ಬೇಸಿಗೆಯಲ್ಲಿ ಹ್ಯಾಪಿಯಾಗಿರಲು ಪಂಚಸೂತ್ರಗಳು!

By Web DeskFirst Published Mar 25, 2019, 10:12 AM IST
Highlights

ಬೆಂಕಿ ಬಿಸಿಲಿಗೆ ಕಿರಿಕಿರಿ, ಕೆಲಸಕ್ಕೆ ಕೈ ಹಚ್ಚಿದರೆ ಶಕ್ತಿ ಎಲ್ಲ ಸೋರಿ ಹೋದಂತಾಗಿ ಸ್ವಲ್ಪ ಹೊತ್ತಿಗೇ ಆಯಾಸ. ಎಲ್ಲದರೂ ತಣ್ಣಗೆ ಕೂತಿರೋಣ, ಎದ್ದು ಓಡಾಡೋದೆ ಬೇಡ ಅನ್ನೋ ಹಾಗಿರುತ್ತೆ. ಅಷ್ಟಕ್ಕೂ ಮೂಡ್ ಕೆಡಿಸಿಕೊಳ್ಳದೇ ಈ ಬೇಸಿಗೆಯನ್ನು ಸಹನೀಯವಾಗಿಸೋದು ಹೇಗೆ?

ಹೊಸತಿಗೆ ಶರಣು

ಮಾಡೋ ಕೆಲಸ ಹಳೆಯದೇ ಇರಲಿ. ಅದರಲ್ಲೇನೋ ಹೊಸತನ ತರಲು ಪ್ರಯತ್ನಿಸಬಹುದು. ಆಗ ಏಕತಾನತೆ ಹೋಗುತ್ತೆ, ಹುಮ್ಮಸ್ಸು ಹೆಚ್ಚುತ್ತೆ. ಕೆಲಸ ಅಂದಮೇಲೆ ಚಾಲೆಂಜ್‌ಗಳು ಸಹಜ. ಅದನ್ನು ನಗುಮುಖದಿಂದ ಸ್ವಾಗತಿಸಿದರೆ ಹೆಚ್ಚು ಅಪ್ಯಾಯಮಾನವಾಗುತ್ತೆ. ಮನಸ್ಸಿಲ್ಲದ ಮನಸ್ಸಿಂದ ಮಾಡಲು ಹೊರಟರೆ ತಲೆನೋವು ಹೆಚ್ಚು, ಹಾಗಂತ ಕೆಲಸದಲ್ಲೇನೂ ವ್ಯತ್ಯಾಸ ಆಗಲ್ಲ. ಇದರ ಜೊತೆಗೆ ನಮ್ಮ ಹೇರ್‌ಸ್ಟೈಲ್, ಡ್ರೆಸಿಂಗ್ ಸ್ಟೈಲ್‌ನಲ್ಲೂ ಹೊಸತೇನಾದರೂ ಪ್ರಯೋಗ ಮಾಡಬಹುದು. 

ಬೇಗ ಬೆಳಗಾಗ್ಲಿ

ಕೆಲವು ದಿನಗಳ ಹಿಂದೆ ಚಳಿ ಹೆಚ್ಚಿತ್ತು. ತಣ್ಣನೆಯ ಹವೆಗೆ ಹೊದ್ಕೊಂಡು ಮಲಗೋದೇ ಮಜಾ ಅನಿಸ್ತಿತ್ತು. ಆದರೆ ಈಗ ಚಳಿಯ ಜಾಗದಲ್ಲಿ ಆಹ್ಲಾದಕರ ಬೆಚ್ಚನೆಯ ಹವೆ ಇದೆ. ಬೆಳಗ್ಗೆ ಸುಲಭವಾಗಿ ಹಾಸಿಗೆ ಬಿಟ್ಟೇಳಬಹುದು. ಬೇಗ ಏಳೋದರಿಂದ ಮನಸ್ಸೂ ಇಡೀ ದಿನ ಫ್ರೆಶ್ ಇರುತ್ತೆ. ರಾತ್ರಿ ಚೆನ್ನಾಗಿ ನಿದ್ದೆನೂ ಬರುತ್ತೆ. ಹಾಗಂತ ರಾತ್ರಿ ಮಲಗೋದು ಲೇಟ್ ಮಾಡಬೇಡಿ. ನಿದ್ದೆಗೆಟ್ಟು ಮತ್ತೇನೋ ಸಮಸ್ಯೆ ಆದರೆ ಕಷ್ಟ.

ಹವ್ಯಾಸಗಳಿಗೆ ಮರುಜೀವ

ಟೈಂ ಇಲ್ಲ ಅನ್ನುವ ಸಾರ್ವಕಾಲಿಕ ಸುಲಭ ನೆವವನ್ನು ಬದಿಗಿಟ್ಟು, ಹವ್ಯಾಸಕ್ಕೆ ನೀರೆರೆದರೆ ಖುಷಿ ಹೆಚ್ಚಾಗುತ್ತೆ. ಟೈಮ್ ಮಾಡ್ಕೊಬೇಕು ಅಂತ ಗಟ್ಟಿ ಮನಸ್ಸು ಮಾಡಿದರೆ ಟೈಮ್ ಹೇಗೇ ಅಡ್ಜೆಸ್ಟ್ ಆಗುತ್ತೆ. ದಿನದ ೨೪ ಗಂಟೆಯಲ್ಲಿ ನಮಗಾಗಿ ಒಂದರ್ಧ ಗಂಟೆ ಮೀಸಲಿಡೋದು ಕಷ್ಟ ಅಲ್ಲ ಅನಿಸುತ್ತೆ. ಹವ್ಯಾಸಗಳು ನಮ್ಮನ್ನು ನಾವು ಕಂಡುಕೊಳ್ಳಲು ಬೆಸ್ಟ್ ದಾರಿ. ಟ್ರೆಕ್ಕಿಂಗ್, ಟ್ರಾವೆಲಿಂಗ್‌ನಂಥ ಹವ್ಯಾಸಗಳಿಗೆ ಬೇಸಿಗೆಯೇ ಬೆಸ್ಟ್.

ಸೋಮಾರಿತನಕ್ಕೂ ಬೇಸಿಗೆಗೂ ಆಗಿಬರಲ್ಲ.

ಸಂಜೆಯಾದರೆ ಸೀರಿಯಲ್ ಅಂತ ಟಿ.ವಿ ಮುಂದೆ ಕೂರೋ ಜನಕ್ಕೆ ಇದು ಹೆಚ್ಚು ಅನ್ವಯಿಸುತ್ತೆ. ಆ ಕ್ಷಣಕ್ಕೆ ಸೀರಿಯಲ್‌ನಿಂದ ಖುಷಿ ಸಿಗಬಹುದು. ಆದರೆ ನಿಮ್ಮ ಬೆಳವಣಿಗೆಗೆ ಪೂರಕವಾದದ್ದು ಇದರಲ್ಲಿ ಏನೇನೂ ಇಲ್ಲ. ಸಮಯ ಹಾಳು, ಸೋಮಾರಿತನ ಹೆಚ್ಚುತ್ತೆ ಅನ್ನೋದು ಇದರ ಸೈಡ್‌ಎಫೆಕ್ಟ್‌ಗಳು. ಏಕೆಂದರೆ ಬೇಸಿಗೆಯಲ್ಲಿ ಮೂಡ್ ಸ್ವಿಂಗ್ ಆಗೋದು ಬಹಳ ಬೇಗ. ಸೀರಿಯಲ್‌ಗಳು ನೆಗೆಟಿವ ಪರಿಣಾಮ ಬೀರಬಹುದು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ.

ಫ್ರೆಂಡ್ಸ್‌ಗೆ ಹಾಯ್ ಅನ್ನಿ.

ಕೆಲಸ, ಬ್ಯುಸಿ ಅಂತ ಫ್ರೆಂಡ್ಸ್‌ಗಳಿಂದ ದೂರ ಇರುವವರು ಟೈಮ್ ಮಾಡ್ಕೊಂಡು ಫ್ರೆಂಡ್ಸ್ ಜೊತೆಗೆ ಅಲೆದಾಡಲು ಇದು ಬೆಸ್ಟ್. ಸಮಾನ ಮನಸ್ಕ ಗೆಳೆಯರು ಹೇಳುವ ಎಷ್ಟೋ ವಿಚಾರಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಸಣ್ಣಪುಟ್ಟ ಕಿರಿಕಿರಿಗಳಿಗೆ, ಸಮಸ್ಯೆಗೆ ಪರಿಹಾರ ತಂದುಕೊಡುತ್ತದೆ. ಮನಸ್ಸಲ್ಲಿರೋದನ್ನೆಲ್ಲ ಬಿಚ್ಚಿಟ್ಟು ಹಗುರಾಗಬಹುದು. ಇದನ್ನು ಸೀರಿಯಲ್, ನೆಟ್ ಫ್ಲಿಕ್ಸ್‌ಗಳು ಕೊಡೋ ಸಾಧ್ಯತೆ ಕಡಿಮೆ. 

 

 

 

click me!