕ್ಕೆ ಪುರುಷ (Male) ರು ಮಂಗಳ ಗ್ರಹದಿಂದ ಬಂದ್ರೆ ಮಹಿಳೆಯರು ಶುಕ್ರ ಗ್ರಹದಿಂದ ಬಂದವರು ಎನ್ನಲಾಗುತ್ತದೆ. ಹುಡುಗ ಪರಿಪೂರ್ಣನಾಗಿದ್ರೆ ಹುಡುಗಿ ಕಿರಿಕಿರಿ ಮಾಡ್ತಾಳೆ ಇಲ್ಲ ಹುಡುಗಿ ಹೊಂದಾಣಿಗೆ ಸ್ವಭಾವದವಳಾಗಿದ್ದರೆ ಹುಡುಗ ಸಂಬಂಧ ಹಾಳು ಮಾಡ್ತಾನೆ. ಇದೇ ಕಾರಣಕ್ಕೆ ಪತಿ – ಪತ್ನಿ ಸಂಬಂಧವನ್ನು ಜೋಕ್ (Joke) ರೀತಿ ನೋಡಲಾಗುತ್ತದೆ. ಅನೇಕ ಜೋಕ್ ಗಳ ಹಿಂದಿನ ಕಾಲದಿಂದಲೂ ನಾವು ಕೇಳ್ತಾ ಬಂದಿದ್ದೇವೆ. ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ವೈಲ್ ಆಗಿದೆ.
undefined
ನಮ್ ಹುಡ್ಗೀನಾ ಬಿಡ್ತೀವಾ..ಮನೆಗೆ ನುಗ್ಗಿ ತಾಯಿ ಎದುರೇ ಗರ್ಲ್ಫ್ರೆಂಡ್ನ್ನು ಕರ್ಕೊಂಡು ಹೋದ ಹುಡ್ಗ!
ಮಹಿಳೆಯರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮಹಿಳೆ ಮನಸ್ಸು ಅರಿಯಲು ಜನ್ಮ ಜನ್ಮಕ್ಕೂ ಅಸಾಧ್ಯ,ಮನೆಯ ಸಂತೋಷ ಹಾಳಾಗೋದು ಆಕೆಯಿಂದಲೇ ಹೀಗೆ ನಾನಾ ತಮಾಷೆ ವಿಷ್ಯಗಳನ್ನು ಪತ್ನಿ ಮೇಲೆ ಮಾಡಲಾಗ್ತಿರುತ್ತದೆ. ಮದುವೆಯಾದವನಿಗೆ ಮಾತ್ರ ಪತ್ನಿ ಕಾಟ ಗೊತ್ತು ಎನ್ನುವಂತ ಜೋಕ್ ಗಳು ಸಾಕಷ್ಟಿವೆ. ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಪತ್ನಿ ಬಗ್ಗೆ ಹೇಳಿದ ವಿಡಿಯೋ ವೈರಲ್ ಆಗಿದೆ. ಪತ್ನಿಯಾದವಳು ಯಾವುದನ್ನು ಪತಿಗೆ ನೀಡುವುದಿಲ್ಲ ಎಂದು ಕೇಳಲಾಗಿದೆ. ಇದಲ್ಲೆ ವರದಿಗಾರ್ತಿ ಪುರುಷರಿಂದ ಅನೇಕ ರೀತಿಯ ಉತ್ತರವನ್ನು ಪಡೆಯುತ್ತಾಳೆ. ಅದ್ರಲ್ಲಿ ಈ ವ್ಯಕ್ತಿ ನೀಡಿದ ಉತ್ತರ ಇಂಟರೆಸ್ಟಿಂಗ್ ಆಗಿದೆ.
ಪಾಕಿಸ್ತಾನಿ ವರದಿಗಾರ್ತಿ ಪ್ರಶ್ನೆಗೆ ವ್ಯಕ್ತಿ ಹೇಳಿದ್ದೇನು? : ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. funny__baba__100k ಹೆಸರಿನ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ಪಾಕಿಸ್ತಾನಿ ವರದಿಗಾರ್ತಿಯೊಬ್ಬಳು ವ್ಯಕ್ತಿಗೆ ಪ್ರಶ್ನೆ ಕೇಳ್ತಾಳೆ. ಅದಕ್ಕೆ ಆತ ನೀಡಿದ ಉತ್ತರ ಸಾಕಷ್ಟು ಸುದ್ದಿ ಮಾಡಿದೆ. ವಿಡಿಯೋ ಆರಂಭದಲ್ಲಿ ವರದಿಗಾರ್ತಿ ವ್ಯಕ್ತಿಗೆ ಪ್ರಶ್ನೆ ಕೇಳ್ತಾಳೆ. ಪ್ಲೀನ್ ನಾನು ಕೇಳುವ ಕಾಮನ್ಸೆನ್ಸ್ ಪ್ರಶ್ನೆಗೆ ಉತ್ತರ ನೀಡಿ ಎಂದು ಕೇಳುವ ಸಂದರ್ಶಕಿ, ಪತ್ನಿ ಎಂದಿಗೂ ಪತಿಗೆ ನೀಡದ ಆ ಒಂದು ವಿಷ್ಯ ಯಾವುದು ಎಂದು ಪ್ರಶ್ನೆ ಮಾಡ್ತಾಳೆ. ವ್ಯಕ್ತಿ ಕೆಲವು ಸೆಕೆಂಡ್ ಯೋಚನೆ ಮಾಡಿ, ತಮಾಷೆ ತಮಾಷೆಯಾಗಿಯೇ ಶಾಂತಿ ಎಂದು ಹೇಳ್ತಾನೆ. ಈತನ ಉತ್ತರ ಇಂಟರ್ನೆಟ್ ನಲ್ಲಿ ಸದ್ದು ಮಾಡಿದೆ. ಕಮೆಂಟ್ ಬಾಕ್ಸ್ ನಲ್ಲಿ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
ಬಳಕೆದಾರರು ಹೇಳಿದ್ದೇನು? : ವ್ಯಕ್ತಿಯ ಈ ಮೋಜಿನ ಉತ್ತರವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಇಷ್ಟಪಟ್ಟಿದ್ದಾರೆ. ಮೊದಲ ಬಾರಿ ಸತ್ಯ ಹೇಳಿದ್ದಕ್ಕೆ ನೀವು ಖುಷಿಯಾಗಿದ್ದೀಯಾ ಎಂದು ಬಳಕೆದಾರನೊಬ್ಬ ಕಮೆಂಟ್ ಮಾಡಿದ್ದಾನೆ. ಈತನ ಶಬ್ಧದಲ್ಲಿ ಎಷ್ಟು ನೆಮ್ಮದಿ ಇದೆ. ಆದ್ರೆ ನೀನು ಮನೆಗೆ ಹೋಗು, ಶಾಂತಿ ಅಂದ್ರೇನು ಅಂತಾ ತಿಳಿಯುತ್ತೆ ಎಂದು ಎಮೋಜಿ ಜೊತೆ ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ. ಹೀಗೆ ಅನೇಕ ತಮಾಷೆ ಕಮೆಂಟ್ ಗಳನ್ನು ನಾವಿಲ್ಲಿ ನೋಡ್ಬಹುದು. ಇಷ್ಟಾಗಿಯೂ ಈ ಪ್ರಶ್ನೆಗೆ ಉತ್ತರವೇನು ಅಂತಾ ನೀವು ಆಲೋಚನೆ ಮಾಡ್ತಿರಬಹುದು.
ಸೆಕ್ಸ್ ಲೈಫ್ ಸೂಪರ್ ಆಗಿರ್ಬೇಕು ಅಂದ್ರೆ ಈ ಎಕ್ಸರ್ಸೈಸ್ ಬಗ್ಗೆ ಗೊತ್ತಿರ್ಲಿ
ಪತ್ನಿ ಯಾವುದನ್ನು ಗಂಡನಿಗೆ ಎಂದೂ ನೀಡಲು ಸಾಧ್ಯವಿಲ್ಲ ಎನ್ನುವ ಸಾಮಾನ್ಯ ಜ್ಞಾನ ಪ್ರಶ್ನೆಗೆ ಉತ್ತರ, ಪತ್ನಿ ಗಂಡನ ಶವಕ್ಕೆ ಹೆಗಲು ಕೊಡಲು ಸಾಧ್ಯವಿಲ್ಲ ಎನ್ನುವುದಾಗಿದೆ.