
ಸುಲಭವಾಗಿ ತೂಕ ಇಳಿಕೆ ಎಂದರೆ ನಡು ವಯಸ್ಸಿನ ಪುರುಷ, ಮಹಿಳೆಯರ ಕಿವಿ ನೆಟ್ಟಗಾಗುತ್ತದೆ. ಸುಲಭವಾಗಿ ತೂಕ ಕಡಿಮೆ ಮಾಡೋ ಜಿಮ್‌ನಲ್ಲಿ ಬಳಸುವ ಬರ್ನಿಂಗ್ ಝೋನ್ ಬಗ್ಗೆ ನಿಮ್ಮಗೆಷ್ಟು ಗೊತ್ತು? ನೀವು ಅದನ್ನು ಸರಿಯಾದ ಕ್ರಮದಲ್ಲಿ ಬಳಸುತ್ತಿದ್ದೀರಾ?
ತೂಕ ಇಳಿಸೋಕೆ ಒಂದೆರಡು ವ್ಯಾಯಾಮ ಮಾಡಿದರೆ ಸಾಲದು. ಅಲ್ಲಿ ಬಳಸುವ ಕೆಲವೊಂದು ಉಪಕರಣಗಳ ಬಗ್ಗೆಯೂ ತಿಳಿದುಕೊಂದರೆ ಅನುಕೂಲ.
ಹೊಟ್ಟೆ ಕರಗಿಸಲು ಜಿಮ್‌ನಲ್ಲಿ ಕಾರ್ಡಿಯೋ (Cardio excercsie) ಕಸರತ್ತು ಮಾಡಿಸುತ್ತಾರೆ. ಹಾಗೆ ತೊಡೆ, ಸೊಂಟ, ಕೈ ಬೊಜ್ಜು ಕರಗಿಸಲೂ ಬರ್ನಿಂಗ್ ಉಪಕರಣದಿಂದ ವ್ಯಾಯಾಮ ಮಾಡಿಸುತ್ತಾರೆ.
ಫ್ಯಾಟ್ ಬರ್ನರ್ ಝೋನ್‌ನಲ್ಲಿ ಮಾಡುವ ವ್ಯಾಯಾಮ ಹೃದಯ ಬಡಿತಗಿಂತ ಶೇ.50 ಹೆಚ್ಚಿರುತ್ತದೆ. ಹಿತವಾಗಿ ವ್ಯಾಯಾಮ ಮಾಡಿದರೆ, ಕ್ಯಾಲೋರಿಸ್ ಮಾತ್ರ ಕಡಿಮೆ ಮಾಡುತ್ತದೆ. ಹೆಚ್ಚು ಶ್ರಮ ಹಾಕಿ ಗಂಟೆಗಟ್ಟಲೆ ಬರ್ನರ್ ಮೇಲೆ ವ್ಯಾಯಾಮ ಮಾಡಿದರೆ ಕೆಟ್ಟ ಕೊಬ್ಬು(ಫ್ಯಾಟ್ ) ಕರಗುತ್ತದೆ, ಎನ್ನುತ್ತಾರೆ ಫಿಟ್ನೆಸ್ ಎಕ್ಸ್‌ಪರ್ಟ್ಸ್.
ತೂಕ ಕಡಿಮೆ ಇಲ್ಲಿದೆ ಟಿಪ್ಸ್, ಮಾಡ್ಲಿಕ್ಕೇನೂ ಕಷ್ಟವಲ್ಲ, ಮನಸು ಮಾಡಿಬಿಡಿ...
ದೇಹದಲ್ಲಿರುವ ಕಾರ್ಬೋಹೈಡ್ರೇಟ್ ಅಂಶವನ್ನು ಎನರ್ಜಿ ಆಗಿ ಬದಲಾಯಿಸುತ್ತದೆ. ಅಲ್ಲದೇ ಕೆಟ್ಟ ಕೊಬ್ಬ (ಫ್ಯಾಟ್)ನ್ನು ಕರಗಿಸಿ ಸಣ್ಣ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತದೆ ಫ್ಯಾಟ್ ಬರ್ನರ್ ಝೋನ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.