ಪೊಲೀಸರ ಯುನಿಫಾರ್ಮ್‌ನಲ್ಲಿ ಈ ದಾರದ ಗುಟ್ಟೇನು? ವಿಶೇಷ ವಿನ್ಯಾಸ ಹಿಂದಿನ ಕಾರಣ ಏನು?

By Mahmad Rafik  |  First Published Oct 27, 2024, 10:21 AM IST

ಪೊಲೀಸರ ಸಮವಸ್ತ್ರದಲ್ಲಿರುವ ಸುರಳಿಯಾಕಾರದ ದಪ್ಪ ದಾರ ಕೇವಲ ವಿನ್ಯಾಸಕ್ಕಾಗಿ ಅಲ್ಲ. ಇದನ್ನು 'ಲ್ಯಾನ್‌ಯಾರ್ಡ್' ಎಂದು ಕರೆಯಲಾಗುತ್ತದೆ. ಈ ದಾರದ  ವಿಶೇಷತೆ ಏನು ಎಂಬುವುದು ಇಲ್ಲಿದೆ ನೋಡಿ


ಳ್ಳತನ, ದರೋಡೆ, ಕೊಲೆ ಅಂತಹ ಅಪರಾಧ ಪ್ರಕರಣಗಳು ಸಂಭವಿಸಿದ್ರೆ ಮೊದಲು ಪೊಲೀಸರಿಗೆ ಕರೆ ಮಾಡಲಾಗುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಆರಕ್ಷಕ ಸಿಬ್ಬಂದಿ ಮಾಡುತ್ತಾರೆ. ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಹ ಕಾರಣ ಪೊಲೀಸರು. ರಾತ್ರಿ ಗಸ್ತು ತಿರುಗುವ ಮೂಲಕ ಪೊಲೀಸರು ಅಪರಾಧ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುತ್ತಿರುತ್ತಾರೆ. ನೂರಾರು ಜನರ ಜನಸಂದಣಿಯಿದ್ದರೂ ಕೇವಲ ಓರ್ವ ಪೊಲೀಸ್ ಸಿಬ್ಬಂದಿ ಎಲ್ಲರನ್ನು ನಿಯಂತ್ರಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಇದಕ್ಕೆ ಕಾರಣ ಪೊಲೀಸರು ಧರಿಸಿರುವ ಸಮರ್ಥ. ಖಾಕಿ ಧರಿಸಿದ ಪೊಲೀಸ್ ಅಧಿಕಾರಿಯಲ್ಲಿ ಶಿಸ್ತು ಮತ್ತು ಒಂದು ರೀತಿಯ ಗತ್ತು ಕಾಣಬಹುದು. ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯದ ಪೊಲೀಸ್ ಸಿಬ್ಬಂದಿಯ ಸಮವಸ್ತ್ರದ ಬಣ್ಣ ಒಂದೇಯಾಗಿದ್ದು, ವಿನ್ಯಾಸದಲ್ಲಿ ಕೊಂಚ ವ್ಯತ್ಯಾಸಗಳು ಕಂಡು ಬರುತ್ತವೆ. 

ನೀವೂ ಸಹ ಪೊಲೀಸರು ಧರಿಸಿರುವ ಸಮವಸ್ತ್ರ ಗಮನಿಸಿರಬಹುದು. ಪೊಲೀಸರ ಯುನಿಫಾರ್ಮ್ ಹೇಗಿರಬೇಕು ಎಂಬುದರ ಬಗ್ಗೆ ಕೆಲವೊಂದು ನಿಯಮಗಳಿವೆ. ಈ ನಿಯಮಗಳ ಪ್ರಕಾರ ಸಿಬ್ಬಂದಿಯೂ ಯುನಿಫಾರ್ಮ್ ಹೊಲಿಸುತ್ತಾರೆ. ಪೊಲೀಸರ ಸಮವಸ್ತ್ರದ ಎಡಭಾಗದ ತೋಳಿನ ಭಾಗದಲ್ಲಿ ಸುರಳಿಯಾಕಾರದ ದಪ್ಪ ದಾರ ಇರುತ್ತದೆ. ಯಾಕೆ ಈ ರೀತಿ ದಪ್ಪ ದಾರ ಇರುತ್ತೆ ಎಂಬುದರ ಮಾಹಿತಿ ಇಲ್ಲಿದೆ. 

ಇದನ್ನೂ ಓದಿ: ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಿದರೆ ಕೇಸ್‌: ಸಿಎಂ ಸಿದ್ದರಾಮಯ್ಯ

Tap to resize

Latest Videos

ಪೊಲೀಸರ ಸಮವಸ್ತ್ರದಲ್ಲಿ ಸುರಳಿಯಾಕಾರದ ದಪ್ಪನೇ ದಾರ ಅಳವಡಿಸಲು ವಿಶೇಷ ಕಾರಣವಿದೆ. ಕೇವಲ ಚೆಂದಕ್ಕಾಗಿ ಇದನ್ನು ಹಾಕಿರುವುದಿಲ್ಲ. ಈ ದಾರದಿಂದ ವಿಶೇಷ ಕೆಲಸವಾಗುತ್ತದೆ. ಈ ದಾರವನ್ನು "ಲ್ಯಾನ್‌ಯಾರ್ಡ"  (Lanyard) ಎಂದು ಕರೆಯಲಾಗುತ್ತದೆ.  ಈ ದಾರವನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ಇದರ ಒಂದು ತುದಿ ಸಮವಸ್ತ್ರದ ಜೇಬಿಗೆ ಲಿಂಕ್ ಮಾಡಲಾಗಿರುತ್ತದೆ. ದಾರದ ತುದಿಗೆ ಸಿಟಿಯನ್ನು ಕಟ್ಟಲಾಗಿರುತ್ತದೆ. ಪೊಲೀಸರು ತಮ್ಮ ಬಳಿ ಯಾವಾಗಲೂ ಸಿಟಿ ಹೊಂದಿರುತ್ತಾರೆ. ಅದು ಕೈಗೆ ಬೇಗ ಸಿಗಲಿ ಎಂಬ ಉದ್ದೇಶದಿಂದ ಈ ದಾರದ ಕೊನೆಗೆ ಸಿಟಿ ಕಟ್ಟಿ ಜೇಬಿನಲ್ಲಿ ಇರಿಸಲಾಗಿರುತ್ತದೆ. 

ತುರ್ತು ಸಂದರ್ಭಗಳಲ್ಲಿ ಸಿಟಿಯನ್ನು ಪೊಲೀಸರು ಬಳಕೆ ಮಾಡುತ್ತಾರೆ. ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಸಿಟಿಯನ್ನು ಬಳಸೋದನ್ನು ಇಂದು ಕಾಣಬಹುದಾಗಿದೆ. ತುರ್ತಾಗಿ ವಾಹನಗಳನ್ನು ನಿಲ್ಲಿಸಬೇಕಾದ್ರೆ, ಸಹೋದ್ಯೋಗಿಗೆ ಸಂದೇಶವನ್ನು ಕಳುಹಿಸಲು ಸಿಟಿ ಬಳಕೆ ಮಾಡಲಾಗುತ್ತದೆ. 

ಇದನ್ನೂ ಓದಿ: ಸಂಚಲನ ಸೃಷ್ಟಿಸುತ್ತಿದೆ ಡಿಜಿಟಲ್ ಕಾಂಡೋಮ್; ಇದು ಹೇಗೆ ಕೆಲಸ ಮಾಡುತ್ತೆ? ಬಳಸೋದೇಗೆ?

click me!