
ಬ್ಯಾಂಕಾಕ್‌ನ MGI ಹಾಲ್‌ನಲ್ಲಿ ನಡೆದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಪ್ರಶಸ್ತಿಯನ್ನು ಪಂಜಾಬ್‌ನ ಜಲಂಧರ್‌ನ ರಾಚೆಲ್ ಗುಪ್ತಾ ಅವರು ಪಡೆದುಕೊಂಡಿದ್ದು, ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಈ ಪ್ರಶಸ್ತಿ ಪಡೆದ ಮೊದಲ ಭಾರತೀಯಳು ಎಂಬ ಹೆಗ್ಗಳಿಕೆಯನ್ನು ಇವರು ಪಡೆದುಕೊಂಡಿದ್ದಾರೆ. ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ರಲ್ಲಿ ಭಾಗವಹಿಸಿದ 69 ಸ್ಪರ್ಧಿಗಳಲ್ಲಿ ರಾಚೆಲ್ ಗುಪ್ತಾ ಒಬ್ಬರು. ರಾಚೆಲ್ ಗ್ರ್ಯಾಂಡ್ ಫಿನಾಲೆಯಲ್ಲಿ ಫಿಲಿಪ್ಪೀನ್ಸ್‌ನ ನೆಚ್ಚಿನ ಸಿಜೆ ಒಪಿಯಾಜಾ ಅವರನ್ನು ಸೋಲಿಸಿ ಕಿರೀಟವನ್ನು ಗೆದ್ದರು. ಕಳೆದ ವರ್ಷದ ವಿಜೇತ ಪೆರುವಿನ ಲೂಸಿಯಾನಾ ಫಸ್ಟರ್ ಅವರು ರಾಚೆಲ್ ಗುಪ್ತಾ ಅವರನ್ನು ಸೋಲಿಸಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ 2024 ವಿಜೇತ ಕಿರೀಟವನ್ನು ಪಡೆದರು.
ರಾಚೆಲ್ ಅವರು ಮಾಡೆಲ್, ನಟಿ ಮತ್ತು ಉದ್ಯಮಿ. ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ತೀರ್ಪುಗಾರರು ಮತ್ತು ಪ್ರೇಕ್ಷಕರನ್ನು ಆಕರ್ಷಿಸಿದರು. ಈ ಮೂಲಕ ಕಿರೀಟವನ್ನು ತಮ್ಮದಾಗಿಸಿಕೊಂಡರು. ಅವರ ಜೊತೆಗೆ, ನಾಲ್ಕು ರನ್ನರ್-ಅಪ್‌ಗಳನ್ನು ಘೋಷಿಸಲಾಯಿತು: ಫಿಲಿಪ್ಪೀನ್ಸ್‌ನ ಕ್ರಿಸ್ಟಿನ್ ಜೂಲಿಯಾನ್ ಓಪಿಯಾಜಾ (1 ನೇ ರನ್ನರ್-ಅಪ್), ಮ್ಯಾನ್ಮಾರ್‌ನ ಥೆ ಸು ನೈನ್ (2 ನೇ ರನ್ನರ್ ಅಪ್), ಫ್ರಾನ್ಸ್‌ನ ಸಫಿಯೆಟೌ ಕಬೆಂಗೆಲೆ (3 ನೇ ರನ್ನರ್ ಅಪ್), ಮತ್ತು ತಾಲಿತಾ ಹಾರ್ಟ್‌ಮನ್ ಬ್ರೆಜಿಲ್ (4ನೇ ರನ್ನರ್ ಅಪ್) ಪ್ರಶಸ್ತಿ ಪಡೆದರು.
ಹಳಿಗಳ ಮೇಲೆ ದಿನವೂ ಸಂತೆ- ರೈಲು ಬರ್ತಿದ್ದಂಗೇ ಎಲ್ಲರೂ ಗಾಯಬ್- ಮತ್ತೆ ವಾಪಸ್! ಡಾ.ಬ್ರೋ ರೋಚಕ ವಿಡಿಯೋ
ರಾಚೆಲ್ ಗುಪ್ತಾ ಅವರು ಕಳೆದ ಆಗಸ್ಟ್ 11ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ ಗ್ಲಾಮಾನಂದ್ ಸೂಪರ್ ಮಾಡೆಲ್ ಇಂಡಿಯಾ 2024 ಫೈನಲ್ಸ್‌ನಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2024 ಕಿರೀಟವನ್ನು ಪಡೆದುಕೊಂಡಿದ್ದರು. ಹಲವಾರು ವಿಶೇಷ ಪ್ರಶಸ್ತಿಗಳನ್ನು ಪಡೆದಿರುವ ಈಕೆ, ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನದ ಬಳಿಕ ಈಗ ಜಾಗತಿಕ ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿಯಾಗಿ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ರಾಚೆಲ್ ಕುರಿತು ಹೇಳುವುದಾದರೆ, ಇವರು, 18 ನೇ ವಯಸ್ಸಿನಲ್ಲಿ, ಪ್ಯಾರೀಸ್ ಫ್ಯಾಷನ್ ವೀಕ್ ಸಹಯೋಗದೊಂದಿಗೆ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸೆಪ್ಟೆಂಬರ್ 28, 2022 ರಂದು ನಡೆದ ಮಿಸ್ ಸೂಪರ್‌ಟಾಲೆಂಟ್‌ನ ಹದಿನೈದನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ವಿಶ್ವಾದ್ಯಂತ ಸುಮಾರು 50 ದೇಶಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು. ರಾಚೆಲ್ ವಿಜೇತರಾಗಿ ಹೊರಹೊಮ್ಮಿದ್ದರು. ಕಳೆದ ಮೇ ತಿಂಗಳಿನಲ್ಲಿ ಗ್ಲಾಮಾನಂದ್ ಗ್ರೂಪ್ ಆಯೋಜಿಸಿದ ಮಿಸ್ ಗ್ರ್ಯಾಂಡ್ ಇಂಡಿಯಾ 2024 ಸ್ಪರ್ಧೆಗೆ ಫೈನಲಿಸ್ಟ್ ಎಂದು ರಾಚೆಲ್ ಅವರನ್ನು ಘೋಷಿಸಲಾಗಿತ್ತು.
ಆಗಸ್ಟ್ 11 ರಂದು ಗ್ರ್ಯಾಂಡ್ ಫಿನಾಲೆಯಲ್ಲಿ ವಿಜೇತರಾದರು. ಈ ಸ್ಪರ್ಧೆಯಲ್ಲಿ ಇಅವರು, ಮಿಸ್ ಟಾಪ್ ಮಾಡೆಲ್, ಬೆಸ್ಟ್ ಇನ್ ರಾಂಪ್ ವಾಕ್, ಬ್ಯೂಟಿ ವಿತ್ ಎ ಪರ್ಪಸ್ ಮತ್ತು ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಪ್ರಶಸ್ತಿಗಳನ್ನೂ ಪಡೆದುಕೊಂಡರು. ಮಿಸ್ ಗ್ರ್ಯಾಂಡ್ ಇಂಡಿಯಾ 2024 ಆಗಿ, ರಾಚೆಲ್ ಮಿಸ್ ಗ್ರ್ಯಾಂಡ್ ಸುರಬುರಿ 2025 ಸ್ಪರ್ಧೆಯ ಪ್ರಾಥಮಿಕ ಮತ್ತು ಅಂತಿಮ ಎರಡೂ ಕಾರ್ಯಕ್ರಮಗಳಿಗೆ ವಿಶೇಷ ಅತಿಥಿಯಾಗಿ ಥೈಲೆಂಡ್ಗೆ ಹೋಗಿದ್ದರು. ಅವರ ಭೇಟಿಯ ಸಮಯದಲ್ಲಿ, ಅವರು ಬ್ಯಾಂಕಾಕ್‌ನಲ್ಲಿರುವ ಸ್ಲಂ ಚೈಲ್ಡ್ ಕೇರ್ ಫೌಂಡೇಶನ್ ಅನ್ನು ಬೆಂಬಲಿಸಲು ಅವಕಾಶವನ್ನು ಪಡೆದರು. ಪ್ರತಿಷ್ಠಾನಕ್ಕೆ ಅಗತ್ಯ ವಸ್ತುಗಳನ್ನು ದಾನ ಮಾಡಿದ್ದರು.
ಬಾಲಿವುಡ್ ತಾರೆಯರ ಮರ್ಯಾದೆ ಹೀಗೆ ತೆಗೆಯೋದಾ ಕಂಗನಾ? ಬಿದ್ದೂ ಬಿದ್ದೂ ನಕ್ಕ ಪ್ರೇಕ್ಷಕರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.