ಓದು, ಕೆಲಸ...ನಂತರ ಮದುವೆ. ಜೀವನದ ಅತ್ಯಂತ ಪ್ರಮುಖ ಘಟ್ಟವಾದ ಈ ಘಟಕ್ಕೆ ತಲುಪುವುದೇ ಎಲ್ಲಿಲ್ಲದ ಸಂಭ್ರಮ. ಮನೆಯಲ್ಲಿ ಮಗಳಾದರೆ ವರನ ಹುಡುಗಾಟ, ಮಗನಾದರೆ ಹುಡುಗಿಯ ಹುಡುಗಾಟ ಆರಂಭವಾಗಿರುತ್ತೆ. ಓ ಅಲ್ಲೊಬ್ಬ ಇದ್ದಾನೆಂದು, ಇಲ್ಲೊಬ್ಬಳು ಇದ್ದಾಳೆ. ಜಾತಕ ತಲುಪಿಸಿಯಾಗಿರುತ್ತೆ.
undefined
ಆ ಹಂತವೂ ಮುಗಿದು ಹುಡುಗ-ಹುಡಿಗಿ ಒಪ್ಪಿ, ಮನೆಯಲ್ಲಿ ಮಾತಕತೆಯೂ ಮುಗಿದಿರುತ್ತೆ. ಮದುವೆ ಫಿಕ್ಸ್ ಎಂದ ಮೇಲೆ ಭಾವೀ ದಂಪತಿಗಳು ಹಲವು ಸಲ ಫೋನಿನಲ್ಲಿಯೂ ಮಾತನಾಡುತ್ತಿರುತ್ತಾರೆ. ಭೇಟಿಯಾಗುವುದು ಕೆಲವರು ಕಡಿಮೆಯೇ. ಇಬ್ಬರೂ ಡಿಸೈಡ್ ಮಾಡಿ ಭೇಟಿ ಮಾಡಲು ಡೇಟ್ ಫಿಕ್ಸ್ ಮಾಡುತ್ತೀರಿ. ನಂತರ ಮೀಟಿಂಗೂ ಆಗಿರುತ್ತೆ.
ಇವಾಗ ಹುಡುಗನ ಮನದಲ್ಲಿ ಆಕೆ ಮೊದಲ ಭೇಟಿಯಲ್ಲಿ ನನ್ನ ಬಗ್ಗೆ ಏನು ಅಂದುಕೊಂಡಿರಬಹುದು?
- ಆಕೆಗೆ ಮೊದಲಿಗೆ ಅನಿಸೋದು ನಾನು ಅವನ ಜೊತೆ ಸರಿಯಾಗಿ ಮಾತನಾಡಿದನೇ? ಅಥವಾ ನನ್ನ ಬಿಹೇವಿಯರ್ ಸರಿಯಾಗಿತ್ತೇ ಎಂದು.
- ಛೇ ಇಷ್ಟು ಬೇಗ ಯಾಕೆ ಇನ್ನು ಸ್ವಲ್ಪ ಹೊತ್ತು ಅವರ ಜೊತೆ ಇದ್ದು ಮಾತನಾಡಬಹುದಿತ್ತು. ಇಷ್ಟು ಬೇಗ ಬಂದು ತಪ್ಪು ಮಾಡಿದೆ ಎಂದು ಅನಿಸದೇ ಇರಲಾರದು.
- ಹುಡುಗಿಯರು ಮಾಡುವ ಇನ್ನೊಂದು ಕೆಲಸ ಎಂದರೆ ತಮ್ಮ ಬೆಸ್ಟ್ ಫ್ರೆಂಡ್‌ಗೆ ಈ ಬಗ್ಗೆ ಮಾಹಿತಿ ನೀಡೋದು. ಯಾಕಂದ್ರೆ ಹುಡುಗೀರ ಹೊಟ್ಟೇಲಿ ಯಾವುದೇ ಗುಟ್ಟು ನಿಲ್ಲೋದಿಲ್ಲ.
- ಕಿಸ್ಸೊಂದು ಕೊಟ್ಟಿದ್ದರೆ....? ಮಿಸ್ ಆದ ಬಗ್ಗೆ ಚಿಂತೆ ಇರುತ್ತದೆ.
- ತನ್ನ ಜೀವನ ಸಂಗಾತಿಯಾಗುವವನು ಹೇಳಿದ ಪ್ರತಿಯೊಂದೂ ಮಾತನ್ನೂ ನೆನಪಿಸಿಕೊಳ್ಳುತ್ತಾರೆ ಹಾಗೂ ಅವರ ಫೀಲಿಂಗ್ ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಾರೆ.
- ಪದೆ ಪದೇ ಡೇಟಿಂಗ್ ನೆನೆಸಿಕೊಂಡು ಖುಷಿ ಪಡುತ್ತಾರೆ. ಮುಖದಲ್ಲಿ ಪೂರ್ತಿ ನಗು. ಆ ತುಂಟ ಕಿರುನಗು ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
- ಹುಡುಗನಿಗೆ ಮೆಸೇಜ್ ಮಾಡಿ ಅಥವಾ ಸುಮ್ಮ ಸುಮ್ಮನೆ ಮಾತನಾಡೋಣ ಎಂದೆನಿಸುತ್ತದೆ. ಆದರೆ ಬೇಡ ಅವನೇ ಮಾಡಲಿ ಎಂದು ಸುಮ್ಮನಾಗುವುದೂ ಇದೆ.
- ಫೋನ್ ತೆಗೆದುಕೊಂಡು ಮೆಸೇಜ್ ಟೈಪ್ ಮಾಡುತ್ತಾರೆ. ನಂತರ ಅವರಿಗೆ ಸೆಂಡ್ ಮಾಡುವ ಮುನ್ನ ಮತ್ತೆ ಡಿಲಿಟ್ ಮಾಡುತ್ತಾರೆ.
- ಅವನ ಮೆಸೇಜ್ ಬರಬಹುದೇ ಎಂದು ಪದೇ ಪದೇ ಫೋನ್ ಚೆಕ್ ಮಾಡುತ್ತಾರೆ. ಹುಸಿ ಮುನಿಸು ಕಾಡುತ್ತದೆ. ನಂತರ ಆತನ ಮೆಸೇಜ್ ಬಂದಾಗ ಖುಷಿಯಿಂದ ಉಬ್ಬಿ ಹೋಗುತ್ತಾರೆ.
- ರಾತ್ರಿ ಪೂರ್ತಿ ಅವನ ಜೊತೆ ಹರಟುತ್ತಾ, ರೋಮ್ಯಾಂಟಿಕ್ ಚಾಟ್ ಮಾಡುತ್ತಾ ಹಾಗೆ ನಿದ್ದೆ ಹೋಗುತ್ತಾರೆ.
- ಬೆಳಗ್ಗೆ ಸೂರ್ಯನ ಬಿಸಿಲು ಮುಖದ ಮೇಲೆ ಬಿದ್ದಾಗಲೇ, ಅಯ್ಯೋ ನಾನು ಯಾವಾಗ ಮಲಗಿದೆ, ಅವನಿಗೆ ಗುಡ್ ನೈಟ್ ಹೇಳಿಲ್ಲವೇ ಎಂದು ಯೋಚಿಸಿ, ಮೊಬೈಲ್ ತೆಗೆದರೆ ಅವನ ಗುಡ್ ಮಾರ್ನಿಂಗ್ ಟೆಕ್ಸ್ಟ್ ಸ್ವಾಗತಿಸುತ್ತದೆ.