ಮದುವೆಯಾಗುವಾಗ ಕುಲ, ಗೋತ್ರ, ಕುಟುಂಬ ನೋಡಿ ಸಂಬಂಧ ಕುದುರಿಸುವುದು ಮುಂಚಿನಿಂದಲೂ ಭಾರತದಲ್ಲಿ ಇರೋ ವಾಡಿಕೆ. ಹುಡುಗ-ಹುಡುಗಿಯನ್ನು ನೋಡೋ ಮುನ್ನ ಈ ಎಲ್ಲ ಪ್ರಕ್ರಿಯೆಗಳು ಮುಗಿದಿರುತ್ತದೆ. ಆಗಲೇ ಈ ಸಂಬಂಧ ಹೆಚ್ಚು ಕಾಲ ಬಾಳಬಹುದೆಂಬುದನ್ನು ಹಿರಿಯರು ನಿರ್ಧರಿಸುತ್ತಾರೆ. ಆದರೆ...
ಒಂದು ಹುಡುಗ-ಹುಡುಗಿ ಮದುವೆಯಾಗುತ್ತಿದ್ದಾರೆಂದರೆ ಅಲ್ಲಿ ಎರಡು ಕುಟುಂಬಗಳ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಮೌಲ್ಯಗಳು, ಸಂಸ್ಕೃತಿ ಎಲ್ಲವೂ ಮೇಳೈಸುತ್ತವೆ. ಅವೆಲ್ಲವನ್ನೂ ನೋಡಿಯೋ ದೊಡ್ಡವರು ಇಬ್ಬರಿಗೆ ಗಂಟು ಹಾಕುವುದು. ಉಳಿದವೆಲ್ಲವೂ ಮ್ಯಾಚ್ ಆಗುತ್ತದೆ ಎಂದರೆ ಆ ಇಬ್ಬರ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ ಎಂದೇ ಅರ್ಥ.
'ಋಣಾನುಬಂಧ ರೂಪೇನ ಪಶು, ಪತ್ನಿ ಸುತಾಲಯ...' ಎನ್ನುವ ಮಾತಿದೆ. ಎಲ್ಲಿಯೋ ಹುಟ್ಟಿ, ಇನ್ನೆಲ್ಲೋ ಬೆಳೆದು ದಾಂಪತ್ಯ ಜೀವನಕ್ಕೆ ಕಾಲಿಡುವ ಹೆಣ್ಣು ಗಂಡು ಯಾವುದೋ ಜನ್ಮದ ಋಣ ಇಟ್ಟುಕೊಂಡಿರುತ್ತಾರೆ ಎಂಬುವುದು ಭಾರತೀಯರ ನಂಬಿಕೆ. ಹಲವು ರೀತಿಯಲ್ಲಿ ವಿಶ್ಲೇಷಿಸಿದರೂ ಏನೂ ಅರ್ಥವಾಗದ ಇಂಥ ಬಾಂಧವ್ಯಕ್ಕೆ ಇನ್ಯಾವುದೋ ಜನ್ಮದ ಋಣವೂ ಇರಬಹುದು.
ಹಾಗೆ ಇತ್ತೀಚೆಗೆ ಯುವಕರು ತುಸು ಆಧುನಿಕ ಮನಃಸ್ಥಿತಿ ಹೊಂದುತ್ತಿದ್ದು, ಸೆಕ್ಷುಯಲ್ ಡೆಸ್ಟಿನಿ ಬಗ್ಗೆ ಮಾತನಾಡುತ್ತಿದ್ದಾರೆ. ಅಂದರೆ ಒಂದು ಹೆಣ್ಣಿಗೆ ಗಂಡೆಂದು ಹಣೆಯಲ್ಲಿ ಬರೆದಾಗಿರುತ್ತದೆ ಎನ್ನುವುದನ್ನೇ, ಒಂದು ಗಂಡಿಗೆ ಮತ್ತೊಂದು ಹೆಣ್ಣು ಲೈಂಗಿಕವಾಗಿ ಆಕರ್ಷಿತವಾಗುವುದನ್ನು ಸೆಕ್ಷುಯಲ್ ಡೆಸ್ಟಿನಿ ಎಂದು ಹೇಳುತ್ತಿದ್ದಾರೆ. ನಾವು ಆರಿಸಿಕೊಳ್ಳುವವರು ನಮ್ಮ ಆತ್ಮ ಸಂಗಾತಿಯಾದರೆ ಮಾತ್ರ ಲೈಂಗಿಕತೆ ಪರ್ಫೆಕ್ಟ್ ಆಗಿರುತ್ತದೆ. ಲೈಂಗಿಕ ಜೀವನ ಸುಖಮಯವಾಗಿದ್ದರೆ ಜೋಡಿಯದ್ದು ಸುಖ ದಾಂಪತ್ಯವಾಗಿರುತ್ತದೆ.
'ಡೆಸ್ಟಿನಿ ಬಿಲೀಫ್' ಎಂದರೇನು?
ಯಾರೋ ಅಪರಿಚತರನ್ನೂ ನೋಡಿದಾಗಲೂ 'ಇವರು ನಮ್ಮವರು' ಎನಿಸಿಬಿಡುತ್ತಾರೆ ಕೆಲವರಿಗೆ. ಅವರೊಂದಿಗೆ ಮಾನಸಿಕವಾಗಿ, ದೈಹಿಕವಾಗಿ ಹಾಗೂ ಭಾವನಾತ್ಮಕವಾಗಿ ಒಂದಾಗಬಹುದು ಎಂದೆನಿಸುತ್ತದೆ. ಇದಕ್ಕೇ ಹಿಂದಿನವರು ಋಣವೆಂದರೆ, ಈಗಿನವರು ಡೆಸ್ಟಿನಿ ಎನ್ನುತ್ತಾರೆ. ಹೀಗಿದ್ದಾಗಿಯೂ ಕೆಲವೊಮ್ಮೆ ಕೆಲವು ವಿಚಾರಗಳಿಗೆ ಜೋಡಿ ನಡುವೆ ವೈಮನಸ್ಸು ಹುಟ್ಟಿ ಕೊಳ್ಳುತ್ತೆ ಎನ್ನುವುದೂ ಸತ್ಯ.
ಸೆಕ್ಷುಯಲ್ ಡೆಸ್ಟಿನಿ ಹೇಗೆ ಕೆಲಸ ಮಾಡುತ್ತದೆ?
ಲೈಂಗಿಕ ಜೀವನ ಹಾಗೂ ತೃಪ್ತಿ ಎನ್ನುವುದು ಸೆಕ್ಷುಯಲ್ ಡೆಸ್ಟಿನಿ ಮೇಲೆಯೇ ಡಿಪೆಂಡ್ ಆಗಿರುತ್ತದೆ. ಆದರೆ, ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದಕ್ಕೂ ಮುನ್ನ ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂದಾದರೆ ಮಾತ್ರ ಜೀವನಕ್ಕೆ ಅರ್ಥ. ಈ ಸಂಬಧ ಸುದೀರ್ಘ ಕಾಲ ಉಳಿದು ಕೊಳ್ಳುತ್ತದೆ. ಲೈಂಗಿಕ ಸಂಬಂಧದಿಂದಲೇ ಬಂಧವೇರ್ಪಟ್ಟರೆ ಅದು ಮಾನಸಿಕವಾಗಿ ಒಂದಾದ ಸಂಬಂಧ ಎನಿಸಿಕೊಳ್ಳುವುದಿಲ್ಲ. ಇಂಥ ಸಂಬಂಧವನ್ನು ದೂರ ಮಾಡಿಕೊಳ್ಳುವುದು ಒಳಿತು. ಅಕಸ್ಮಾತ್ ಮುಂದುವರಿಸಿದಲ್ಲಿ ನಿರಾಶೆ ಕಟ್ಟಿಟ್ಟ ಬುತ್ತಿ.
ಮೊದಲ ನೋಟದ ಪ್ರೀತಿ ಮತ್ತದರ ಪರಿ...
ಸೆಕ್ಷುಯಲ್ ಗ್ರೌತ್ ಎಂದರೇನು?
ಸೆಕ್ಷುಯಲ್ ಡೆಸ್ಟಿನಿಯಿಂದ ಹುಟ್ಟಿಕೊಳ್ಳುವ ಸಂಬಂಧ ದಾಂಪತ್ಯದಲ್ಲಿ ಆರಂಭವಾಗುತ್ತದೆ. ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಸಹಕರಿಸುತ್ತದೆ. ಅದು ಎರಡು ದೇಹದೊಂದಿಗೆ ಮನಸನ್ನೂ ಬೆಸೆಯುವ ಕ್ರಿಯೆ ಆಗಬೇಕೇ ಹೊರತು, ಒಬ್ಬರನ್ನೊಬ್ಬರು ಯಾವುದೇ ಕಾರಣಕ್ಕೂ ದೂರ ಮಾಡಬಾರದು. ಗಂಡು-ಹೆಣ್ಣನ್ನು ಒಂದುಗೂಡಿಸಿ, ಕಡೇವರೆಗೂ ಗಟ್ಟಿ ಬಂಧದೊಂದಿಗೆ ಮುಂದುವರಿಸುವ ಬಂಧವನ್ನು ಸೆಕ್ಷುಯಲ್ ಗ್ರೌತ್ ಎನ್ನುತ್ತಾರೆ.
ಯಾರು ಜೀವನದಲ್ಲಿ ಲೈಂಗಿಕವಾಗಿ ತೃಪ್ತರೋ, ಅವರ ನಡುವ ಭಿನ್ನಾಭಿಪ್ರಾಯಕ್ಕೆ ಅವಕಾಶವೇ ಇರುವುದಿಲ್ಲ.