ಸ್ಕ್ಯಾನ್ ಮಾಡಿದರೆ ಸಾಕು ಸಾವಿನ ದಿನಾಂಕ ಸಹಿತ ಇಡೀ ಜಾತಕ ಹೇಳುತ್ತೆ ಈ ಎಐ ಕ್ಯಾಲ್ಕುರೇಟರ್!

By Chethan Kumar  |  First Published Oct 26, 2024, 6:58 PM IST

ಸಾವು ಯಾವಾಗ ಸಂಭವಿಸುತ್ತೆ? ಇದ್ಯಾವ ಪ್ರಶ್ನೆ ಎಂದುಕೊಳ್ಳಬೇಡಿ. ಇದೀಗ ಸಾವಿನ ದಿನಾಂಕ ಹೇಳುವ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಲ್ಕುಲೇಟರ್ ಅಭಿವೃದ್ಧಿಪಡಿಸಲಾಗಿದೆ. ಸ್ಕ್ಯಾನ್ ಮಾಡಿದರೆ ಸಾಕು ಎಲ್ಲಾ ಜಾತಕ ಬಯಲಾಗಲಿದೆ.


ಲಂಡನ್(ಅ.26) ಸಾವು ಬಹುತೇಕರಿಗೆ ಭಯ ಹುಟ್ಟಿಸುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳ ವೇಳೆ ವೈದ್ಯರು ಇನ್ನೆಷ್ಟು ದಿನ ಬದುಕುತ್ತಾರೆ ಅನ್ನೋದು ಅಂದಾಜು ಮಾಡುತ್ತಾರೆ. ಆದರೆ ಇದೀಗ ಸಂಶೋಧಕರು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಲ್ಕುಲೇಟರ್  ಅಭಿವೃದ್ಧಿಪಡಿಸಿದ್ದಾರೆ. ಈ ಕ್ಯಾಲ್ಕುಲೇಟರ್ ಸಾವಿನ ದಿನಾಂಕವನ್ನು ಹೇಳುತ್ತದೆ. ಸ್ಕ್ಯಾನ್ ಮಾಡಿದರೆ ಆರೋಗ್ಯದ ಸಮಸ್ಯೆಗಳು, ಸಣ್ಣ ಸಣ್ಣ ಸಮಸ್ಯೆಗಳಿಂದ ಎದುರಾಗುವ ಅಪಾಯಗಳು ಸೇರಿದಂತೆ ಸಾವಿನ ದಿನಾಂಕವನ್ನೂ ಈ ಎಐ ಕ್ಯಾಲ್ಕುಲೇಟರ್ ಹೇಳುತ್ತದೆ. 

ಲ್ಯಾನ್ಸೆಟ್ ಡಿಜಿಟಲ್ ಹೆಲ್ತ್ ಪ್ರಕಟಿಸಿದ ವರದಿಯಲ್ಲಿ ಹೊಸ ಎಐ ಕ್ಯಾಲ್ಕುಲೇಟರ್ ಕುರಿತು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಲಂಡನ್ ಲ್ಯಾನ್ಸೆಟ್ ಸಂಶೋಧಕರು ಹೊಸ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಕ್ಯಾಲ್ಕುಲೇಟರ್ ಅಭಿವೃದ್ಧಿಪಡಿಸಿದ್ದಾರೆ. ಇದು ಹೃದಯ ಸಂಬಂಧಿಸಿತ ಪರೀಕ್ಷೆಗೆ ಬಳಸುವ ಇಸಿಜಿ ತಂತ್ರಜ್ಞಾನವನ್ನು ಮೂಲವಾಗಿಟ್ಟುಕೊಂಡು ಎಐ ಕ್ಯಾಲ್ಕುಲೇಟರ್ ಅಭಿವೃದ್ಧಿಪಡಿಸಲಾಗಿದೆ. ಇದಕ್ಕೆ ಎಐ ಇಸಿಜಿ ರಿಸ್ಕ್ ಎಸ್ಟಿಮೇಟರ್(AIRE) ಎಂದು ಹೆಸರಿಸಲಾಗಿದೆ.

Latest Videos

undefined

ಕೋವಿಡ್ ವೇಳೆ ಯಮರಾಜನಾಗಿ ಜಾಗೃತಿ ಮೂಡಿಸಿದ್ದ ಪೊಲೀಸ್ ಪೇದೆ ದುರಂತ ಅಂತ್ಯ!

ಎಐ ಎಲೆಕ್ಟ್ರೋಕಾರ್ಡಿಯೋಗ್ರಾಮ್(ECGs)ನಲ್ಲಿ ಸ್ಕ್ಯಾನ್ ಮಾಡಿದರೆ ಸಾಕು. ಈ ಎಐ ಕ್ಯಾಲ್ಕುಲೇಟರರ್ ಆರೋಗ್ಯದಲ್ಲಿನ ಸಮಸ್ಯೆಗಳನ್ನು ಹೇಳಲಿದೆ. ಜೊತೆಗೆ ಸಾವಿನ ದಿನಾಂಕವನ್ನೂ ಅಂದಾಜು ಮಾಡಲಿದೆ ಎಂದು ಅಧ್ಯಯನ ಬಹಿರಂಗಪಡಿಸಿದೆ. ಭವಿಷ್ಯದಲ್ಲಿ ಹೃದಯ ಸಂಬಂಧಿಸಿದ ಸಮಸ್ಯೆ, ಹಾರ್ಟ್ ಫೈಲ್ಯೂರ್‌ಗಳನ್ನು ಈ ಕ್ಯಾಲ್ಕುಲೇಟರ್ ಊಹಿಸಲಿದೆ.

ಸಂಶೋಧಕರು ಈ ಎಐ ಕ್ಯಾಲ್ಕುಲೇಟರ್ ಅಭಿವೃದ್ಧಿ ಹಾಗೂ ಅಧ್ಯಯನ ವೇಳೆ ಶೇಕಡಾ 78 ರಷ್ಟು ನಿಖರತೆ ಫಲಿತಾಂಶ ಹೊರಬಿದ್ದಿದೆ. AIRE ಮೂಲಕ ಸ್ಕ್ಯಾನ್ ಮಾಡಿದ  ರೋಗಿಗಳ ಆಯಸ್ಸನ್ನು ಇದು ಹೇಳಿದೆ. ಕಳೆದ 10 ವರ್ಷಗಳಿಂದ ಈ ಅಧ್ಯಯನ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ಎಐ ತಂತ್ರಜ್ಞಾನ ಅಳವಡಿಸಲಾಗಿದೆ. ಇದೀಗ ನಿಖರತೆ ಹಾಗೂ ಅಪಾಯದ ಮುನ್ಸೂಚನೆ ನಿಖವಾಗಿ ಹೇಳುತ್ತಿದೆ ಎಂದು ಸಂಶೋದಕರು ಹೇಳಿದ್ದಾರೆ. ಶೇಕಡಾ 78ರಷ್ಟು ಸ್ಪಷ್ಟ ಮಾಹಿತಿಯನ್ನು ಇದು ನೀಡಿದೆ ಎಂದು ವರದಿಯಾಗಿದೆ.

ಅಧ್ಯಯನದ ವೇಳೆ ಲ್ಯಾನ್ಸೆಟ್ ಸಂಶೋಧಕರು 1,89,539 ರೋಗಿಗಳ ಪರೀಕ್ಷಿಸಿದ್ದಾರೆ. 1.16 ಮಿಲಿಯನ್ ಇಸಿಜಿ ಪರೀಕ್ಷೆ ಮಾಡಿ ಅಧ್ಯಯನ ಮಾಡಿದ್ದಾರೆ. ಈ ಡೇಟಾಗಳ ಆಧಾರದ ಮೇಲೆ ತಂತ್ರಜ್ಞಾನದ ನೆರವಿನ ಮೂಲಕ ಫಲಿತಾಂಶ ನೀಡಲಾಗುತ್ತಿದೆ. ಅಧ್ಯಯನದಲ್ಲಿ ಎಐ ಚಾಲಿತ ಕ್ಯಾಲ್ಕುಲೇಟರ್ ಯಶಸ್ವಿಯಾಗಿದೆ. ಮುಂದಿನ ವರ್ಷ ಲಂಡನ್‌ನ ಎರಡು ಆಸ್ಪತ್ರೆಗಳಲ್ಲಿ ಈ ಕ್ಯಾಲ್ಕುಲೇಟರ್‌ನ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. ಪ್ರಮುಖವಾಗಿ ಆರೋಗ್ಯದ ಅಪಾಯದ ಮುನ್ಸೂಚನೆಗಾಗಿ ಈ ಎಐ ಕ್ಯಾಲ್ಕುಲೇಟರ್ ಬಳಸಲು ಚಿಂತಿಸಲಾಗುತ್ತಿದೆ.

ಆದರೆ ಸಾವಿನ ದಿನಾಂಕ ಹೇಳುವ ಎಐ ಸ್ಕ್ಯಾನಿಂಗ್ ಕ್ಯಾಲ್ಕುಲೇಟರ್ ಬಳಕೆ ಮನುಷ್ಯನ ಆಯಸ್ಸು ಕಡಿಮೆ ಮಾಡಲಿದೆ ಅನ್ನೋ ವಾದವೂ ಹುಟ್ಟಿಕೊಂಡಿದೆ. ಸಾವಿನ ದಿನಾಂಕ ಮೊದಲೇ ಗೊತ್ತಾದರೆ ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇದೆ. ಸಾವಿನ ದಿನಾಂಕ ಅರಿತು ಜೀವನ ಎಂಜಾಯ್ ಮಾಡುವವರ ಸಂಖ್ಯೆ ತೀರಾ ಕಡಿಮೆ. ಸಾವನ್ನು ಧೈರ್ಯದಿಂದ ಎದುರಿಸುವವರ ಸಂಖ್ಯೆಯೂ ಕಡಿಮೆ. ಹೀಗಾಗಿ ಸಾವಿನ ದಿನಾಂಕ ಮೊದಲೇ ಬಹಿರಂಗಪಡಿಸಿದರೆ ಮಾನಸಿಕವಾಗಿ ಕುಗ್ಗಿ ಹೋಗಿ ಆರೋಗ್ಯ ಮತ್ತಷ್ಟು ಹದಗೆಡಲಿದೆ. ಇಷ್ಟೇ ಅಲ್ಲ ಎಐ ಊಹಿಸಿದ ಸಾವಿನ ದಿನಾಂಕಕ್ಕೂ ಮೊದಲೇ ವ್ಯಕ್ತಿ ಮೃತಪಡುವ ಸಾಧ್ಯತೆ ಇದೆ. ಹೀಗಾಗಿ ತಂತ್ರಜ್ಞಾನವನ್ನು ಈ ರೀತಿ ಬಳಕೆ ಮಾಡುವುದು ನಿರ್ಬಂಧಿಸಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಪದೇ ಪದೇ ಕನಸಲ್ಲಿ ಸತ್ತವರು ಕಾಣಿಸಿಕೊಂಡು ಅಳ್ತಾ ಇದ್ರೆ ಏನಾಗುತ್ತೆ ಗೊತ್ತಾ?

ಹೊಸ ಎಐ ಕ್ಯಾಲ್ಕುಲೇಟರ್‌ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಕಾನ್ ಮಾಡಿ ಸಾವಿನ ದಿನಾಂಕ ಗೊತ್ತಾದರೆ ಬದುಕಿನಲ್ಲಿ ಮಾಡಬೇಕಾದ ಕೆಲಸ, ಜೀವನ ಆನಂದಿಸಲು ಪ್ಲಾನ್ ಮಾಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. 

click me!