'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಜಯಂತ್ ಪಾತ್ರ ಸಾಕಷ್ಟು ಜನರಿಗೆ ಭಯ ಹುಟ್ಟಿಸಿದೆ. ಜಯಂತ್ ಪಾತ್ರದಲ್ಲಿನ ಈ ಗುಣದ ಬಗ್ಗೆ ನೀವು ಏನು ಹೇಳ್ತೀರಾ?
ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಜಯಂತ್ ಪಾತ್ರ ನೋಡಿದೋರು ಇಂಥ ಗಂಡ ಮಾತ್ರ ಸಿಗದೆ ಇರಲಿ ಅಂತ ಬಯಸುತ್ತಿದ್ದಾರೆ. ಜಯಂತ್ ಬಳಿ ಒಳ್ಳೆಯ ಗುಣ ಇದೆ, ಶಿಕ್ಷಣ, ಆಸ್ತಿ ಅಂತಸ್ತು, ರೂಪ ಎಲ್ಲವೂ ಇದೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಉಸಿರುಗಟ್ಟಿಸುವಷ್ಟು ಪ್ರೀತಿಯೂ ಇದೆ. ಹೌದು, ಎಷ್ಟೋ ಹೆಣ್ಣು ಮಕ್ಕಳು, ಗಂಡು ಕೂಡ ಈ ಪೊಸೆಸ್ಸಿವ್‌ನೆಸ್ ಎಂಬ ಭೂತದಿಂದ ಜೈಲಿನಲ್ಲಿ ವಾಸ ಮಾಡುವಂತಾಗಿದೆ.
ನಮ್ಮವರನ್ನು ಕಳೆದುಕೊಳ್ತೀವಿ ಎನ್ನುವ ಭಯಕ್ಕೆ ತಾವು ಪ್ರೀತಿಸುವವರನ್ನು ಹದ್ದುಬಸ್ತಿನಲ್ಲಿಡೋದು, ಕಟ್ಟಿ ಹಾಕೋದು ಈ ಪೊಸೆಸ್ಸಿವ್‌ನೆಸ್‌ನ ಬೇಸಿಕ್ ಎನ್ನಬಹುದು.
ಈ ಧಾರಾವಾಹಿಯಲ್ಲಿ ಜಯಂತ್‌ಗೆ ಜಾನು ತನ್ನನ್ನು ಮಾತ್ರ ಪ್ರೀತಿಸಬೇಕು, ನನಗೆ ಮಾತ್ರ ಗಮನ ಕೊಡಬೇಕು, ನನ್ನ ಬಗ್ಗೆ ಮಾತ್ರ ಯೋಚಿಸಬೇಕು ಎಂಬುದಿದೆ. ಜಾನು ಬೇರೆ ಹುಡುಗನ ಜೊತೆ ಮಾತಾಡೋದಿರಲಿ, ತಂದೆ-ತಾಯಿ ಜೊತೆ ಮಾತಾಡಿದ್ರೂ ಜಯಂತ್‌ಗೆ ಇಷ್ಟ ಆಗೋದಿಲ್ಲ. ಜಿರಳೆ ನನ್ನ ಚಿನ್ನುಮರಿ ಮೈಮೇಲೆ ಹರಿದಾಡಿತು ಅಂತ ಹಾಲಿಗೆ ಹಾಕಿಕೊಂಡು ಅದನ್ನೇ ಗಟ ಗಟ ಅಂತ ಕುಡಿದೋನು ಈ ಜಯಂತ್. ಜಯಂತ್ ಪೊಸೆಸ್ಸಿವ್‌ನೆಸ್ ಹೇಗಿದೆ ಅಂತ ಜಾನುಗೆ ಅರ್ಥ ಆಗಿದೆ. ಇಡೀ ದಿನ ಜಾನುಳನ್ನು ಮನೆಯಲ್ಲಿ ಕೂಡಿ ಹಾಕಿ, ಎಲ್ಲ ಕಡೆ ಕ್ಯಾಮರಾ ಇಟ್ಟು ಅವಳ ನಡೆಯನ್ನು ಜಯಂತ್ ಫಾಲೋ ಮಾಡ್ತಿದ್ದ.
Kannada Tv Serial TRP: 'ಅಣ್ಣಯ್ಯ', 'ಲಕ್ಷ್ಮೀ ನಿವಾಸ' ಬದಿಗೊತ್ತಿ NO 1 ಸ್ಥಾನ ಪಡೆದ ಹೊಸ ಸೀರಿಯಲ್ ಯಾವುದು?
ಇಂದು ಹುಡುಗಿಯರು ಮದುವೆಯಾಗುವಾಗ ಆಸ್ತಿ ಇದೆಯಾ? ಜಮೀನು ಇದೆಯಾ? ಹುಡುಗ ನೋಡೋಕೆ ಚೆನ್ನಾಗಿದ್ದಾನಾ? ನಯ-ವಿನಯ ಇದೆಯಾ? ಚೆನ್ನಾಗಿ ಓದಿಕೊಂಡಿದ್ದಾನಾ? ಅಂತೆಲ್ಲ ವಿಚಾರಿಸಿಕೊಳ್ತಾರೆ. ಇವೆಲ್ಲವೂ ಸರಿ ಇದೆ ಅಂದ್ಮೇಲೆ ಹುಡುಗ ಓಕೆ ಅಂತ ಫಿಕ್ಸ್ ಆಗುತ್ತಾರೆ. ಆದರೆ ಈ ಪೊಸೆಸ್ಸಿವ್‌ನೆಸ್ ಎಷ್ಟರ ಮಟ್ಟಿಗೆ ಇರುತ್ತದೆ ಎನ್ನೋದರ ಅರಿವು ಆರಂಭ ಇರೋದಿಲ್ಲ. ಈ ಗುಣ ಕೇವಲ ಹುಡುಗರಲ್ಲಿ ಒಂದೇ ಅಲ್ಲ, ಹುಡುಗಿಯರಲ್ಲೂ ಇರುವುದು. ಪೊಸೆಸ್ಸಿವ್‌ನೆಸ್ ಇರಬೇಕು, ಆದರೆ ಮಿತಿಯಲ್ಲಿರಬೇಕು. ಈ ಪೊಸೆಸ್ಸಿವ್‌ನೆಸ್ ಅತಿಯಾದರೆ ಮಾತ್ರ ಎಂಥ ಅನಾಹುತಗಳು ಕೂಡ ಆಗಬಹುದು. ಇದು ಚಟಕ್ಕಿಂತ ಭಯಂಕರವಾದುದು ಎನ್ನಬಹುದು.
ಪೊಸೆಸ್ಸಿವ್‌ನೆಸ್ ಗುಣಗಳು ಏನು?
ಸಂಗಾತಿಯ ಅಷ್ಟು ಪ್ರೀತಿ, ಗಮನ ಬೇಕು ಎನ್ನುವುದು.
ಸಂಗಾತಿ ಬಿಟ್ಟು ಹೋಗ್ತಾನೆ ಅಂತ ಚಿಂತೆ ಮಾಡುವುದು
ಭಯ, ಆತಂಕ, ಬೇಸರದಲ್ಲಿ ಕಳೆಯುವುದು.
‘ಲಕ್ಷ್ಮೀ ನಿವಾಸ’ ನಟಿ ಶ್ವೇತಾ ದಾಂಪತ್ಯ ಜೀವನಕ್ಕೆ16 ವರ್ಷ... ಮದುವೆಯ ಅಪರೂಪದ ಫೋಟೊಗಳು ಇಲ್ಲಿವೆ
ಪೊಸೆಸ್ಸಿವ್‌ನೆಸ್ ಡೀಲ್ ಮಾಡೋದು ಹೇಗೆ?
ಸಂಗಾತಿಯ ಜೊತೆ ಮುಕ್ತವಾಗಿ ಮಾತನಾಡಿ.
ಆರೋಪ ಮಾಡದೆ, ದೂಷಿಸದೆ ನೀವು ಸಂಗಾತಿ ಜೊತೆಗೆ ಮುಕ್ತವಾಗಿ ಮಾತನಾಡಿ
ಪೊಸೆಸ್ಸಿವ್ ವರ್ತನೆ ಬಗ್ಗೆ ಒಟ್ಟಿಗೆ ಕೂತು ಮಾತನಾಡಿ
ಒಂದು ಚೌಕಟ್ಟು ಹಾಕಿ
ಉಳಿದವರ ಜೊತೆಯೂ ಒಳ್ಳೆಯ ಸಂಬಂಧವನ್ನು ನಿಭಾಯಿಸಿ
ತಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಿ
ಆರೋಗ್ಯಕರ ಸಂಬಂಧದ ಬಗ್ಗೆ ಸಲಹೆಗಳು
ಪರಸ್ಪರ ಗೌರವ, ಅರ್ಥಮಾಡಿಕೊಳ್ಳುವುದರ ಮೇಲೆ ಪೊಸೆಸ್ಸಿವ್‌ನೆಸ್ ಆಧಾರಿತವಾಗಿರಬೇಕು.
ಈ ಪೊಸೆಸ್ಸಿವ್‌ನೆಸ್ ಬಗ್ಗೆ ಇಬ್ಬರೂ ಕಂಫರ್ಟ್ ಫೀಲ್ ಮಾಡಬೇಕು
ಸಂಗಾತಿಯ ಖಾಸಗಿತನದ ಗೆರೆಯನ್ನು ದಾಟಬಾರದು, ಪ್ರತಿಯೊಬ್ಬರಿಗೂ ಅವರದ್ದೇ ಆದ ವೈಯಕ್ತಿಕ ಲೈಫ್ ಇದೆ.
ನಂಬಿಕೆ ಎನ್ನೋದು ಪ್ರತಿಯೊಂದು ಸಂಬಂಧದ ಬುನಾದಿ ಎನ್ನಬಹುದು.